ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಲಾಯನವಾಗಿರುವಳು, ಜುಮೆಲೆಯು ಈಗ ಈ ದೇಶದಲ್ಲಿಯೇ ಇರುವಳೆಂದು ನನಗೆ ನಂಬುಗೆಯುಂಟು. ಕಾರಣವೇನೆಂದರೆ-ಈ ವ್ಯಕ್ತಿಯು ಜುಮೆಲೆಯನ್ನು ಉದ‍್ದಾರಮಾಡುವುದಕ್ಕೆ ಬಂದನೆಂಬುದರಲ್ಲಿ ಕಿಂಚಿತ್ತೂ ಸಂದೇಹವಿರುವುದಿಲ್ಲ, ಇವನು ಅವಳ ಈ ಗುಪ್ತ ರಹಸ್ಯವನ್ನೂ, ಅವಳು ಜೀವದಿಂದಿರುವಳೆಂಬುದನ್ನೂ, ತಿಳಿದವನಾಗಿದ್ದನು. ಒಂದು ವೇಳೆ ಈ ಮನುಷ್ಯನು ಬದುಕಿರುವುದೇ ಆದರೆ ಈ ವಿಷಯವೆಲ್ಲವನ್ನೂ ಇತರರಿಗೆ ತಿಳಿಸುವನು, ಎಂಬ ಭಯದಿಂದ ಜುಮೆಲೆಯು ಇವನನ್ನು ಕೊಂದುಬಿಟ್ಟಿರುವಳು. ಈಗ ಅವಳಿಗೆ ಯಾವ ವಿಧವಾದ ಅಪಾಯವೂ ಇಲ್ಲವೆಂದೂ, ಜುಮೆಲೆಯು ಸತ್ತು ಹೋದಳೆಂದು ಎಲ್ಲರೂ ಅಭಿಪ್ರಾಯ ಪಡುವರೆಂದೂ ಅವಳು ತಿಳಿದುಕೊಂಡಿರುವಳು. ಆದುದರಿಂದಲೇ ಜುಮೆಲೆಯು ದೂರ ಓಡಿ ಹೋಗಲು ಕಾರವೇನೂ ಇರಲಾರದು. ದೇವೇಂದ್ರನು ಹೀಗೆ ಹೇಳಿದುದನ್ನು ಕೇಳಿ ಎಲ್ಲರೂ ಬಹಳವಾಗಿ ಕಳವಳಗೊಂಡರು, ರಾ-ದೇವೇಂದ್ರ! ನಿಮ್ಮ ಕಾಗದದಲ್ಲಿ ಒಂದು ಅಂಶ ಮಾತ್ರ ಸರಿಹೋಗುವುದಿಲ್ಲ.ನಿಮ್ಮ ಕಾಗದದಂತೆ ಲೆಕ್ಕ ಹಾಕಿ ನೋಡಿದರೆ, ಈ ಶವವು ಏಳೆಂಟು ದಿನಗಳಿಂದ ಇಲ್ಲಿರುವಂತೆ ತೋರುವುದಿಲ್ಲವೆ? ದೇ-ತೋರುವುದು. ರಾ-ಈ ಶವವು ಏಳೆಂಟು ದಿನಗಳದೆಂದು ಹೇಳುವುದಕ್ಕಾಗುವುದಿಲ್ಲ. ಇದು ತುಂಬ ಹೊಸದಿದ್ದ ಹಾಗೆ ಕಾಣುವುದು. ದೇ-ಇದಕ್ಕೆ ಎರಡು ಕಾರಣಗಳುಂಟು.