ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾತನ೦ದಿನಿ 45 ಸತೀಧರ್ಮವಲ್ಲವೆಂದು ಹೇಳಿ, ಅವಳನ್ನು ಹೆಚ್ಚಾಗಿ ಒಲಾತ್ಕರಿಸುವುದಿಲ್ಲ. ನಂದಿನಿ:-ಸರಿ; ನೀನೇನು ಲೋಕೋತ್ತರ ವ್ಯಕ್ತಿಯಾಗಿರುವೆ?' ಅಚಲ:-ಅಷ್ಟಲ್ಲದೆ ಮತ್ತೇನು? ಈ ಕಾಲದ ಹುಡುಗರಂತ ಡುಮ್ಮಾ, ಸಿಗರೆಟ್, ಬೀಡಿ, ಭಂಗಿ ಮೊದಲಾದವುಗಳ ಸೇವನೆಯಿಂದಯ, ಮುಖ ಹೌರ, ವೇಷಧಾರಣೆ ಮೊದಲಾದ ಹೇಯಕಾರ್ಯಗಳಿಂದೆಯೂ ಸತ್ತುಕೆಟ್ಟು-ಸುತ್ತುತ್ತಿರಬೇಕೇನು ? ನನ್ನಿಂದ ಅದೆಂದೂ ಆಗದು ! ನಂದಿನಿ:-ಆಗದೇಕೆ? ಅವುಗಳೇನು, ಚೆನ್ನಾಗಿಲ್ಲವೊ? ಅಚಲ:-ಹೇಗಾದರೂ ಇರಲಿ; ನನಗೆ ಬೇಡ ! ನಂದಿನಿ! ಎಲ್ಲರೂ ನಿದ್ರಾಜಡತೆಯಿಂದ ಮೆಯ್ಯರೆತು ಒರಗಿದ್ದರೆ ನಿದ್ದೆ ತಿಳಿದೆಚ್ಚತ್ತವರೂ ಅವರ ಜೊತೆಯಲ್ಲಿ ಬಿದ್ದು ಒದ್ದಾಡುತ್ತಿರಬೇಕೊ? ಬೇಕಾದವರು ಹಾಗೆಯೇ ಮಲಗಿ ನರಳಿ ಸಾಯುತ್ತಿರಲಿ. ನಾನು ನನ್ನ ಶಕ್ತಿಯಿದ್ದಷ್ಟೂ ಎಚ್ಚರದ ಲ್ಲಿದ್ದು ಹೀಗೆಯೇ ಕೂಗುತ್ತಿರುವೆನು. (ಇವರೀರ್ವರ ಸಂಭಾಷಣೆಯ ಮಧ್ಯದ ಲ್ಲಿಯೇ ಸ್ವರ್ಣಕುಮಾರಿಯ ಓಡಿಬಂದಳು. ಬಂದವಳು ಅಚಲಚಂದ್ರನನ್ನು ಕಂಡು, ಲಜ್ಞೆಯಿಂದ ತಲೆಬಾಗಿ ನಂದಿನಿಯ ಬಳಿಗೆ ಬಂದು ನಿಂತು ಮಲ್ಲಸಿ)- ಅಕ್ಕಾ! ಅಮ್ಮನು, ನಿನ್ನನ್ನು ಬೀಗ ಕರೆತರಹೇಳಿದಳು.' ನಂದಿನಿ:-ಸ್ವರ್ಣಕುಮಾರಿಯ ಕೈ ಹಿಡಿದೆಳೆದು ನಿಲ್ಲಿಸಿ, : ಸ್ವರ್ಣ ! ಬರುತ್ತೇನೆ. ಆದರೆ ಇತ್ತ ನೋಡು ! ಕುಳಿತಿರುವಾತನು ಯಾರು? ' ಸ್ವರ್ಣ:-ತಲೆಯನ್ನು ಕೊಂಕಿಸಿ, ನನ್ನ ಕೈಯನ್ನು ಬಿಡು, ನಾನು ಹೋಗಬೇಕು.' ಅಚಲ:-ಅದೇನಿಷ್ಟು ಆತುರ ? ಏಕೆ ಓಡಿ ಹೋಗುವೆ? ಸ್ವರ್ಣ:-(ಉತ್ತರವಿಲ್ಲದೆ ತಲೆಬಾಗಿ ನಿಂತಳು.) ನಂದಿನಿ:- ಅಣ್ಣ ! ಅದೇನೇನನ್ನೋ ಹೇಳುತ್ತಿರುವಳು. ನೀನೇ ವಿಚಾರಿಸು.' ಅಚಲ:-ತಲೆದೂಗಿ, ಹಾಗೂ ಅಗಲಿ' ಎಂದು ಸ್ವರ್ಣಕುಮಾ ರಿಯ ಕೈ ಹಿಡಿದು..-“ಸ್ವರ್ಣ : ಒಗ್ಗಿ ಹೋಗಿರುವ ತಲೆಯನ್ನು ಮೇಲಕ್ಕೆ ಎತ್ತಲಾರೆಯೋ? ಒಲ್ಲೆ ಯೋ? ಇದೇಕೆ, ಕುರಿಯವರಿಯಾಗಿರುವೆ? ನನ್ನಲ್ಲಿ ನಿನಗೆ ನಾಚಿಕೆಯೋ? ಎಂದೂ ನಿಮ್ಮ ಮನೆಗೆ ಬಾರದ ನವಾಗಂತಕ