ಈ ಪುಟವನ್ನು ಪರಿಶೀಲಿಸಲಾಗಿದೆ
೧೫
"ಒಳ್ಳೆಯದು, ಒಳ್ಳೆಯದು, ದೇವೇಂದ್ರ ಬಾಬು! ಗೊತ್ತಾಗುವುದು.,, "ಜುಮೆಲೆಯು ತನ್ನ ಮರಣಾನಂತರವೂ ನನ್ನನ್ನು ಬೆನ್ನಟ್ಟುವಳೆಂದು ಹೆದರಿಸಿದ್ದಳು. ಆ ಸಂಗತಿಯನ್ನು ನಾನು ನಿಮಗೆ ಮೊದಲೇ ತಿಳಿಸಿರಲಿಲ್ಲವೇ?,, "ತಿಳಿಸಿರಲಿಲ್ಲ.,, "ನಾನು ಅವಳ ಗೋರಿಯಮೇಲೆ ದೃಷ್ಟಿಯಿಡುವುದಕ್ಕೆ ಅದೊಂದು ಕಾರಣ. ಅದಕ್ಕಾಗಿಯೇ ನಾನು ಆಕೆಯ ಗೋರಿಯನ್ನು ಹೆಚ್ಚಾದ ಎಚ್ಚರಿಕೆಯಿಂದ ನೋಡುತಿದ್ದುದು. ಆಗ ಅವಳು ತೋರಿಸಿದ ಭಯಕ್ಕೆ ಈಗ ಕಾರಣವು ಗೊತ್ತಾಯಿತು. ಇದಕ್ಕಾಗಿಯೇ ಅವಳು, ತನ್ನ ಮರಣವಾದಮೇಲೆಯಾದರೂ ತನ್ನ ಪ್ರತಿಜ್ಞೆಯನ್ನು ಸಾರ್ಥಕಗೊಳಿಸಿಕೊಳ್ಳುವೆನೆಂದು ಹೇಳಿದ್ದಳು. "ಮೊದಲು ನಿಮಗೆ ಇದು ಗೊತ್ತಾಗಲಿಲ್ಲವೇನೋ! ಈಗ ಮಾತ್ರ, ಆಕೆಯ ಮನದ ಅಭಿಪ್ರಾಯವು ನನಗೆ ತೋರಿಬಂದಂತೆ ಕಂಡುಬರುವುದು.,, ಐದನೆಯ ಸಂಧಿ (ಶ್ಮಶಾನದಲ್ಲಿ) ಮಧ್ಯಾಹ್ನಾತ್ ಪರ ಎರಡು ಗಂಟೆಗೆ ಸರಿಯಾಗಿ ಮೊದಲು ತಿಳಿಸಿದ್ದ ಪೋಲೀಸ್ ಠಾಣೆಯ ಇದಿರಿನಲ್ಲಿ ಒಂದು ಗಾಡಿಬಂದು ನಿಂತಿತು. ಅದರಲ್ಲಿ ದೇವೇಂದ್ರವಿಜಯ