ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

36 ಸತೀಹಿತೈಷಿಣಿ ವಿಶ್ವನಾಥ-ಗಣೇಶರಿಬ್ಬರೂ, ವಿಕೃತಸ್ವರದಿಂದ-:ಆಗಲಿ; ಅವಳೇ ವಿಜಯಿಯಾಗಿರಲಿ. ನಮಗೆ ಕುಂದಿಲ್ಲ.' ಎಂದಾಡಿ ನಿಲ್ಲದೆ ಹೊರಟು ಹೋದರು. ನಂದಿನಿಯೂ ಸ್ವರ್ಣಕುಮಾರಿಯೊಡನೆ ಎದ್ದುಹೋದಳು. ಅರ್ಯಸಂತಾನರೇ! ನೀವೂ ಹೀನಸ್ಥಿತಿಯಲ್ಲಿರುವ ನಿಮ್ಮೀ ಮಾತೃಭೂಮಿಯನ್ನೂ, ಸನಾತನ ಧರ್ಮರಹಸ್ಯವನ್ನೂ, ನಿಮ್ಮ ಪುತ್ರಕರ್ತವ್ಯವನ್ನೂ ಪುನರುತ್ಥಾಪನ ಮಾಡಲು, ದೃಢನಿಶ್ಚಯದಿಂದ ಮುಂದಾಗುವಿರಲ್ಲವೇ? ಸಾಧು ! ಹಾಗಾದರೆ, ಆನಿಮ್ಮ ಸತ್ಸಂಕಲ್ಪವು ಪರಮಸಾಧು !!! || ರೀ || ಪಂಚಮ ಪರಿಚ್ಛೇದ. (ಭ್ರಾತೃ-ಭಗಿನಿಯರ ಸಲ್ಲಾಪ) ನಂದಿನಿ, ಸಮಾಲೋಚನಾಮಂದಿರದಲ್ಲಿ ಒಬ್ಬಳೇ ಕುಳಿತು, ಪುಸ್ತಕಾವಲೋಕನದಲ್ಲಿ ನಿರತೆಯಾಗಿದ್ದಳು. ಚೇಟಯೊಬ್ಬಳು ಬಂದು, ಕುಮಾರ ಚಂದ್ರನಾಥರು ಬಂದಿರುವರೆಂದು ಹೇಳಿದಳು. ನಂದಿನಿ:-ಯಾರು? ಅಚಲಚಂದ್ರನೇ? ಚೇಟ:- ಅಹುದು: ನಂದಿನಿ:-ತಡೆಯೇಕೆ? ಬರಹೇಳು. ಚೇಟಿ:-ನಮ್ಮ ಕುಮಾರರೂ ಬಂದಿರುವರು. ನಂದಿನಿ:-ಕೆಲಸವೇನೂ ಇಲ್ಲದಿದ್ದರೆ ಬರಬಹುದು.