ಪುಟ:ಮಾತೃನಂದಿನಿ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ 33 ಕಾಣುವುದಕ್ಕೆ ಪ್ರತಿಯಾಗಿ, ಕಾಮ, ಕ್ರೋಧ, ಅಹಂಕಾರ, ಮಾತ್ಸರ್ಯಾದಿ ತಾಮಸ ಪ್ರಪಂಚದಲ್ಲಿಯೇ ಸಿಕ್ಕಿ, ಭ್ರಾಂತಿಯಿಂದ ಕರ್ತವ್ಯವನ್ನರಿಯಲಾರದೆ ಅಪ್ರಯೋಜಕರೆನ್ನಿಸುತ್ತಿರುವುದನ್ನೂ ನೋಡಿರುವಿರಿ. ಒಂದುವೇಳೆ ಅವರು ನಯ-ಭಯಗಳಿಂದ ವರ್ತಿಸುವರೆಂದು ಹೇಳುವುದಾದರೆ ಕೂಡ, ಸುಗುಣ - ಸಮಾಲೋಚನಾದಿಗಳಿಂದ ಮನೋ-ಬುದ್ಧಾದಿ ಪ್ರತ್ಯಂಗಗಳೂ ಚೆನ್ನಾಗಿ ಬೆಳೆದು ದೃಢವಾಗುವುದಕ್ಕೆ ಮೊದಲೇ ಅವರನ್ನು ಗಭೀರಸಂನಾರಚಕ್ರ ವೇಗಕ್ಕೆ ಗುರಿಮಾಡಿಟ್ಟು, ಅವರು ಅಶಕ್ತಿ-ಅಧೈರ್ಯಗಳಿಂದುಂಟಾಗುವ ಬಗೆ ಬಗೆಯ ರೋಗ-ಲೋಕ-ಸಂತಾಪಗಳಿಂದ ಕಂದಿ-ಕುಂದುವುದನ್ನು ನೋಡಿ ಯೂ ಸುಮ್ಮನಿರುವಿರಿ. ಇದು ನಿಮ್ಮ ತಪ್ಪೆಂದು ತಿಳಿದೂ ತಿಳಿಯದವರಂತೆ ಅವರವರ ಅದೃಷ್ಟಾಯವೆಂದೂ, ಎಲ್ಲವೂ ದೈವೇಚ್ಛೆಯೆಂದೂ ನಿರ್ವಿಚಾರ ವಾಗಿ ಹೇಳುತ್ತಿರುವಿರಿ. ಇನ್ನಾದರೂ ತಿಳಿಯಿರೇನು? ಆ ನಿಮ್ಮ ಬುದ್ದಿ ತಿಳಿಯದ ಹುಡುಗಿಯರು, ತಾವಾಗಿಬಂದು, ತನ್ನನ್ನು ಸಂರಚಕ್ರಗತಿಗೆ ಈಗಲೇ ಬಲಿಯಾಗಿ ಒಪ್ಪಿಸಿಬಿಡಬೇಕೆಂದು' ನಿಮ್ಮನ್ನು ಕಾಡಲಿಲ್ಲವಷ್ಟೆ? ಹಾಗಾರರೆ, ಅವರನ್ನೆ ಕೆ ಹಾಗೆ ಮುರ್ಖರಾಗುವಂತೆ ಮಾಡಬೇಕು? ಬಾಲ್ಯಶಿಕ್ಷಣದಲ್ಲಿ ಅವರಿಗೆ ತಕ್ಕಷ್ಟೂ ವಿದ್ಯಾ-ವಿವೇಚನಾದಿಗಳಿಗೆ ಅವಕಾಶ ನನ್ನೆ ಕೆ ಕೊಡಬಾರದು? ಆ ನಿಮ್ಮ ಗೃಹಿಣಿಯರ, ನಿಮ್ಮ ಮನೆಗಳಲ್ಲಿ, ಅಡಲಿಕ್ಕೆ ಮಾತ್ರವೇ ಗೊತ್ತಾಗಿ ಬಂದಿರುವ ತೂತುಗಳೆಂದೇ ತಿಳಿರ್ದಿುವಿ ರಲ್ಲವೇ? ಅವರು, ನಿಮಗೆ ಶಕ್ತಿಸ್ವರೂಪರಾಗಿದ್ದು ನಿಮ್ಮನ್ನು ಕಾಲೋಚಿತ ರೀತಿ-ನೀತಿಗಳಿಂದ ಪ್ರೋತ್ಸಾಹಿಸುತ್ತ, ನಿಮ್ಮ ಸುಖ-ಭೋಗ-ಸಂಪದಗಳೆ ಲ್ಲಕ್ಕೂ ಆಶ್ರಯರಾಗಿರಬೇಡವೇ ? ಅದಕ್ಕಾಗಿ ಅವರಿಗೆ ವಿದ್ಯೆಯ ತಕ್ಕಂತೆ ಪ್ರೋತ್ಸಾಹವೂ ಮತ್ತೂ ನಿಮ್ಮವರ ಸಹಾಯಸಂಪತ್ತಿಯ ಅವಶ್ಯಕವಾಗಿ ಬೇಡವೇ ? ತಿಳಿದು ಹೇಳಿರಿ! | - ಮಹಾಶಯರೇ! ನೀವು ಭಾಷಾಭಿಜ್ಞರೂ, ಜ್ಞಾನಸಂಪನ್ನ ರೂ ಆಗಿರ ಬಹುದು ಆದರೂ, ಆನಿಮ್ಮ ಶಾಸ್ತ್ರಜ್ಞಾನವನ್ನು ಕಾರ್ಯಕರಣಗಳಲ್ಲಿಯೂ ಅನ್ವಯಿಸುವಂತೆ ಮಾಡಿಕೊಳ್ಳುವ ಶಕ್ತಿ, ನಿಮಗಿನ್ನೂ ಉcಟಾದಂತೆ ಕಾಣ ಲಿಲ್ಲ! ಆತ್ರೋನ್ನತಿಗೆ ಮಾರ್ಗವೇನೆಂದಾದರೂ ವಿಚಾರಮಾಡಿರುವಂತೆ ತೋರಲಿಲ್ಲ! ಈನಿಮ್ಮ ಅಭಿಮಾನವು ನಶಿಸಿ, ಸುಬೋಧರಾಗವು ತಲೆದೋರು