ಪುಟ:ಮಾತೃನಂದಿನಿ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತನ೦ದಿನಿ 41 ಇದನ್ನು ಸರಿಯಾಗಿ ಹೇಳಿ-ತಿಳಿಸುವುದಕ್ಕೆ ನಿನ್ನಿಂದಲ್ಲದೆ ಮತ್ತಾರಿಂದೆಯ ಆಗದೆಂದು ಬಗೆದು ಸುಮ್ಮನಿದ್ದೆನು. ಅಚಲ:- ಅವೆಲ್ಲಾ ಈಗ ಸರಿಯಾಯಿತಲ್ಲವೆ? ಅದಿರಲಿ; ಇದೇನಿಂದು, ನಿನ್ನ ನೆಚ್ಚಿನತಂಗಿ ಬದಲಾಯಿಸಿದಂತಿದೆ ? ನಂದಿನಿ:-ಕುತೂಹಲದಿಂದ, ಯಾರು ? ಸ್ವರ್ಣಕುಮಾರಿಯೋ? ಅಚಲ:- ಅಹುದು. ನಂದಿನಿ:-ನೀನೇ ಕಾರಣನಲ್ಲವೇ ? ಅಚಲ:-ಹೇಗೆ? ನಂದಿನಿ:-ಹೇಗೋ, ನೀನೇ ಹೇಳಬೇಕು ! ಅವಳ ಅಲಂಕಾರವಿಲಾಸಾದಿಗಳನ್ನು ಕುರಿತು, ನೀನು ಎಷ್ಟು ಬಾರಿ ಕುಚೋದ್ಯ ಮಾಡಿಲ್ಲ ? ಅಚಲ:-ಅಷ್ಟಕ್ಕೇ ಬಿಡಲಾದೀತೇ? ನಂದಿನಿ:-ಕೂಡದೋ? ಅಚಲ:-ಏಕೆ ? ನಂದಿನಿ:-ಏಕೆಂದರೆ, ನನಗೇನು ಗೊತ್ತೇ ? ದಕ್ಷಿಣಾಮೂರ್ತಿಯ ದಯೆಗೆ ಪಾತ್ರಳಾಗಬೇಕೆಂದು ದಾಕ್ಷಾಯಿಣಿರು ತಾಪಸವೃತ್ತಿಯನ್ನು ಕೈಕೊಂಡಳಲ್ಲವೇ ? ಅಚಲ:-ಪರಿಹಾಸದಿಂದ-ಹಾಗೊ? ಸರಿ-ಸರಿ !! ಗೊತ್ತಾಯ್ತು. ಆದರೆ, ಇಲ್ಲಿ ದಾಕ್ಷಾಯಿಣಿಯನ್ನು ಕಟಾಕ್ಷಿಸಲುಳ್ಳ ದಕ್ಷಿಣಾಮೂರ್ತಿ ಯೊಬ್ಬನಿರಬೇಕಲ್ಲವೇ? ಆತನಲ್ಲಿರುವನೋ ?? ನಂದಿನಿ:-ಎಲ್ಲಿಯಾದರೂ ಹುಡುಕಬೇಕೇ ? ಇಲ್ಲಿರುವವನೇ ಆಗ ಲೋಲ್ಲ ? ಅಚಲ:- ಅದು ಸುಳ್ಳುಮಾತು ! ಇವನನ್ನು ದಕ್ಷಿಣಾಮೂರ್ತಿ ಹಾಗಿ ಮಾಡಬೇಕಾದರೆ ಬಹುಕಷ್ಟ ಪಡಬೇಕು ! ನಂದಿನಿ:-ವ್ಯಂಗ್ಯಸ್ವರದಿಂದ,1(ಬಹುಕಷ್ಟ ? ಹೇಗೆ? ವರದಕ್ಷಿಣೆ ಯನ್ನೆ ನಾದರೂ ಕೊಡಬೇಕೋ?” ಅಚಲ:-ತಲೆದೂಗಿ,-11ಬೇಡವೇ? ರಾಕ್ಷಿಣಾತ್ಯರನ್ನು ದಕ್ಷಿಣಾ