ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

46 ತಿ ಸತೀ ಹಿತೈ ಷಿಣಿ (ಹೊಸಬ) ವ್ಯಕ್ತಿಯೆಂದು ನನ್ನನ್ನು ತಿಳಿದೆಯೇನು ? ಅಥವಾ ವಿಶೇಷಾಭಿ ಪ್ರಾಯವೇನಾದರೂ ಉಂಟಾಯಿತೊ? ಹೇಳು. ಅಂತಹದೇನಿದ್ದರೂ ದೂರ ದಲ್ಲಿ ಕಟ್ಟಿಟ್ಟು ಸಲ್ಗೆಯಿಂದ ಮಾತನಾಡು,” ಸ್ವರ್ಣಕುಮಾರಿಯಿಂದ ಉತ್ತರವು ಹೊರಡಲಿಲ್ಲ. ಅಚಲ:-ಸ್ವರ್ಣ ! ನನ್ನ ಬಳಿಯಲ್ಲಿ ಈ ಬಗೆಯ ಹೇಡಿತನವು ಕೂಡದು. ನನ್ನಲ್ಲಿ ಮಾವ ಆಶೋತ್ತರಕ್ಕೂ ಅವಕಾಶವಿರುವುದಿಲ್ಲ. ಮಾತನಾಡು. ಸ್ವರ್ಣಕುಮಾರಿಗೆ ನಗುವು ಬಂತು. ಆಗಲೂ ಉತ್ತರವು ಹೊರಡ ಲಿಲ್ಲ. ಅಚಲ:-ಕೃತಕಕೋಪದಿಂದ,- ಈ ವಯಸ್ಸಿಗಾಗಿ ಇಷ್ಟು ಲಜ್ಜೆಯೋ ? ಹಾಗಿದ್ದರೆ ಬಿಟ್ಟೆನು; ಹೊರಟು ಹೋಗಬಹುದು. ನೀನು ಇಷ್ಟರ ಹೇಡಿಹುಡುಗಿಯೆಂದು ಮೊದಲೇ ತಿಳಿದಿದ್ದರೆ ನಿನ್ನನ್ನು ಮಾತನಾಡಿ ಸುತ್ತಿರಲಿಲ್ಲ. ಈಗಲೂ ಮುಳುಗಿ ಹೋಗಲಿಲ್ಲ. ಉತ್ತರಕೊಡಲಿಷ ವುಂಟೋ? ಇಲ್ಲವೋ?” ಸ್ವರ್ಣ:-ಮೆಲ್ಲನೆ-ನುತ್ತರ ಕೊಡಬೇಕು !! ಅಚಲ:-ನನಗೀ ಸಂಕುಚಿತಭಾವವು ರುಚಿಸುವುದಿಲ್ಲ. ಸರಿಯಾಗಿ ಉತ್ತರಕೊಟ್ಟರೆ ಸರಿ; ಇಷ್ಟವಿಲ್ಲವೆಂದರೆ, ನಾಳಿನಿಂದ ನಿಮ್ಮ ಮನೆಗೆ ಬರುವಷ್ಟರ ಶ್ರಮವಾದರೂ ನನಗಿರುವುದಿಲ್ಲ. ಸ್ವರ್ಣ:-ತಲೆಯೆತ್ತಿ ಕಂಪಿತಸ್ವರದಿಂದ,-“ನಾನು ಮಾತನಾಡದಿದ್ದರೆ ಮತ್ತಾರೂ ಬರಲಾಗದೇ? ? ಅಚಲ:-ನಗುತ್ತ ಸ್ವರ್ಣಕುಮಾರಿಯ ಬೆನ್ನು ತಟ್ಟಿ-ಭಲೆ! ಸ್ವರ್ಣ ! ಈಗಲೀಗ ನನಗೆ ಸಂತೋಷವಾಯ್ತು; ಈಗಲೀಗ ನೀನು ನಮ್ಮ ನಂದಿನಿಗೆ ಸವೆಯಾಗಲು ತಕ್ಕವಳಾದೆ. ಆದರೆ, ನಾನು ಬಂದೆಡೆಯಲ್ಲಿ ವಿದ್ಯಾರ್ಥಿ ನಿಯರಾದ ಬಾಲಕಿಯರನ್ನು ಕಂಡರೆ ನುಡಿಸದೆ ಹೋಗಲಿಕ್ಕೆ ನನ್ನಿಂದಾ ಗರು ! ಅಂತವರಲ್ಲಿ ಹೇಡಿತನವೆಂಬುದನ್ನು ಕಂಡರೂ ನನಗಾಗದು.' ಸ್ವರ್ಣ:-ಕಿರುನಗೆಯಿ೦ದ, ನನ್ನಲ್ಲಿ ಹೇಡಿತನವೇನು!? ನಂದಿನಿ:-ಅಚಲ! ಸ್ವರ್ಣಗೆ ಈಗ ನೀನೇನು ಹೇಳುವೆ??