ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



ಯನ್ನು ಒಳಗೆ ಸೇದುತಲೂ, ಆಮೇಲೆ ಹೊರಗೆ ಡುತಲೂ ಇದ್ದನು, ಹಗೆಯು ಸುತ್ತಿ ಸುತ್ತಿಕೊಂಡು ಮೇಲಕ್ಕೆ ಏರುತ್ತಲೂ, ಒಂದೊಂದುವೇಳೆ ಹಠಾತ್ತಾಗಿ ಕೆಳಗೆ ಜಾರಿಬೀಳುತ್ತಲೂ, ಇದ್ದಕ್ಕಿದ್ದ ಹಾಗೆಯೇ ' ಸು ಯ", ಎಂದು ಕಿಟಕಿಯ ಮುಖಾಂತರವಾಗಿ ಓಡಿಹೋ ಗುತ್ತಲೂ ಆಟವಾಡುತಿದ್ದಿತು. ರಾಮಕೃಷ್ಣನು ಈ ಲೀ ಲಾವಿಲಾಸವನ್ನು ನೋಡುತ ನೋಡುತ ತನ್ನನ್ನು ತಾನೇ ಮರತು ಕುಳಿತಿದ್ದನು. ಅಷ್ಟು ಹೊತ್ತಿಗೆ ಮುಂಚೆ ದೇ ವೇಂದ್ರನು ಅಕಸ್ಮತ್ತಾಗಿ ತಾನು ಕುಳಿತಿದ್ದ ಕೋಣೆ ಯೊಳಗೆ ಬಂದುದನ್ನು ನೋಡಿ, ರಾಮಕೃಷ್ಣನು ಕೊಂಚ ಅಚ್ಚರಿಗೊಂಡು, ಮರಾದೆಯೊಡನೆ ಆತನನ್ನು ತನ್ನ ಪ ಕ್ರದಲ್ಲಿದ್ದ ಕುರ್ಚಿಯಮೇಲೆ ಕುಳಿತುಕೊಳ್ಳುವಂತೆ ಹೇ ೪ ಮಹಾಶಯ ! ಇದೇನು ಇಷ್ಟು ಹೊತ್ತಿಗೆ ಮುಂಚೆ ದಯಮಾಡಿಸಿದುದು ! ಹೆಚ್ಚು ಸಮಾಚಾರವೇನೂ ಇಲ್ಲವ ಸ್ಮ? ಎಂದನು.

ದೇವೇಂದ್ರವಿಜಯ- ಹೆಚ್ಚಸಮಾಚಾರವಿಲ್ಲದೆ ಏ

ನು? ಕೇಳಿದರೆ, ನಡೆದಸಂಗತಿಯು ಮನುಷ್ಯಮಾತ್ರದಿನ ರಿಗೆ ಸಾಧ್ಯವಲ್ಲವೆಂದು ನಿಮಗೇ ಗೊತ್ತಾಗುವುದು, ಅನಂತ ರ ಅಂತಹ ವ್ಯಾಪಾರವನ್ನು ನಾನೆಂದಿಗೂ ನೋಡಿಯ ಇಲ್ಲ-ಕೇಳಿಯೂ ಇಲ್ಲವೆಂದು ನೀವೇ ಅಭಿಪ್ರಾಯ ಪಡು ವಿರಿ.

ರಾಮಕೃಷ್ಣ-ಏನು ! ಅಂತಹ ಘಟನೆಯು ಸಂಘ

ಟಿಸಿರುವುದೇ?

ದೇವೇಂದ್ರ-ಬಹಳ ಆಶ್ರವಾದ ಸಂಗತಿ ದೈವಿ

ಕವೇ ಹೊರತು ಮಾನಸಿಕವಲ್ಲವೇ ಅಲ್ಲ. ನೀವು ಈ