ಪುಟ:ಮಾತೃನಂದಿನಿ.djvu/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತೃನ೦ದಿನಿ 39 ಕೃತಘ್ನರು ಈ ಜಗತ್ತಿನಲ್ಲಿಲಾರರು. "ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸಿ” ಎಂದೇ ಉಪದೇಶಾಮೃತವನ್ನು ನಿರಂತರವೂ ತ್ರಿಕರಣಶುದ್ಧವಾಗಿ ಯಾರು ಸೇವಿಸುವರೋ, ಅಂತಹರೇ ಸತ್ಪುತ್ರರು! ಅವರೇ ಕೃತಾರ್ಥರು !! ಅಂತಹ ಸತ್ ಸಂತಾನರಿಗೇ ನನ್ನ ಸಹಸ್ರ-ಸಹಸ್ರ ವಂದನೆಗಳು!!!”

ನಂದಿನಿ:-ತಲೆಯೆತ್ತಿ ಗಂಭೀರಸ್ವರದಿಂದ,-. ಅಣ್ಣಾ! ನೀನೇನೋ ಹೀಗೆ ಹೇಳುತ್ತಿರುವೆ? ನವನಾಗರಿಕರೆನಿಸಿ, ಸಮಾಜಸುಧಾರಕರಲ್ಲಿ ಅಗ್ರೇ ಸರರಾಗಿರುವ ಮಹಾಜನರನ್ನು ನೋಡಿದರೆ, ನಮ್ಮೀ ಕರ್ಣಾಟಭಾಷಾಮಾನಿ ನಿಯ, ಮತ್ತು ಜನ್ಮಭೂಮಿಯ ಅಭಿಮಾನವು ಎಷ್ಟರಮಟ್ಟಿಗೆ ತೋರುತ್ತಿರುವುದೋ ತಿಳಿದುಬರುವುದು. ಅಂತವರಿಂದ ದೇಶಭಾಷೆಗೆ ಉಂಟಾಗಿರುವ ಪ್ರೋತ್ಸಾಹವಂತೂ ಹೇಳಿ-ಕೇಳುವಂತಿಲ್ಲ.”

ಅಚಲ:--ವಿಷಾದದಿಂದ,- "ತಾಯೀ ! ಆ ವಿಚಾರವು, ನನಗೆ ಸಹನಾತೀತವಾದ ಯಾತನೆಯನ್ನೇ ಉಂಟುಮಾಡುತ್ತಿರುವುದಾದರೂ ಅಲ್ಲಿಲ್ಲಿ ಒಬ್ಬಬ್ಬರಂತೆ ದೇಶಕ್ಕೂ ಭಾಷೆಗೂ ಅಳುತ್ತಿರುವ ನಮ್ಮ ದೇಶಬಾಂಧವರನ್ನು ನೋಡಿ, ಮನದಳಲನ್ನು ತಡೆಗಟ್ಟುತ್ತಿರುವೆನು. ಆದರೆ, ನಿನಗೆ ಈಗ ನಾನು ಹೇಳಬೇಕಾದುದು ಇಷ್ಟೆ ! ದೇಶವು ಅಭಿವೃದ್ಧಿ ಸ್ಥಿತಿಗೆ ಬರಬೇಕಾದರೆ, ದೇಶ ಭಾಷೆಯು ಸರ್ವತ್ರ ಪ್ರಸಾರವಾಗಿರಬೇಕು. ಹಾಗಾಗುವುದಕ್ಕೂ ಸ್ತ್ರೀಜನಾಂಗದವರೇ ಮುಖ್ಯ ಪಾತ್ರರಾಗಿ ನಿಂತು, ತಮ್ಮ ತಮ್ಮ ಪುರುಷವರ್ಗವನ್ನು ಹುರಿಗೊಳಿಸಬೇಕು. ಅಷ್ಟರ ಧೈರ್ಯ -ಸ್ಥೈರ್ಯ-ದೃಢಪ್ರಯತ್ನಗಳು ಈ ನಮ್ಮ ಅಬಲಾವರ್ಗವನ್ನೇ ಬಿಟ್ಟು ಎಲ್ಲಿಯೋ ಅವಿತುಕೊಂಡಿರುವುದು. ಆದರೂ ಬಿಡದೆ ಪ್ರಯತ್ನ ಮಾಡಿದರೆ, ಕ್ರಮಕ್ರಮವಾಗಿ ಸುಧಾರಿಸಲ್ಪಟ್ಟು, ಬಹುಕಾಲಾನಂತರದಲ್ಲಾದರೂ ಮತ್ತೆ ಮೊದಲಿನಂತೆ ಬೆಳಗಲಾದೀತೆಂದು ನನಗೆ ತೋರುತ್ತಿದೆ. ಇದನ್ನು ಚೆನ್ನಾಗಿ ನೆನಪಿಟ್ಟು, ನೀನೇ ಮುಂದಾಗಿ ನಿಂತು, ಇದನ್ನು ಸಾಧಿಸಬೇಕು.”

ನಂದಿನಿ:-ಹೇಗೆ? ಸಾಧಿಸುವ ಕ್ರಮವೇನು?

ಅಚಲ:-ಮೊದಲು, ಮಕ್ಕಳಿಗೆ ತಾಯಹಾಲು ಹೇಗೆ ಮುಖ್ಯವೋ, ಹಾಗೆಯೇ ದೇಶಭಾಷೆಯೂ ಮುಖ್ಯವಾಗಿರಬೇಕು. ದೇಶಭಾಷೆ ಸ್ಥಿರವಾ