ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

33

ಸತೀಹಿತೈಷಿಣೀ

ಅಚಲ:-ತಲೆದೂಗುತ್ತೆ,- "ನಿಜ! ನಿಜ !! ಮನೋಯೋಗಶಕ್ತಿಯೆಂಬುದೇ ಇದೆಂದು ತಿಳಿ ! ಇದರ ಅದ್ಭುತಪ್ರಭಾವವನ್ನು ವಿವರಿಸುವುದಕ್ಕಾಗದು. ಅದಕ್ಕೆಂದೇ ನಮ್ಮ ಕವಿತಾಲೋಲನು ಕೂಡ ತನ್ನ ಸೋದರಿಗೊಮ್ಮೆ ಹೀಗೆ ಹೇಳಿರುವನು;-

ಕಂದ - ಬಗೆಕೇಳ್ವು೦ ಬಗೆಯೊರಗು೦,

ಬಗೆತಿಳಿಗು೦ ಬಗೆಯ ತಿಳಿಪುಗುಂ ಬಗೆವಗೆಯಿ೦ ||

ದೊಗೆದೊಗೆವಾವಗೆ ಸೇವೆಗೆ

ಬಗೆದೆಯೆ ಬಗೆಗೊಳ್ವ ಬಗೆಯೊಳಣ್ಣನ ಬಗೆಯ೦||”

ಈಬಗೆಯ ಆಕರ್ಷಣಾಯಂತ್ರವೇ ನನ್ನನ್ನು ಮತ್ತೆಲ್ಲಿಗೂ ಹೋಗಗೊಡದೆ ಇಲ್ಲಿಗೇ ಬರಮಾಡಿತೆಂದು ತಿಳಿಯೆಯೋ ?"

ನಂದಿನಿ:- ಹಾಗಾದರೆ, ಆಕರ್ಷಣಾಶಕ್ತಿಯೇ ನಿನ್ನನ್ನು ಎಳೆತಂದಿರುವುದೋ? ನಿನ್ನಲ್ಲಿರುವ ಈ ಅವ್ಯಾಜಭ್ರಾತೃಸ್ನೇಹವು ನಿನ್ನನ್ನು ಪ್ರೇರಿಸಲಿಲ್ಲವೋ ?

ಅಚಲ:-ಹೇಗೆ ಬೇಕಾದರೂ ಹೇಳಬಹುದು, ಅದಿರಲಿ; ನಿನ್ನ ಕೈಯಲ್ಲಿರುವ ಗ್ರಂಥವಾವುದು ?

ನಂದಿನಿ:- "ಸುಭಾಷಿತ."

ಅಚಲ:-ತಲೆದೂಗಿ- "ಸಂತೋಷವಾಯಿತು. ಆದರೆ, ನಂದಿನಿ ! ಮೊದಲು ನೀನು ನಮ್ಮ ಕರ್ಣಾಟದೇಶಭಾಷೆಯನ್ನು ಭದ್ರಪಡಿಸಿಟ್ಟು, ಆಬಳಿಕ ದೇವಭಾಷೆಯನ್ನು ಅಭ್ಯಸಿಸಬೇಕೆಂಬುದೇ ನನ್ನ ಅಭಿಲಾಷೆ !”

ನಂದಿನಿ:--ನನ್ನ ಇಷ್ಟವೂ ಬೇರೆಯಾಗಿಲ್ಲ. ಈವರೆಗೂ ಕರ್ಣಾಟಕ ಕಾವ್ಯಗಳನ್ನೇ ನೋಡುತ್ತಿದ್ದೆನು. ಕೆಲವು ಸೂತ್ರಗಳನ್ನು ನೋಡಬೇಕೆಂಬ ಉದ್ದೇಶದಿಂದ ಈಗಲೇ ಇದನ್ನು ಕೈಕೊಂಡಿರುವೆನು.

ಅಚಲ:-ಸಂಭ್ರಮದಿಂದ,- "ನಂದಿನಿ! ಸತ್ಯವಾಗಿ ನೀನೇ ನಂದಿನಿ!! ನೀನೇ ಸಾರ್ಥಕನಾಮಸಂಶೋಭಿತೆಯಾದ ಕರ್ಣಾಟ ಮಾತೃನಂದಿನಿ'!! ತಾಯಿ ! ಧನ್ಯಳೆನ್ನಿಸಿದೆ! ಯಾರು, ತಮ್ಮ ಜನ್ಮಭೂಮಿಯನ್ನೂ ದೇಶಭಾಷೆಯನ್ನೂ ನಿಂದಿಸುವರೋ, ಅವರೇ ಮಾತೃಘಾತಕರು. ಅವರಿಗೂ ಕೀಳಾದ