ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೪

"ನಾವು ಮೊದಲು ಜುಮೆಲೆಯ ‌ಗೋರಿಯನ್ನು ಅಗೆಯಿಸಿ ಏನಾಗಿದೆಯೆಂಬುದನ್ನು ನೋಡಿಕೊಂಡು ಬರೋಣ ಆಮೇಲೆ ಬಾಕಿವಿಷಯ.

"ಒಳ್ಳೆಯದು ; ನಾನು ಸಿದ್ಧನಾಗಿರುವೆನು, "ಈ ದಿನ ಸಾಯಂಕಾಲ?,

"ಆಗಲಿ,,

ಸಾಯಂಕಾಲ ಮೂರು ಗಂಟೆಯ ಸಮಯದಲ್ಲಿ ಇಲ್ಲಾಗಲಿ ಅಥವಾ ಅಲ್ಲೇ ಆಗಲಿ ನನ್ನನ್ನು ತಾವು ನೋಡ ಬಹುದು, "ಇಲ್ಲೇಆಗಲಿ, ನೀವು ಇಲ್ಲಿಗೆ ಎರಡುಗಂಟೆ ಸುಮಾರಿಗೆ ಬರೋಣಾಗಲಿ, ಹೊರಡುವಾಗ ಗಂಗಾಧರನನ್ನು ಜತೆಯಲ್ಲಿ ಕರೆದುಕೊಂಡು ಹೋಗಬೇಕು. ದಾರಿಯಲ್ಲಿ ಸೂಪರಿಂಟೆಂಡೆಂಟ್ ಸಾಹೇಬರನ್ನೂ ಗಾಡಿಯಲ್ಲಿ ಕುಳ್ಳಿರಿಸಿಕೊಂಡು ಎಲ್ಲರೂ ಸೇರಿ ಸ್ಮಶಾನಕ್ಕೆ ಹೋಗಿ ಬರೋಣ. ನಾನು ನನ್ನ ಗಾಡಿಯನ್ನು ತೆಗೆದುಕೊಂಡು ಬರುವೆನು. ಅದಕ್ಕಾಗಿ ತಾವು ಕಾದಿರಬೇಕಾದುದಿಲ್ಲ. ನಾನು ಕಾಲಕ್ಕೆ ಸರಿಯಾಗಿ ಬರುವೆನು. ಸಾಧ್ಯವಾದರೆ ಶಚೀಂದ್ರನನ್ನೂ ಜತೆಯಲ್ಲಿ ಕರೆದುಕೊಂಡು ಬರುವೆನು, ಅಷ್ಟರಲ್ಲಿ ತಾವು ತಕ್ಕ ಏರ್ಪಾಟನ್ನು ಮಾಡಿಟ್ಟುಕೊಳ್ಳಿ. "ನನಗೆ ಸಂಬಂಧಪಟ್ಟ ಕೆಲಸವೆಲ್ಲವನ್ನೂ ನಾನು ಸರಿಯಾಗಿಯೇ ಇಟ್ಟುಕೊಳ್ಳುವೆನು. "ನನ್ನ ಮಾತು ಜ್ಞಾಪಕವಿರಲಿ, ನಿಜವಾಗಿಯೂ ಗೋರಿಯಲ್ಲಿ ಹೆಣವಿಲ್ಲವೆಂಬುದು ಗೊತ್ತಾಗುವುದು.,,