33
ನ
ಸತೀಹಿತೈಷಿಣೀ
ಅಚಲ:-ತಲೆದೂಗುತ್ತೆ,- "ನಿಜ! ನಿಜ !! ಮನೋಯೋಗಶಕ್ತಿಯೆಂಬುದೇ ಇದೆಂದು ತಿಳಿ ! ಇದರ ಅದ್ಭುತಪ್ರಭಾವವನ್ನು ವಿವರಿಸುವುದಕ್ಕಾಗದು. ಅದಕ್ಕೆಂದೇ ನಮ್ಮ ಕವಿತಾಲೋಲನು ಕೂಡ ತನ್ನ ಸೋದರಿಗೊಮ್ಮೆ ಹೀಗೆ ಹೇಳಿರುವನು;-
ಕಂದ - ಬಗೆಕೇಳ್ವು೦ ಬಗೆಯೊರಗು೦,
ಬಗೆತಿಳಿಗು೦ ಬಗೆಯ ತಿಳಿಪುಗುಂ ಬಗೆವಗೆಯಿ೦ ||
ದೊಗೆದೊಗೆವಾವಗೆ ಸೇವೆಗೆ
ಬಗೆದೆಯೆ ಬಗೆಗೊಳ್ವ ಬಗೆಯೊಳಣ್ಣನ ಬಗೆಯ೦||”
ಈಬಗೆಯ ಆಕರ್ಷಣಾಯಂತ್ರವೇ ನನ್ನನ್ನು ಮತ್ತೆಲ್ಲಿಗೂ ಹೋಗಗೊಡದೆ ಇಲ್ಲಿಗೇ ಬರಮಾಡಿತೆಂದು ತಿಳಿಯೆಯೋ ?"
ನಂದಿನಿ:- ಹಾಗಾದರೆ, ಆಕರ್ಷಣಾಶಕ್ತಿಯೇ ನಿನ್ನನ್ನು ಎಳೆತಂದಿರುವುದೋ? ನಿನ್ನಲ್ಲಿರುವ ಈ ಅವ್ಯಾಜಭ್ರಾತೃಸ್ನೇಹವು ನಿನ್ನನ್ನು ಪ್ರೇರಿಸಲಿಲ್ಲವೋ ?
ಅಚಲ:-ಹೇಗೆ ಬೇಕಾದರೂ ಹೇಳಬಹುದು, ಅದಿರಲಿ; ನಿನ್ನ ಕೈಯಲ್ಲಿರುವ ಗ್ರಂಥವಾವುದು ?
ನಂದಿನಿ:- "ಸುಭಾಷಿತ."
ಅಚಲ:-ತಲೆದೂಗಿ- "ಸಂತೋಷವಾಯಿತು. ಆದರೆ, ನಂದಿನಿ ! ಮೊದಲು ನೀನು ನಮ್ಮ ಕರ್ಣಾಟದೇಶಭಾಷೆಯನ್ನು ಭದ್ರಪಡಿಸಿಟ್ಟು, ಆಬಳಿಕ ದೇವಭಾಷೆಯನ್ನು ಅಭ್ಯಸಿಸಬೇಕೆಂಬುದೇ ನನ್ನ ಅಭಿಲಾಷೆ !”
ನಂದಿನಿ:--ನನ್ನ ಇಷ್ಟವೂ ಬೇರೆಯಾಗಿಲ್ಲ. ಈವರೆಗೂ ಕರ್ಣಾಟಕ ಕಾವ್ಯಗಳನ್ನೇ ನೋಡುತ್ತಿದ್ದೆನು. ಕೆಲವು ಸೂತ್ರಗಳನ್ನು ನೋಡಬೇಕೆಂಬ ಉದ್ದೇಶದಿಂದ ಈಗಲೇ ಇದನ್ನು ಕೈಕೊಂಡಿರುವೆನು.
ಅಚಲ:-ಸಂಭ್ರಮದಿಂದ,- "ನಂದಿನಿ! ಸತ್ಯವಾಗಿ ನೀನೇ ನಂದಿನಿ!! ನೀನೇ ಸಾರ್ಥಕನಾಮಸಂಶೋಭಿತೆಯಾದ ಕರ್ಣಾಟ ಮಾತೃನಂದಿನಿ'!! ತಾಯಿ ! ಧನ್ಯಳೆನ್ನಿಸಿದೆ! ಯಾರು, ತಮ್ಮ ಜನ್ಮಭೂಮಿಯನ್ನೂ ದೇಶಭಾಷೆಯನ್ನೂ ನಿಂದಿಸುವರೋ, ಅವರೇ ಮಾತೃಘಾತಕರು. ಅವರಿಗೂ ಕೀಳಾದ