ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃನಂದಿನಿ 35 ಕ್ಷಿತೆಯರಾಗಿದ್ದರೆ, ಅವರು, ಅವಿವಾಹಿತೆಯರಾಗಿಯೇ ಇದ್ದರೂ, ವಿಷಯಾಭಿಲಾಷೆಯಿಂದ ಮನಸ್ಸನ್ನು ಹೊಲಗೆಡಿಸುವ ಮೂರ್ಖರಾಗರು. ಇದಕ್ಕೆ ಉದಾಹರಣೆಗೆಂದರೆ, ನಿಮ್ಮ ಸುತ್ತಮುತ್ತಲಿರುವವರನ್ನೇ ನೋಡಿ ತಿಳಿಯಬಹುದು! ಅಂತವರಲ್ಲಿಯೂ, ವಿಧವೆಯವರಾಗಿಯೋ ಅಥವಾ ವಿರಹಿಣಿಯರಾಗಿಯೋ ಇದ್ದು, ಗುಪ್ತ ಮಾರ್ಗದಲ್ಲಿ ತಿರುಗುತ್ತಿರುವವರೆಷ್ಟು ಮಂದಿಯೆಂಬುದನ್ನು ಎಣಿಸಿ, ಗುಣಿಸಿ ಹೇಳಬಲ್ಲಿರೋ? ಅಂತವರಿಂದಾಗುತ್ತಿರುವ ಪ್ರಾಣಹಾನಿ, ಮಾನಹಾನಿ, ಧನಹಾನಿಗಳೆಂಬ ಘೋರವಾದ ವಿಷಮಸನ್ನಿಪಾತರೋಗಗಳಾದರೂ ಎಷ್ಟರವೆಂಬುದನ್ನು ತಿಳಿಸಬಲ್ಲಿರೋ ? ಹಾಗೂ ಅವರಲ್ಲಿ ಎಷ್ಟು ಮಂದಿಯನ್ನು ನೀವು ಪ್ರಾಯಶ್ಚಿತ್ತಗಳೆಂಬ ಡಾಂಭಿಕ ಕ್ರಿಯಾಕಲಾಪಗಳಲ್ಲಿ ಕುಣಿಸಿ ತಣಿಸಿರುವಿರಿ? ಅವರ ಆ ಬಗೆಯ ಪಾತಕಕ್ಕೆ ಹೊಣೆಯಾರು? ಅನುಭವಿಸುವವರು ಅವರೇ ಅದರೂ, ಅವರನ್ನು ಅಂತಹ ದುರವಸ್ಥೆಗೆ ಕರೆತಂದುಬಿಟ್ಟು, ಮತ್ತೆ ಸುಸ್ಥಿತಿಗೆ ತರಲೊಲ್ಲದೆ ಆಲಸರಾಗಿರುವ ನಿಮ್ಮವರಿಗಲ್ಲವೇ, ಹೆಚ್ಚಿನ ಪ್ರಾಯಶ್ಚಿತ್ತವಾಗಬೇಕು ? ಮತ್ತೆ ಮತ್ತೆಯೂ ಕೇಳಿಕೊಳ್ಳುವೆನು; ಹುಡುಗಿಯ ಮಾತಿದೆಂದು ಕಡೆಗಣಿಸದೆ, ಸತ್ಯವೂ ಪಥ್ಯವೂ ಆದುದೆಂದು ತಿಳಿದು, ಮನಸ್ಸಿಗೆ ತಂದುಕೊಳ್ಳಿರಿ. ಇನ್ನು ಮುಂದೆಯಾದರೂ, ಆ ನಮ್ಮ ಬಾಲಿಶ ಸೋದರೀವರ್ಗವನ್ನು ದುಃಖಾರ್ಣವದಲ್ಲಿ ಬೀಳದಂತೆ ಎಚ್ಚರಿಸಿ ಆನಂದಪಥದಲ್ಲಿ ನೆಲೆಗೊಳಿಸಿರಿ; ಧನ್ಯಾತ್ಮರೆನಿಸಿರಿ!!! ಅಷ್ಟುಮಾತ್ರ ಮಾಡಿರಿ? ಆರ್ಯರೇ! ಇದೇ ನನ್ನ ಅನಂತ ಪ್ರಾರ್ಥನೆ! ಇದೇ ನಿಮ್ಮಿಂದ ನನಗಾಗಬೇಕಾದ ಮನ್ನಣೆ!!!” ವಿಶ್ವನಾಥ-ಗಣೇಶರ ವಾಕ್‌ಶಕ್ತಿ ಲೋಪವಾಯ್ತು; ಸಹಜೋಕ್ತಿಗಳಿಂದ ತಮ್ಮ ಸ್ವಭಾವವನ್ನೇ ತೆಗೆದು, ಮುಂದಿಟ್ಟಳೆಂದೋ ಹೇಗೋ, ಇಬ್ಬರ ಮುಖವೂ ವಿವರ್ಣಕ್ಕೆ ತಿರುಗಿತು. ಅಷ್ಟರಲ್ಲಿಯೇ ಊಟವೂ ಮುಗಿಯಿತು; ಮರುನುಡಿಯಿಲ್ಲದೆ ಎದ್ದುನಿಂತರು. ನಗೇಶ:-ಆನಂದಪಾರವಶ್ಯತೆಯಿಂದ ಎದ್ದು ನಿಂತು,-"ಜಯ ! ಭಗವತಿ! ಜಯಜಯ !! ಇಂದು ನಿನ್ನ ನಂದಿನಿಯೇ ವಿಜಯಿ.! ಹೂಂ! ಆಗಲಿ;- ಜಯಧ್ವಜಸ್ಥಾಪನೆ !!!”