ಈ ಪುಟವನ್ನು ಪರಿಶೀಲಿಸಲಾಗಿದೆ
೧೬
ಮತ್ತು ಅವನ ಸೋದರಳಿಯ ಶಚೀಂದ್ರ, ಇವರಿಬ್ಬರೂ ಕುಳಿತಿದ್ದರು. ಆಗ ರಾಮಕೃಷ್ಣನು ಸಾಮಾನ್ಯವಾದ ವೇಷವನ್ನು ಧರಿಸಿಕೊಂಡು, ಗಂಗಾಧರನು (ಮತ್ತೊಬ್ಬ ಪೋಲೀಸ್ಇ೯ಸ್ವೆಕ್ಟರು) ಪೋಲೀಸಿನ ಯೂನಿಫಾರಮನ್ನು ಹಾಕಿಕೊಂಡು ದೇವೇಂದ್ರವಿಜಯನ ಗಾಡಿಯಲ್ಲಿ ಕುಳಿತರು. ಗಾಡಿಯವನು ಗಾಡಿಯನ್ನು ಮುಂದಕ್ಕೆ ಓಡಿಸಿದನು. ದಾರಿಯಲ್ಲಿ ಹೋಗುತ್ತಾ ಸೂಪರಿಂಟೆಂಡೆಂಟ್ ಸಾಹೇಬರನ್ನೂ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಹೊರಟರು. ಯಥಾಕ್ರಮದಲ್ಲಿ ಎಲ್ಲರೂ ಸ್ಮಶಾನಕ್ಕೆ ಬಂದು ಸೇರಿದರು. ಎಲ್ಲಿ ನಾರೀ ರೂಪದಲ್ಲಿನ ವಿಶಾಚಿಯನಿಸಿದ ಜುಮೆಲೆಯು ಮಣ್ಣು ಮಾಡಲ್ಪಟ್ಟಿದ್ದಳೋ, ಅಲ್ಲಿಗೆ ಎಲ್ಲರೂ ಗಾಡಿಯಿಂದಿಳಿದು ನಡೆದುಕೊಂಡು ಹೋದರು. ಅಷ್ಟು ಹೊತ್ತಿಗೆ ಇಬ್ಬರು ಕೆಲಸಗಾರರು ಗುದ್ದಲಿ ಪಿಕಾಶಿ ಮುಂತಾದ ಸಾಮಾನುಗಳನ್ನು ತೆಗೆದುಕೊಂಡು ಅಲ್ಲಿಗೆ ಬಂದು ಸೇರಿದರು. ಸೂಪರಿಂಟೆಂಡೆಂಟ್ ಸಾಹೇಬರು ಅಪ್ಪಣೆಯನ್ನು ಕೊಡಲಾಗಿ ಕೂಲಿಯವರು ಗೋರಿಯನ್ನು ಅಗೆಯಲು ಪ್ರಾರಂಭಮಾಡಿದರು. ಶವದ ಪೆಟ್ಟಿಗೆಯು ಗೋರಿಯಿಂದ ಹೊರಗೆ ತೆಗೆಯಲ್ಪಟ್ಟು ಅದರ ಬಾಗಿಲು ತೆರೆಯಲ್ಪಟ್ಟಾಗ ಒಳಗೆ ಎಂತಹ ನೂತನವಾದ ನೋಟವನ್ನು ನಾವು ನೋಡುವೆವೋ ಎಂದು ಮೂರು ಜನ ಪೋಲೀಸಿನವರೂ, ಇಬ್ಬರು ಪತ್ತೇದಾರರೂ ಯೋಚಿಸಿ,ಪ್ರತಿಯೊಬ್ಬನೂ ತುಟಿ ಪಿಟಕ್ಕನ್ನದೆ ಅತ್ಯಾದರದಿಂದ ಕುತ್ತಿಗೆಯನ್ನೆತ್ತಿ ಬಿರುಗಣ್ಣುಗಳಿಂದ