ಪುಟ:ಮಾತೃನಂದಿನಿ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

47. ಮಾತೃನ ದಿನಿ ಅಚಲ:-ತಲೆದೂಗಿ, ಹೇಡಿತನವೆಂದರೆ, ಈವರೆಗೂ ಮೂಗಿಯಂತಿ ದ್ದು ದೇ!' ಸ್ವರ್ಣ:-ಅಷ್ಟಕ್ಕೇ ಹೇಡಿಯಾದೆನೋ ? ಅಚಲ:-..ಮತ್ತೇನು ? ಕೇಳಿದುದಕ್ಕೆ ಸದುತ್ತರವನ್ನು ಕೊಡದಿದ್ದರೆ ಹೇಡಿಯಲ್ಲವೋ? ಸ್ವರ್ಣ:- ಉತ್ತರ ಕೊಡುವಷ್ಟರ ಶಕ್ತಿಯಿದ್ದೂ ಕೊಡದಿದ್ದರೆ ಹೇಡಿ ತನವಾದೀತು. ಅರ್ಥಜ್ಞಾನವೇ ಇಲ್ಲದ ಬಳಿಕ ಹೇಡಿತನವೆಲ್ಲ ? ನನಗೆ ಅಷ್ಟರ ಅರ್ಥಜ್ಞಾನವೇ ಉಂಟಾಗಿಲ್ಲ.

  • ಅಚಲ:-ಸಂಭ್ರಮದಿಂದ... ಭಲೆ : ಸ್ವರ್ಣ ! ಇಂದು ನೀನು ನಿಜ ವಾಗಿಯೂ ಸ್ವರ್ಣಕುಮಾರಿಯೇ ಸರಿ! ನಿನ್ನ ಮನಸ್ಸು ನಿಜವಾಗಿಯೂ ಪುಟಕ್ಕಿಟ್ಟ ಬಂಗಾರವೆಂದೇ ಹೇಳಬಹುದು !'

ಸ್ವರ್ಣ:-ಇಷ್ಟೆ ಯೋ? ಇನ್ನೂ ಏನಾದರೂ ಉಂಟೊ  ? ? ಅಚಲ:-ಕುತೂಹಲದಿಂದ, ಮತ್ತೇನಾಗಬೇಕು?' ಸ್ವರ್ಣ:-ಸ್ವರ್ಣಕ್ಕೆ ಬಹುಮಾನ! ಅಚಲ:-ಬಹುಮಾನವೂ ಬೇಕೋ? ಧಾರಳವಾಗಿ, ಎಷ್ಟು ಬೇಕಾ ದರೂ ದೊರೆಯಬಹುದು ? ಸ್ವರ್ಣ:-ಆಗಲಿ: ಎಷ್ಟಿವೆಯೋ ಅಷ್ಟೂ ಈಗಲೇ ಕೊಡಲ್ಪಡಲಿ ! ಅಚಲ:-ಈಗಲೇ ಎಲ್ಲವನ್ನೂ ಮುಗಿಸಿಬಿಡೆಂದು ಹೇಳುವೆಯೋ?. ನಾಳೆಗೆ ಬೇಡವೋ? ಸ್ವರ್ಣ:-ಬೇಡ; ಮತ್ತೆ ಯಾವಾಗಲೂ ಸ್ವರ್ಣಕ್ಕೆ ಪ್ರತಿ ಬೇಡ ! ಅಚಲ:-ಪರಿಹಾಸದಿಂದ, ' ಸ್ತುತಿ ಬೇಡವೆಂದರೆ ಮತ್ತೇನುಬೇಕು ? ಸ್ವರ್ಣ;-ಮತ್ತೇನು ಬೇಕೆಂದರೆ............ (ಅಧೋಯಲ್ಲಿಯೇ ನಿಲ್ಲಿಸಿ ತಲೆವಾಗಿದಳು.) ಅಚಲ:-ಹೇಳು-ಹೇಳು! ಅದೇಕೆ, ಅರ್ಧಕ್ತಿಯಲ್ಲಿಯೇ ಸುಮ್ಮ ನಾದೆ? ಏನುಬೇಕು? ಶೃಂಗಾರವೇ? ಸ್ವರ್ಣ:-ತಲೆವಾಗಿದಂತೆಯೇ,–“ಶೃಂಗಾರಕ್ಕೂ ಸ್ತುತಿಗೂ ಭೇದ ವೇನು !”