ಪುಟ:ಮಾತೃನಂದಿನಿ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

34 ಸತೀ ಹಿತೈಷಿಣಿ ನವರೆಗೂ ನಮ್ಮ ದೇಶಮಾತೆ, ಅಭ್ಯುದಯಕ್ಕೆ ಬರುವುದೆಂದರೇನು? ನಿಮ್ಮ ವರ ಸ್ವಾರ್ಥಪರತೆಯಿಂಗುವವರೆಗೂ, ಜಡ ಪ್ರಾಣಿಗಳಾಗಿ ನಮೆದು ಹೋಗುತ್ತಿರುವ ನಮ್ಮ ಸೋದರಿಯರು, ಅಭ್ಯುದಯವನ್ನು ಕಾಣುವ..... (ಮುಂದೆ ನಂದಿನಿಯಿಂದ ಮಾತು ಹೊರಡಲಿಲ್ಲ. ಕಣ್ಣೀರುತುಂಬಿ, ಮೌನದಿಂದ ತಲೆಬಾಗಿ ಕುಳಿತುಬಿಟ್ಟಳು. ನಂದಿನಿಯ ಕಣ್ಣಿಂದ ನೀರು ಸೋರುತ್ತಿದ್ದುದನ್ನು ನೋಡಿ, ಸ್ವರ್ಣಕುಮಾರಿಯೂ ಅಳುತ್ತ ಕುಳಿತಳು. ನಾದಾನಂದನೂ ಸಂಭ್ರಾಂತನಾಗಿ ಕುಳಿತು ನೋಡುತ್ತಿದ್ದನು. ವಿಶ್ವನಾಥ, ಗಣೇಶ ಮೊದಲಾದವರ ಬಾಯಿಂದ ಯಾವ ಮಾತೂ ಹೊರಡಲಿಲ್ಲ; ಉದರ ಗುಹೆಗೆ ಎಲೆಗಳಲ್ಲಿದ್ದ ಭಕ್ಷ್ಯಗಳನ್ನು ಅವಸರದಿಂದ ತುಂಬುತ್ತಿದ್ದರು.) ನಗೇಶ:-ಮೃದುಸ್ವರದಿಂದ-ತಾಯಿ! ನಂದಿನಿ! ಎಚ್ಚರಿಕೆ!! ಭಗವತಿಯೊಲ್ಮೆಯಿರುವಲ್ಲಿ ನಿನಗೇಕೆ ಶಂಕೆ? ' ನಂದಿನಿ:-ತಲೆಯೆತ್ತಿ ಸ್ಥಿರಭಾವದಿಂದ ಮತ್ತೆ, -" ಗುರುಸಮರೇ! ಕ್ಷಮಿಸಿರಿ! ಹಿಂದೆ ನಡೆದ ವಿಚಾರವು ನೆನಪಿಗೆಬಂದು ನಿಮ್ಮಲ್ಲಿ ಸಹನೆಯಿಲ್ಲದೆ ಶೋಕಾತಿರೇಕದಿಂದ ಮೆರೆದು, ಮೆಯ್ಮರೆದು ಹೇಳಿದ ನನ್ನ ಕಟೂಕ್ತಿಗಳಿಗಾಗಿ ಕೆರಳದೆ ಕ್ಷಮಿಸಿರಿ! ದೈವವಿಲಾಸವು ಹಾಗಿದ್ದುದರಿಂದ ನೀವು ಹಾಗೆ ಮಾಡಿದಿರೇ ಹೊರತು ಬೇರಿಲ್ಲ, ನಡೆದುದನ್ನು ಕುರಿತ. ಈಗ ವಿಚಾರಪಡುವುದು ನಿಷ್ಫಲ; ಇಂದಿನ ನನ್ನ ಅಪಚಾರಕ್ಕಾಗಿ ಪಶ್ಚಾತ್ತಾಪವೇ ನನಗೆ ಪ್ರಾಯಶ್ಚಿತ್ತವಾಗಿರಲಿ. ಆದರೂ, ಮತ್ತೊಂದು ಮಾತನ್ನು ಹೇಳಲಾರೆನು. ತಾವು ನನ್ನನ್ನು ಸ್ವೇಚ್ಛಾಚಾರಿಣಿಯೆಂದು ಹೇಳಿದಿರಿ. ಹಾಗೆಂದೂ ತಿಳಿಯಬಾರದು. ನಾನು ಭಿಕ್ಷುಕನ ಮಗಳಾಗಿದ್ದರೂ ಭಗವತೀಕಟಾಕ್ಷದಿಂದ ನನಗೆ ತಕ್ಕಷ್ಟೂ ಆಶ್ರಯಸಂಪತ್ತಿ ದೊರೆತೇ ಇರುವುದು. - ಮತ್ತೊಂದು ವಿಚಾರ:-ವಿದ್ಯೆಯಿಂದ ಕೇಡೆಂದಿಗೂ ಉಂಟಾಗದು. ಬಾಲ್ಯದಿಂದ ಮಕ್ಕಳಿಗೆ ಸುಶಿಕ್ಷಾರೂಪವಾದ ವಿದ್ಯಾಭ್ಯಾಸಮಾಡಿಸಿದರೆ, ಅದರಿಂದ ಅನಂತಸುಖವುಂಟು. ಅಶಿಕ್ಷಿತೆಯರಿಗೆ ಬಾಲ್ಯವಿವಾಹವಾದರೂ, ಅವರು ನಮ್ಮ ನಿರ್ಬಂಧಕ್ಕೆ ಒಳಪಡುವರೆಂಬುದು ಸುಳ್ಳು! ಅವರ ಕುಮಾರ್ಗವು, ಅವರಿಗೆ ಸಿದ್ಧವಾಗಿಯೇ ಇರುವುದು. ಆದರೆ, ಬಾಲ್ಯದಿಂದ ಸುಶಿ