ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನ್ನರಿತು ರಸಾಯನಗಳನ್ನು ತಯಾರ್ಮಾಡಿ, ಅವುಗಳ ಪ್ರಯೋಗದಿಂದ ನಿಮ್ಮಂತಹ ಎಷ್ಟೋ ಜನರನ್ನು ಚೈತ ನ್ಯವಿಲ್ಲದವರನ್ನಾಗಿ ಮಾಡಿರುವರು. ದೊಡ್ಡ ದೊಡ್ಡ ಡಾಕ್ಟರುಗಳು ಎಷ್ಟೋ ಪರೀಕ್ಷೆಮಾಡಿ ನೋಡಿದರೂ ಅವರಿಗೆ ಯಾವುದೂ ಗೊತ್ತಾಗುವುದೇ ಇಲ್ಲ. ಒಂದು ದಿನ ಎಲ್ಲರ ಎದುರಿಗೂ ಫಕೀರನೊಬ್ಬ ನು ಗೋರಿಯಲ್ಲಿಡಲ್ಪಟ್ಟನು, ಫಕೀರನು ಅವಧಿಯ ದಿ. ನದ-ಅಂಬರೆ ಒಂದು ತಿಂಗಳ-ವರೆಗೂ ಗೋರಿಯ ನ್ನು ಬಹಳ ಜಾಗರೂಕತೆಯಿಂದ ನೋಡಿಕೊಂಡಿರಬೇ ಕೆಂದು ತನ್ನ ಶಷ್ಯರಿಗೆ ಪ್ಪಣಿಮಾಡಿ ಸಮಾಧಿಸ್ಥನಾದ ನು. ಒಂದು ತಿಂಗಳು ಕಳೆದ ಹೂಡಲೆ ಫಕೀರನನು ಗೋರಿಯಿಂದ ಹೊರಗೆ ತೆಗೆದುರು, ಆ ಕೂಡಲೆ ಸತ್ತಂ ತಿದ್ದ ಫಕೀರನ ದೇಹದಲ್ಲಿ ಪ್ರಾಣವಾಯು ಸಂಚರಿಸ ಲಾರಂಭವಾಯಿತು. ಅನಂತರ ಫಕೀರನು ಏಳುವುದು, ಕೂಡುವುದು, ಮಾತನಾಡುವುದು, ತನಗೆ ಮನಬಂದಂತೆ ಅಲ್ಲಿಗೆ ಇಲ್ಲಿಗೆ ತಿರುಗಾಡುವುದು, ಇವೇ ಮೊದಲಾದ ಕೆ ಲಸವನ್ನು ಮಾಡತೊಡಗಿದನು. ಬಡುಮಾತಿನಿಂದೇನು' ಫಕೀರನು ವೊದಲು ಹೇಗಿದ್ದನೋ, ಹಾಗೆಯೇ ಆಗಿಬಿ ಟ್ಟನು. ರಾಮ-(ನಗುತ) ಯಾಚ ಇದಿರಿಗೆ ಇದೆಲ್ಲವೂ ನಡೆ ದಿರುವುದೋ ಅವರೆಲ್ಲರೂ ಕತ್ತೆಗಳಾಗಿರಬೇಕು. ದೇವೇಂದ್ರ-ನಾವೇ ಕತ್ತೆಗಳು ! ನಾನು ನೋಡಿ ದ ಸಂಗತಿಗಳೆಲ್ಲವನ್ನೂ ನನ್ನ ಕಣ್ಣಾರೆ ನೋಡಿರುವುದರಿಂ ದ ನನಗೆ ಅದರಲ್ಲಿ ನಂಬುಗೆಯುಂಟು. ಪ್ರತ್ಯಕ್ಷವಾಗಿ ನೋ ಡಿದುದು ಸುಳ್ಳೆಂದಿಗೂ ಆಗಲಾರದು.