ಪುಟ:ಮಾತೃನಂದಿನಿ.djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

ಮಾತೃ ನಂದಿನಿ 1 ಸ್ವಾಮಿಯಾಗಿ ವರಿಸಬೇಕೆಂಬುದು ನನ್ನ ಕೋರಿಕೆಯಾಗಿದೆ. ಇದಕ್ಕೆ ಬೇರೆಬೇರೆಯಾಗಿ ಭಾವಿಸಬಾರದು. ನಂದಿನಿ:-ಉದಾಸೀನದಿಂದ.- "ಅಂತಹ ಸಂಭವವು ಕಂಡುಬಂದಾಗ ನೋಡಿಕೊಳ್ಳುವ! ಹಾಗೂ ಆ ವೇಳೆಯಲ್ಲಿ ನಿನ್ನ ಹಿತಸೂಚನೆಯನ್ನೂ, ಗುರುಜನರ ಅಜ್ಜಿಯನ್ನೂ ಮೀರಿ, ವ್ಯತಿರಿಕ್ತವಾಗಿ ನಡೆಯತಕ್ಕವಳೆಂದು ನೀನೇನಾದರೂ ಸಂದೇಹಪಡುವೆಯೇ? ಅಂತಹ ಸಂಶಯವಿದ್ದರೆ ಬಿಟ್ಟು ಬಿಡು! ನನಗೆ ಈಗ ಬೇಕಾಗಿರುವ ವರವೆಂದರೆ. ನಾದಾನಂದನು ನಿಜವಾದ ವಿದ್ಯಾರ್ಥಿಯಾಗಬೇಕು. ಸೊಕ್ಕಿನ ಮಕ್ಕಳನ್ನು ದಾರಿಗೆ ತರಬಲ್ಲ ಧೈರ್ಯಸೈರ್ಯ-ನಾಹಸಾದಿಗಳು ಆತನಲ್ಲಿ ಬಲವಾಗಿ ಬೇರೂರಿರಬೇಕು. ಅಂತದ ರಿಂದ ನಮ್ಮ ದೇಶಮಾತೆಯ ಜೀರ್ಣೋದ್ಧಾರ ಕಾರ್ಯವು ಸ್ವಲ್ಪಕ್ಕೆ ಸ್ವಲ್ದದರೂ ನಾರ್ಥಕ್ಯವಾಗಬೇಕು. ಇಷ್ಟಾದರೆ ಸಾಕು. ಅಚಲ:- ಜಗನ್ಮಾತೆಯ ಅನುಗ್ರಹವಿದ್ದ ರಾದೀತು! ಸ್ವರ್ಣ ಕುಮಾರಿ ಮತ್ತೆ ಬಂದು,- ಅಣ್ಣನು ಈಗ ಇಲ್ಲಿಗೆ ಬರಲೊಲ್ಲ ನಂತೆ. ಅಮ್ಮನು ನಿಮ್ಮಿಬ್ಬರನ್ನೂ ಅಲ್ಲಿಗೇ ಬರುವಂತೆ ಹೇಳಿರುವಳು.ಎಂದು ಹೇಳಿ ನಿಲ್ಲದೆ ಹೊರಟು ಹೋದಳು. ಅತಲಚಂದ್ರನೂ ನಂದಿನಿಯ ಎದ್ದು ಉಪಾಹಾರಕ್ಕಾಗಿ ನಡೆದರು.

              ___ ___

ಪ್ರಿಯಸೋದರಿಯರೇ! ಸುಹೃತ್ಸಹೋದರರೇ!! ಈ ಪರಿಚ್ಚೇದಾದ್ಯಂತವೂ ನಿಮ್ಮಿಂದ ಮಥಿಸಲ್ಪಟ್ಟು ದಷ್ಟೆ ! ಆದರೆ ನಂದಿನೀ-ಅಚಲಚಂದ್ರರ ನಿಶ್ಚಲ ಮನೋಧರ್ಮವೂ, ಅವರಲ್ಲಿ ನೆಲೆಗೊಂಡಿರುವ ದೇಶಭಾಷಾಭಿಮಾನವೂ, ಸ್ವಲ್ಪಕ್ಕೆ ಸ್ವಲ್ಪವಾದರೂ ನಿಮಗೆ ಮನನ ವಾಗಿರಬೇಕಲ್ಲವೇ? ಹಾಗಿದ್ದರೆ, ನಮ್ಮ ಅರ್ಯಭೂಮಾತೆಯ ಪ್ರಾಶಸ್ತ್ರವು ಮತ್ತೆ ಪ್ರಕಾಶಕ್ಕೆ ಬರುವುದೆಂದು ದೃಢವಾಗಿ ನಂಬಬಹುದು ! ಆಗಲಿ.