ವಿಷಯಕ್ಕೆ ಹೋಗು

ಪುಟ:ಮಾತೃನಂದಿನಿ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

 5 . ಸತೀ ಹಿತೈಷಿಣೀ ವಿಷಯವನ್ನೇ ಸೂಚಿಸುತ್ತಿವೆ. ಇಂದು ಅವಳು ಯಾವುದೋ ಒಂದು ದೃಢಸಂಕಲ್ಪವನ್ನು ಕೈಕೊಂಡಿರುವಂತೆ ನನ್ನ ಭಾವನೆಯಾಗಿದೆ. ಏನೆಂಬು ದನ್ನು ಸ್ತ್ರೀಮನೋಧರ್ಮವನ್ನು ಚೆನ್ನಾಗಿ ತಿಳಿದಿರುವ ನಿನಗೆ ಹೆಚ್ಚಾಗಿ ಹೇಳಬೇಕಾಗಿಲ್ಲ.” ನಂದಿನಿ:- -ನೀನೇನೋ ನನ್ನನ್ನು ಬಹು ಪ್ರಾಚ್ಛೆಯೆಂದೇ ಹೇಳುವೆ? ಆದರೆ, ನನಗೆ ಅಷ್ಟು ಪ್ರೌಢಿಮೆಯಿಲ್ಲ. ಹೇಗಾದರೂ ಆಗಲಿ; ನಿನ್ನ ಮಾತಿ ನಂತೆಯೇ ಅದರೂ, ನಾದಾನಂದನಿಗೆ ಅಸಮಾಧಾನ,........ ಅಚಲ:-ಅಷ್ಟಕ್ಕೇ ತಡೆದು,-'ಆತನಿಗೇಕೆ ಅಸಮಾಧಾನ? ಸ್ವರ್ಣೆಯ ವರಿವರ್ತನದಿಂದ ಅವನು ಅಸಮಾಧಾನಹೊಂದುವ ಕಾರಣವಿಲ್ಲ. ಒಂದು ವೇಳೆ ಒಂದು ವಿಷಯದಲ್ಲಿ ಹೇಳಿದರೆ ನಂಬಲಾದೀತು ! ನಂದಿನಿ:--ತಲೆದೂಗಿ,--" ಅದನ್ನೆನೂ ಕೇಳಬೇಕಾದುದೇ ಇಲ್ಲ. ಯಾವಾಗಲೂ ಇದ್ದೇ ಇದೆ.” ಅಚಲ:-ಕುತೂಹಲದಿಂದ,-'ನಂದಿನಿ! ನಿನ್ನ ನಿಜವಾದ ಅಭಿಪ್ರಾಯವನ್ನು ಬಿಚ್ಹೇಳು ? ನಾದನಿಗೂ ಉತ್ತಮನಾದ ವರನು ನಮಗೆ ದೊರೆಯಲಾರನು! ಅವನು ಸಕಲಭಾಗದಲ್ಲಿಯೂ ನಿನಗೆ ಅನುಗುಣಪಾತ್ರನೆಂಬುದು ನನ್ನ ನಂಬಿಕೆಯಾಗಿದೆ ನಂದಿನಿ:- ವಿಸ್ಮಯದಿಂದ,-- "ಇದೇಕೆ ? ಅಣ್ಣ ! ನೀನೇ ಹೀಗೇಕೆ ಬೋಧಿಸುತ್ತಿರುವೆ? ನಾದನನ್ನು ಈಗ ,ಸುತ್ತಿ ಕಾಡುತ್ತಿರುವ ಆಧೀರಭಾವದಿಂದ ಬಿಡಿಸಲಾರದೆಯೋ ? ಸರ್ವವಿಧದಿಂದ ಅವನನ್ನು ಅವಿಚಲನನ್ನಾಗಿ ಮಾಡುವ ಪುರುಷಪ್ರಯತ್ನವಾದರೂ ನಿನ್ನನ್ನು ಬಿಟ್ಟು ಹೋಗಿರುವುದೋ? ಅಥವಾ ನನ್ನಲ್ಲಿ ಅನುಮಾನವೇನಾದರೂ ಕಂಡುಬಂದಿರುವುದೋ? ಹೇಳು; ಏತರಿಂದ ಹೀಗೆ ಹೇಳಿದೆ?” ಅಚಲ:-ಅಂತಹದೇನೂ ಇಲ್ಲ. ನಂದಿನಿ! ಈಗಲೇ ನೀನು ಅವನನ್ನು ಮದುವೆಯಾಗಬೇಕೆಂದು ಹೇಳಲಿಲ್ಲ. ಆತನು ವಿದ್ಯಾಭ್ಯಾಸಂಗದ ಇಚ್ಛಿತಫಲವನ್ನು ಹೊಂದುವಂತಾದಬಳಿಕ,-ನಿನ್ನ ಸಂಕಲ್ಪ ಸಿದ್ಧಿ ಯೋಗವು ಕಂಡುಬಂದಬಳಿಕ, ಹಾಗೂ ಸರ್ತೀಕರ್ತವ್ಯವನ್ನು ಕೈಕೊಳ್ಳುವುದು ಶ್ರೇಯಸ್ಕರವೆಂಬುದು ನಿನ್ನ ಮನಸ್ಸಿಗೆ ನಿರ್ಧರವಾದ ಬಳಿಕ, "ನಾದಾನಂದನನ್ನೇ