ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧v

         ದೇವೇಂದ್ರವಿಜಯನೊಬ್ಬನು ಹೊರತಾಗಿ ಉಳಿದವರೆಲ್ಲರೂ ಒಂದೇ ತಡವೆಗೆ ಕಲ್ಲಿನ ಪ್ರತಿಮೆಯಂತೆ ಸ್ತಂಭಿತರಾಗಿಯೂ, ಚೈತನ್ಯವಿಲ್ಲದವರಾಗಿಯೂ, ಪರಿಣಮಿಸಿದರು.
       ಬಹಳ ಹೊತ್ತಾದಮೇಲೆ ರಾಮಕೃಷ್ಣನು ಚೇತರಿಸಿಕೊಂಡು, ದೇವೇಂದ್ರನನ್ನು ಕುರಿತು-ದೇವೇಂದ್ರ! ಇದೆಂತಹ ವ್ಯಾಪಾರವೆಂಬುದು ನೀನೇನಾದರೂ ಒಲ್ಲೆಯ?ಎಂದನು.
     ದೇ--ಆವುದು ಸಂಭವಿಸಿರುವುದೋ, ಅದು ಸಹಜವೆಂದೇ ನಾನು ತಿಳಿದಿರುವೆನು.
     ರಾ-ನೀವೇನೋತಿಳಿದಿರುವಿರಿ.ಈಗ ನಮ್ಮೆಲ್ಲರಿಗೂ ತಿಳಿಸಿ ನೋಡೋಣ. ನಮಗಾದರೋ ಇದು ಸ್ವಪ್ನವೆಂದೇ ಬೋಧೆಯಾಗುತ್ತಿರುವುದು.
     ದೇ-(ಹೆಣವನ್ನು ತೋರಿಸುತ್ತಾ) ಈ ಮನುಷ್ಯನಿಗೇ ಜುಮೆಲೆಯು ಆ ಕಾಗದವನ್ನು ಬರೆದಿರಬೇಕು, ಈ ಮನುಷ್ಯನಿಗೆ ಆಕೆಯ ಹೆಂಡತಿಯಾಗುವುದಾಗಿ ಅಪೇಕ್ಷಿಸಿದ್ದಳು. ಅವಳ ಇಷ್ಟದಂತೆಯೇ ಈ ಯುವಕನು ಕೆಲಸಮಾಡಿರುವನು. ಜುಮೆಲೆಯು ಇವನಿಗೆ ಏನೇನನ್ನು ಹೇಗೆ ಹೇಗೆ ಹೇಳಿದ್ದಳೋ, ಅವನದನ್ನು ಹಾಗೆ ಹಾಗೆಯೇ

ನೆರವೇರಿಸಿ, ಈತನು ಅವಳನ್ನು ಉದ್ದಾರಮಾಡಿರಬೇಕು, ಅನಂತರ ಆ ಪಿಶಾಚಿಯು ತನ್ನನ್ನು ಉದ್ದಾರಮಾಡಿದವನನ್ನೇ ಕೊಂದು ತಾನಿದ್ದ ಶವದ ಪೆಟ್ಟಿಗೆಯಲ್ಲಿ ಇವನನ್ನು ಮಲಗಿಸಿ, ಮೊದಲಿನಂತೆಯೇ ಗೋರಿಯಲ್ಲಿ ಹೂತು ಕೊನೆಗೆ