ಪುಟ:ಮಾತೃನಂದಿನಿ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸುವ ಅವಶ್ಯಕತೆಯಿಲ್ಲ

O 2 ತಿ ಸತಿ ಹಿತೈಷಿ ನೇ • ಇಷ್ಟು ಅಬ್ಬರವೇತರಿಂದ? ” ಏಕೆ? ತಿಳಿಯಲಿಲ್ಲವೇ ಸಹೃದಯರೇ? ಅಂದಿನ 'ನಂದಿನೀ ವಿಜಯದ 'ದೆಸೆಯಿಂದ ನೊಂದು, ಕುಂದಿ ಹೋದ ಗಣೇಶಸಂತ, ವಿಶ್ವನಾಥ ಭಟ್ಟಾ ಚಾರ್ಯರ ಕುತಂತ್ರವೇ ಇದಲ್ಲವೇನು? ಪಾವ! ಗಣೇಶಸಂತರು ತಮ್ಮ ಹದಿ ನಾರು ವರ್ಷದ ಶುದ್ಧ ಶುಂಠ ಕುಮಾರನಿಗೆ ಸ಼಼ಣ಼಼೯ಕುಮಾರಿಯನ್ನು ತೆಗೆದು ಕೊಳ್ಳಬೇಕೆಂಬ ಉದ್ದೇಶದಿಂದ ಅಂದಿನ ವಿವಾಹಪ್ರಸ್ತಾಪವನ್ನೆತ್ತಿದರು. ಆದರೆ, ಸ್ವಾಭಿಮಾನಪರಿಪೂರ್ಣನಾದ ನರೇಶರಾಯನು ಉದಾಸೀನದಿಂದಾ ದರೂ ಸುಮ್ಮನಿರದೆ, ರೇಗಿರೇಗಿ ಮೇಲೆ ಬಿದ್ದು ನುಡಿದುದೂ, ನಾಲುದುದಕ್ಕೆ ಅವಳಾದಳೋ ಬೀದಿಯವಳನ್ನು ಕರೆತಂದು ಮುಂದೆ ಬಿಟ್ಟು, ಅವಳ ನಿರ್ಲ ಚೈತನದಿಂದ ತನ್ನ ತೇಜೋವಧೆ ಮಾಡಿದುದೂ' ಇವೆರಡು ಕಾರಣಗಳೂ ಅವರಿಬ್ಬರ ಹೃದಯಶುಗಳಾಗಿ ನೆಟ್ಟು ಹೋಗಿವೆಯಂತೆ! ಈ ಅಪಮಾನದ ಹತನಾಧನೆಗಾಗಿ ಅವರಾವಾಗಲೇ ಕಂಕಣವನ್ನು ತುಟನಿಂತರು. ಇಚ಼ ಪೂರ್ಣಕ್ಕೆಂದರೆ, ಮತಾಚಾರದ ಪದ್ಧತಿಗಳನ್ನು ತೊರೆದು, ಬಲ್ಲವರೆಂಬ ಗುರು ಜನರನ್ನು ಜರಿದು, ವಯಸಾದ ಹುಡುಗಿಯರನ್ನು ಮದುವೆಯಿಲ್ಲದೆ ಬೆಳೆ ಮಿಸಿಕೊಂಡಿರುವ ಭಂಡತನದ ಒಂದೇ ದೋಷವೇ ಬೆಟ್ಟ ದಂತಾಗಿರುವುದು ಲ್ಲವೇ? ಇನ್ನೇನಾಗಬೇಕು? ಸರಿ ಸರಿ! ಈಗ ತಿಳಿದೆವು. ಹಾಗಾದರೆ ನಡೆಯಿರಿ. ನಾವು ಉಭಯ ಪಕ್ಷಗಳಗೂ ಮಧ್ಯದಲ್ಲಿದ್ದು, ನಡೆಯಬಹುದಾದುದೆಲ್ಲವನ್ನೂ ಕಣ್ಣಾರೆ ನೋಡಿ, ಕಿವಿಯಾರೆ ಕೇಳಿಬರುವ? « ಓಹೋ! ನಮಗೂ ಒಪ್ಪಿತು. ಹಾಗಿ ದ್ದರೆ ನಾವು ಎಲ್ಲಿಗೆ ಹೋಗಬೇಕು ? ಮತ್ತೆಲ್ಲಿಗೆ? ಶಿವಪುರದ ಬೇವಾನಂದ ಪರಮಹಂಸರ ಪವಿತ್ರಾಶ್ರಮಕ್ಕೆ ! ” ಏನು, ಅಶ್ರಮಕ್ಕೆ? ಅದೇನು ಪರ್ಣಶಾಲೆಯನ್ನೂ ಹೊಗಬೇಕೋ?” ಹೀಗೇಕೆ ಭೀತರಾಗಿರುವಿರಿ-ಪಾಠಕರೇ? ಒಂದುವೇಳೆ ಪರ್ಣಶಾಲೆಯನ್ನೇ ಹೊಕ್ಕೆವೆಂದರೂ ನಮಗಾಗುವ ನಷ್ಟವೇನು ? ಕಷ್ಟವೆಂಬಿರೋ? ಕಷ್ಟಸುಖಗಳನ್ನು ಸಮತುಲನವಾಗಿ ಸಹಿಸದಿದ್ದರೆ ಮನುಷ್ಯರಾಗುವಿರೋ? ಅದಿರಲಿ; ಈ ಕಾಲದ ಸ್ವಾಮಿಗಳ, ಮತಬೋಧಕರ ಅಥವಾ ಪಿರಾಧಿಕಾರಿ ಗಳಾದವರ ಸಮೂಹದಲ್ಲಿ, ವನದಲ್ಲಿ, ಪರ್ಣಶಾಲೆಯಲ್ಲಿ, ತರುಮೂಲದಲ್ಲಿ