ಪುಟ:ಮಾತೃನಂದಿನಿ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

 32

                       ಸತಿ ಹಿತೈಷಿಣೀ
ನ್ನರೂ,ಅಧ್ಯಯನಶೀಲರೂ ಆಚಾರನಿಷ್ಠರೂ,ವೈದಿಕರೂ ಆದ ಹಿರಿಯರನ್ನು ತಿರಸ್ಕರಿಸುವೆಯಲ್ಲವೇ? ಒಳ್ಳೆಯದು!'
   ಸ್ವರ್ಣ:- "ತಾತಯ್ಯಾ! ನೀವು ಹೇಗಾದರೂ ಹಳಿದರಾಡಿರಿ,ನಮ್ಮ ನಂದಿನಿಯ ಬುದ್ದಿ-ಚಾತುರ್ಯಗಳು ಬೇರೆ ನಿಮಗೆ ಬರಲಾರವು!”
   ನಂದಿನಿ:-ಸ್ವಣಾ೯ ! ಹಾಗೆ ಹೇಳಲಾಗದು; ಸುಮ್ಮನಿರು. ಎಷ್ಟಾದರೂ,ಅವರು ಹಿರಿಯರು.
  ಗಣೇಶ:-"ಇದು ಒಂದು ಚಾಟೂಕ್ತಿಯೇ ಸರಿ! ಚೆನ್ನಾಗಿದೆ! ಕಂಕುಳಲ್ಲಿ ದೊಣ್ಣೆ ; ಕೈಯಲ್ಲಿ ಶರಣು!” ಅಹುದು! ಇದೇ ಈ ಕಾಲದ ನಾಗರಿಕತೆ!! ನಮ್ಮಿಂದ ದೇಶಮಾತೆ, ಬಂಜೆಯಾಗಿ ನಶಿಸುತ್ತಿರುವಳು! ನೀನಾದರೂ, ಉದ್ಧರಿಸಬಹುದಲ್ಲ; ತಡೆಯೇಕೆ?”
  ನಂದಿನಿ:-ಈ ಮಾತುಗಳಿಂದ ಒಂದು ವಿಧವಾದ ಆವೇಶದಿಂದ ಬೀಗದಂತಾಗಿ "ಮಹಾಶಯ! ಪುರುಷರ ಇಹಪರಸುಖ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಚತುರ್ವಿಧ ಪುರುಷಾರ್ಥ)ಕ್ಕೂ ಆಧಾರಪಾತ್ರೆಯರಾಗಿ, ಅನುವರ್ತಿಸಬೇಕಾಗಿರುವ ಸ್ತ್ರೀ ವರ್ಗವನ್ನು, ಸರಿಯಾದ ವಿದ್ಯಾ-ಬುದ್ದಿಗಳಿಂದ ಧರ್ಮಮಾರ್ಗದಲ್ಲಿ ದೃಢಪಡಿಸಲೊಲ್ಲದೆ, ಅವರನ್ನು ವಿವಿಧ ನಿರ್ಬಂಧಗಳಿಗೆ ಗುರಿಮಾಡಿ,ಅವರ ಸ್ವಭಾವಸಿದ್ಧವಾಗಿರುವ ಬುದ್ದಿ, ಗಾಂಭೀರ್ಯ,ಉಹಾದೋಹ ವಿಚಾರಗಳೇ ಮೊದಲಾದ ಗುಣಗಳನ್ನು ಮಣ್ಣು ಪಾಲುಮಾಡಿ, ಕೇವಲ ನಿರ್ದಯರಾಗಿ ಅವರನ್ನು ಪಶುಜೀವಿಗಳೆ೦ಬ ಅಪವಾದಕ್ಕೆಡೆಯಾಗಿತ್ತು, ನಿರಂತರವೂ ನರಲಿಸುತ್ತಿರುವ ಪುರುಷರೆಂಬ ಕಟುಕರಾದ ನಿಮ್ಮವರ ಕಲ್ಲೆದೆ. ಕರಗಿ-ನೀರಾಗಿ ಸುರಿವುದಕ್ಕೆ ಮೊದಲು, ತಾಯಿ, ಅಕ್ಕ, ತಂಗಿಯರೆಂಬ ಸದ್ಭಾವನೆಯಿಂದ ಮಹಿಳಾ ಸ೦ತಾನವನ್ನು ಸಂಭಾವಿಸುವಂತಾಗಲಿಕ್ಕೆ ಮೊದಲು, ನಮ್ಮ ದೇಶಮಾತೆ, ಹೇಗೆ ಅಭ್ಯುದಿತೆಯಾಗಬೇಕು?'
    "ಮಹಾಶಯ! ನೀವು ನಿಮ್ಮ ಮಕ್ಕಳನ್ನು ಬಾಲ್ಯವಿವಾಹವೆಂಬ ಕಟ್ಟಳೆಯಲ್ಲಿ ಕೆಡಹುವ ಪ್ರಯತ್ನಕ್ಕೆ ನಿಂತು, ವಯೋ-ವಿದ್ಯಾ-ಗುಣ-ಶೀಲಗಳಲ್ಲಿ ಪರಸ್ಪರ ಹೊಂದಿಸಲಾಗದ ಸಂಬಂಧವೆಂಬ ಆಳವಾದ ಭಾವಿಗೆ ತಳ್ಳಿ, ಅವರನ್ನು ನೀವಾಗಿ ಕೆಡಿಸುತ್ತಿರುವಿರಿ! ಅವರು, ಜ್ಞಾನಮಯ ಪ್ರಪಂಚವನ್ನು