ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಾಮ-ಆದಂತಿರಲಿ, ಪ್ರಕೃತವಿಷಯವೇನು ? ತಿಳಿ ಸಿರಿ, ನಿಮ್ಮ ಹೃದಯಾರಾಧ್ಯದೇವತೆಯು ಹಿಂತಿರುಗಿ ಬರಲಿಲ್ಲವಷ್ಟೆ? ದೆವೇಂದ್ರ-ಡಾಕ್ಟರು ಫುಲ್ ಸಾಹೇಬನು ಅನೇಕ ದಿವಸ ಆರಭಿ ಸ್ಥಾನದಲ್ಲಿದ್ದು ಅಲ್ಲಿಂದ ಸುತ್ತಿಕೊಂಡು ಕಾಮರೂಪಕ್ಕೆ ಬಂದನು. ಅವನು ಅನೇಕ ವಿಧವಾದಮ ಣಿಮಂತಪ್ರಧಗಳನ್ನು ಬಲ್ಲನು. ಅವನು ಬಹಳ ಹ್ಯಷ್ಟ ಪುಷ್ಟಾಂಗನಾಗಿಯ ಇದ್ದನು. ರಾಮ-ಅದನ್ನು ಅವನು ಅನೇಕರಿಗೆ ತೋರಿಸಿಯೇ ಸತ್ತಿದಾನೆ. ದೇವೇಂದ-ಜಮೇಲಿಯಾ ಆತನ ಶಿಷ್ಯಳು-ಶಿಷ್ಯ ಳು ಮಾತ್ರವೇ ಅಲ್ಲ, ಹೆಂಡತಿ, ರಾಮ-ನಾನು ಬಲ್ಲೆನು. ಜಮೇಲಿಯಾ ಸಾಮ್ಯಾ ಹೆಂಗಸಲ್ಲ. ದೇವೇಂದ-ಗುರುವಿಗಿಂತ ಶಿಷ್ಯಳೇ ಬಹಳ ಸಮರ್ಥಳು. ರಾಮ-ಇದ್ದರೂ ಇರಬಹುದು. ಈಗ ನಡೆದಿ ರುವುದೇನು? ದೇವೇಂದ್ರ-ಆ ಮನುಷ್ಯರೂಪದ ಪಿಶಾಚಿ-ಜ ಮೇಲಿಯಾ ಇನ್ನೂ ಸತ್ತಿಲ್ಲ. ರಾಮ-(ಆಶ್ಚರ್ಯದಿಂದ) ಸತ್ತಿಲ್ಲ ! ಅದು ಹೇಗೆ ಹೇಳಿರಿ? ದೇವೇಂದ್ರ-ನಾನು ಆ ಸಂಗತಿಯನ್ನು ನಿಮಗೆ ಹೇಳುವುದಕ್ಕಾಗಿಯೇ ಬಂದೆನು. ಅವಳು ಬದುಕಿರುವು ದಾದರೆ ಬೇಗನೆ ಅದು ತಮಗೆ ಗೊತ್ತಾಗದೇ ಇರದು, ಅವ