ಪುಟ:ಮಾತೃನಂದಿನಿ.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

37 ಮಾತೃ ನಂದಿನಿ ಚೇಟಿಯು ಹೊರಟುಹೋದಳು. ಅವಳು ಹೋದ ಒಂದೆರಡು ನಿಮಿಷದೊಳಗಾಗಿಯೇ ಇಪ್ಪತ್ತೆರಡು ವರ್ಷದ ಉಜ್ವಲ ಶ್ಯಾಮಲನೊಬ್ಬನು ಬಂದು, ನಂದಿನಿಯ ಮುಂದೆ ನಿಂತು, ಪ್ರೀತಿವ್ಯಂಜಕಸ್ವರದಿಂದ-ನಂದಿನಿ ! ಏನುಮಾಡುತ್ತಿದ್ದೆ !” ನಂದಿನಿ:-ಕುಳಿತಿದ್ದ ಕಾಲುಮಣೆಯನ್ನು ಬಿಟ್ಟು, ಆಗಂತುಕನನ್ನು ಕುಳ್ಳಿರಹೇಳಿ, ತಾನೂ ಕೆಳಗೆ ಕುಳಿತು ಮೆಲ್ಲನೆ-ಮಾಡುವುದೇನು? ಕಂಡಂತರ ಇದೆ!” ಆಗಂತುಕ:-ಕುಳಿತು, ಇಂದಿನ ಕಾಲಕ್ಷೇಪವು ಎಷ್ಟರಮಟ್ಟಿ ಗಾಯ್ತು?” ನಂದಿನಿ:-ಅಚಲತಂದ್ರ ! ತಿಳಿದೂ ಕೇಳುತ್ತಿರುವೆಯಲ್ಲವೆ? ಆಗಲಿ; ಈ ದಿನದ ಪ್ರಥಮ ಕಾಲಕ್ಷೇಪವಾಗಿ ಸ್ವರ್ಣಯೊಡನೆ ವಿಲಾಸಾದಿಗಳ ಫಲಾ ನುಭವ, ವಿರಕ್ತಿಯ ಪ್ರಭಾವ, ಇವುಗಳ ವಿಚಾರಗಳೂ, ಮಧ್ಯಾಹ್ನದಲ್ಲಿ ಸುಶಿಕ್ಷಯ ಸತ್ಸಲ, ಅಶಿಕ್ಷಯ ಅಲಂಖ್ಯಫಲ, ದೇಶಮಾತೆಯ ವ್ಯಾಕುಲಸ್ಥಿತಿ, ನಮ್ಮವರ ದುರಭಿಮಾನ ಮೊದಲಾದವುಗಳೂ ವಿಮರ್ಶಿಸಲ್ಪಟ್ಟು ವ. ಅಚಲ:-ಕಿರುನಗೆಯಿಂದ,-ನಾರಾನಂದನಿಂದ ಎಲ್ಲವೂ ತಿಳಿ ದುವು. ಆದರೆ, ಆ ಬಿಳಿಕೂದಲ-ದೊಡ್ಡ ತಲೆಯವರು, ಅಷ್ಟಕ್ಕೆ ಸೋತು ಹೋದುದು ಆಶ್ಚರ್ಯವೇ ಸರಿ.' - ನಂದಿನಿ:-ನಿನ್ನ ಶಿಕ್ಷಣಾಕೌಶಲ್ಯವೂ ಭಗವತಿಯ ಅನುಗ್ರಹವೂ ಸಹ ಕರಿಸುತ್ತಿದ್ದರೆ, ದುಸ್ತರವಾವುದು ? ಆಶ್ಚರ್ಯವೇನು? ಅದಿರಲಿ; ಇಂದೇನು, ನೀನು ವಿರಾಮವಾಗಿರುವೆ? ಅಚಲ:-ಇಂದು ಶಾಲೆಯಲ್ಲಿ ಕೆಲಸವಿರಲಿಲ್ಲ. ಈವರೆಗೂ ಉಳಿ ದಿದ್ದ ಹಿಂದಿನ ಕೆಲಸಗಳೆಲ್ಲವನ್ನೂ ಕ್ರಮಪಡಿಸಿದುರಾಯ್ತು; ಆಯಾಸಲೀಸರ ಗಳನ್ನು ಹೋಗಲಾಡಿಸಿಕೊಳ್ಳಲಿಕ್ಕೆಂದು ನಿನ್ನಲ್ಲಿಗೆ ಬಂದನು. - ನಂದಿನಿ:-ನನ್ನ ಮನದಲ್ಲಿದ್ದುದೂ ಇದೇ! ಇದನ್ನು ಕುರಿತೇ ನಿನಗೆ ನಾವು ಪರೋಕ್ಷದಲ್ಲಿದ್ದರೂ, ಪ್ರತ್ಯಕ್ಷದಲ್ಲಿಯೇ ಇರುವಂತೆ ಭಾವನೆಯಾ ಗುವುದೆಂದೂ ಹಾಗೂ ನಮ್ಮಿಬ್ಬರ ಮನಸ್ಸೇ ಹೇಳಿ-ಕೇಳುತ್ತಿರುವುದೆಂದೂ” ಹೇಳಿದ್ದೆನು.