ಪುಟ:ಮಾತೃನಂದಿನಿ.djvu/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

0 66 ಸತಿ ಹಿತೈ ಸಿಟಿ ನಂದಿನಿಯು ನಾಲ್ಕಾರು ನಿಮಿಷಗಳ ವರೆಗೆ ಇದಿರು ನೋಡಿದಳು; ನರೇಶನು ನಿರುತ್ತರನಾಗಿಯೇ ಕುಳಿತು ಏನನ್ನೂ ಯೋಚಿಸುತ್ತಿದ್ದನು. ತನ್ನ ಪ್ರಶ್ನೆಗೆ ಉತ್ತರವಿಲ್ಲದಿದ್ದುದನ್ನು ಕಂಡು, ನಂದಿನಿಯು ಮತ್ತೆ ಕೇಳಿ ದಳು,- ಅಪ್ಪ! ಉತ್ತರವಿಲ್ಲವೇಕೆ? ಇಷ್ಟರ ಹೋತನೆಯಾದರೂ ಎಕೆಂಬುದೇ ನನಗೆ ತಿಳಿದಿದೆಯಲ್ಲಾ ? ' ನರೇಶ:- ಮೆಲ್ಲನೆ-ಕನ್ಯಾಪಿತೃತ್ವವೊಂದೇ ವಿಚಾರಕ್ಕೆ ಸಾಕಲ್ಲವೇ, ತಾಯಿ ? ' ನಂದಿನಿ:- ಚಕಿತಭಾವರಿಂದ,- ಈವರೆಗೂ ಇಲ್ಲದಿದ್ದ ವಿಕಾರವು ಇಂದೇನು? -ನರೇಶ:- ನಿನ್ನಿನ ಮಧ್ಯಾಹ್ನ ದಲ್ಲಿ ನಡೆದುದೆಲ್ಲವನ್ನೂ ಚೆನ್ನಾಗಿ ಕೇಳಿ ದೆಯಷ್ಟೆ ? ನಂದಿನಿ:-ಕೇಳಿದೆನು; ಏಕೆ? ನರೇಶ:-ಏಕೆಂದರೆ, ಏನು ಹೇಳಲಿ ? ನಂದಿನಿ! ನಿನ್ನಿನಿಂದ ನನಗೆ ಕ್ಷಣಕ್ಷಣಕ್ಕೂ ಮೇಲೆ ಬೀಳಬರುತ್ತಿರುವ ಸಮಾಜಶಾಸನದ ಸಂಬಂಧ ವಾದ ನಿಷ್ಟುರಗಳೇ ಹೀಗೆ ಮಾಡುತ್ತಿರುವುವು! ನಂದಿನಿ:-ನಿಷ್ಟುರವೇಕೆ? ನರೇಶ:--ನಿಷ್ಟುರಕ್ಕೆಂದರೆ, ಮಗಳಿಗೆ ಮದುವೆ ಮಾಡದಿರುವುದೂ ಮದುವೆಯಿಲ್ಲದ ನಿನ್ನನ್ನು ಬಹುಮಾನಿಸುವುದೂ, ಸಾಲದೇ ? ನಂದಿನಿ:-ನಿಷ್ಟುರಕ್ಕೆ ಹೆದರಿ ಅನಿಷ್ಟವನ್ನುಂಟುಮಾಡಿಕೊಳ್ಳುವುದೇ ಮರುಳಾಟಕ್ಕೆ ಮದ್ದೇನು ? ನರೇಶ:-ಅನಿಷ್ಟವಾಗದಂತೆಯೂ ಇಷ್ಟವೇ ಕೈ ಕೊಡುವಂತೆಯೂ ಮಾಡಬೇಕೆಂಬುದು ನನ್ನ ಅಭಿಪ್ರಾಯ. ಆದರೆ ಸಕಾರಣವಾಗಿ ವಿಮರ್ಶಿಸಿ ದಲ್ಲದೆ ಯಾವುದೂ ನಿರ್ಧರವಾಗದೆಂದು ಬಂದೆನು, ನಂದಿನಿ:-ಹಾಗಿದ್ದರೆ ಈಗ ನನ್ನಿಂದ ಆಗಬೇಕಾದುದೇನಿದೆ? ನರೇಶ:-ಮತ್ತನೂ ಇಲ್ಲ. ಸ್ವರ್ಣೆಯ ವಿವಾಹವಿಚಾರದಲ್ಲಿ ನಿನ್ನ ಅಭಿಪ್ರಾಯವೇ ಬೇಕು, ನಂದಿನಿ:-ನಿನ್ನ ಅಭಿಪ್ರಾಯವೇನು?