ದಿ 61 ಮಾತೃನ೦ದಿನಿ ನಗೇಶ:-ನನ್ನ ಅಭಿಪ್ರಾಯದಲ್ಲಿ ಇನ್ನೂ ಎರಡು ವರ್ಷವಾಗ ಬೇಕೆಂಬುದು ! ನಂದಿನಿ:-ಅದೇನು ? ಈಗಲೇ ಏಕಾಗಬಾರದು? ನಗೇಶ:- ಇನ್ನೂ ಅವಳ ಮನಸ್ಸು ಸ್ವರೂಪ-ಸ್ವಧರ್ಮ ಸ್ವಾವ ಲಂಬನ ಮತ್ತು ಪ್ರಾಪಂಚಿಕ ಜ್ಞಾನಗಳನ್ನು ಚೆನ್ನಾಗಿ ತಿಳಿದುಕೊಳ್ಳುವಂತಾ ಗಿಲ್ಲ. ಅದು ತಿಳಿದುಬರುವವರೆಗೂ ಮತ್ತಾವ ತೊಡಕಿಗೂ ಸಿಕ್ಕಿಸಬಾರ ದೆಂಬುದೇ ನನ್ನ ಮತವು. ಇದರಲ್ಲಿ ನಿನ್ನ ಅಭಿಪ್ರಾಯವೇನು ? ನಂದಿನಿ:-ನಾನು ಹೇಳುವುದೇನು ? ನಿನ್ನ ಅಭಿಪ್ರಾಯದಮೇಲೆಯೂ ನನ್ನ ದೇ? ಹನುಮಂತನ ಮುಂದೆ ಹಾರುವ ಗುಬ್ಬಿಯೇ? ನಗೇಶ:ಹಾಗಲ್ಲ, ನಂದಿನಿ! ಈ ವಿಚಾರದಲ್ಲಿ ನಿನ್ನ ಅಭಿಪ್ರಾಯವು ಅತ್ಯಾವಶ್ಯಕವಾಗಿರಬೇಕು. ನಿನ್ನ ಮನಸ್ಸಿಗೆ ಸರಿತೋರಿದುದನ್ನು ಮುಚ್ಚಿ ಡದೆ ಬಿಟ್ಟಹೇಳು. ನಂದಿನಿ:-ನನ್ನ ಅಭಿಪ್ರಾಯವೆಂದರೆ, ಈಗಲೇ ಮಾಡುವುದು ಶ್ರೇಯಸ್ಕರವೆಂದು ಹೇಳಬೇಕಾಗಿದೆ. ನರೇಶ:-ಚಕಿತಭಾವದಿಂದ,-ಈಗಲೇ ಮಾಡಬೇಕೇ? ನಿಜವಾಗಿ ಹೇಳವೆಯಾ? ಇದು ನಿನ್ನ ಮನಃಪೂರ್ವಕವಾಗಿ ಹೇಳಿದ ಮಾತೇ ?? ನಂದಿನಿ:-- ಮನಃಪೂರ್ವಕವಲ್ಲದೆ ಮತ್ತೇನು ? ನಿಜವಾಗಿಯೂ ಹೇಳುವ ಮಾತೇ ಸರಿ, ಸ್ವರ್ಣೆಯ ವಿವಾಹಕ್ಕೆಂದರೆ ಇದೇ ಸಕಾಲವೆಂಬುದು ನನ್ನ ಅಭಿಪ್ರಾಯವು, ನಗೇಶ:-ಕುತೂಹಲದಿಂದ, -ತರಿಂದ ಹೀಗೆ ಹೇಳುವೆ?” ನಂದಿನಿ:-ಸ್ವಾನುಭವದಿಂದಲ್ಲದೆ ಮತ್ತೇತರಿ೦ದೆಯೂ ಅಲ್ಲ. ನರೇಶ:-ವಿಸ್ಮಯದಿಂದ,-ಇದರಲ್ಲಿ ನಿನಗೆ ಸ್ವಾನುಭವವೆಂಬುದು ಹೇಗೆ?” ನಂದಿನಿ:- ಹೇಗೆಂದರೆ, ಹೆಣ್ಣು ಮಕ್ಕಳಿಗೆ ಕಾಲವರಿತು ಮದುವೆ ಮಾಡುವುದರಿಂದ ಶ್ರೇಯಸ್ಕರವೆಂಬುದೂ ಇಲ್ಲದಿದ್ದರೆ, ಅವರ ಎಂದರೆ ಹೆಣ್ಣು ಮಕ್ಕಳ ಮನಸ್ಸಮಾಧಾನಕ್ಕೆ ಕಂಟಕಗಳು ಅಪಾರವೆಂಬುದೂ ನನ್ನ ತಿಳಿವಿಗೆ ಬಂದಿವೆ.
ಪುಟ:ಮಾತೃನಂದಿನಿ.djvu/೭೫
ಗೋಚರ