ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


 ಸೂಪರಿಂಟೆಂಡೆಂಟ್-ಏಳೆಂಟು ದಿವಸದ ಹೆಣವು ಇಷ್ಟು ಹೊಸದಾಗಿರಲು ಕಾರಣವೇನು ? ಹೇಳಿ, ನೊಡೋಣ, ದೇ-ಮೊದಲನೆಯ ಕಾರಣ - ಈ ಮನುಷ್ಯನು ಹಠಾತ್ತಾಗಿ ಕೊಲ್ಲಲ್ಪಟ್ಟಿರುವನು, ಇವನ ಶರೀರದ ರಕ್ತವೆಲ್ಲವೂ ಹೊರಗೆ ಹೋಗಲು ಅವಕಾಶವಿಲ್ಲ. ಎರಡನೆಯಕಾರಣ-ಮರಣವಾದ ಕೂಡಲೆ ಕೊಂಚವೂ ಸಾವಕಾಶವಿಲ್ಲದೆ ಹೆಣವು ಗೋರಿಯೊಳಗೆ ಹೊಳಲಟತಾದಕಾರಣ, ಈ ದೇಹದಲ್ಲಿ ಗಾಳಿಯ ಸಂಚಾರಕ್ಕೆ ಅವಕಾಶವೇ ಇಲ್ಲ. ಸೂಪ-ಅದೇನೋ ಆಗಿ ಹೋಯಿತು. ಪ್ರಕೃತ ಈ ಖೂನನ್ನು ಪತ್ತೇ ಮಾಡುವುದು ಆವಶ್ಯಕವು. ಈ ಖೂ೯ಜುಮೆಲೆಯಿಂದ ಹೇಗೆನಡೆಯಿತು, ಅವಳನ್ನು ಗೋರಿಯಲ್ಲಿಟ್ಟಾಗ, ಅವಳ ಪಕ್ಕದಲ್ಲಿಯೇ ಶಾಸ್ತ್ರಾಸ್ತ್ರಗಳನು ಇಟಿದ್ದರೇನು ? ದೇ-ಇರಲಿಲ್ಲವೆಂದು ಒಪ್ಪಿಕೊಳ್ಳುವೆನು, ಆದರೆ ಈ ಭಾಗ್ಯಹೀನನು ಜುಮಲೆಯನ್ನು ಉದ್ಧಾರಮಾಡಲು ಬಂದಾಗ,ಈತನ ಬಳಿಯಲ್ಲಿ ಯಾವ ಶಸ್ತವೂ ಇರಲಿಲ್ಲವೆಂಬುದು ಒಪ್ವುವುದಕ್ಕಾಗುವುದಿಲ್ಲ. ಡಾಕಿನಿಯು ತನ್ನ ಇಷ್ಟಇವನಲ್ಲಿದ್ದ ಶಸ್ತ್ರವನ್ನು ಉಪಯಾಂತರದಿಂದ ತೆಗೆದುಕೊಂಡಿರಬೇಕು. ರಾ~-ಬನ್ನಿರಿ, ಈ ಮನುಷ್ಯನು ಯಾರೆಂಬುದನ್ನು ಮೊದಲು ತಿಳಿದುಕೊಳ್ಳೋಣ, ಅದಾದಮೇಲೆ ಹೇಗೆ ಖೂ೯ ನಡೆದಿರುವುದೆಂಬುದನ್ನು ಜಿಜ್ಞಾಸೆ ಮಾಡಬಹುದು.