ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨

ದನ್ನು ನಾನೀಗ ಅನುಮಾನದಿಂದ ತಿಳಿದುಕೊಂಡಿರುವೆನು ಎಂದನು. ರಾಮ_ಎಲ್ಲಿ? ದೇ_ಖಿರೋಜಾ ಬೀಬಿಯ ಮನೆಯಲ್ಲಿ. ಆ ಸ್ಥಳ ದಲ್ಲಿಯೇ ಖಿರೋಜಾ ಬೀಬಿಯ ಮನೆಯಿರುವುದ ರಾಮಬಾಬು ! ಈಗಿನ ಸಂದರ್ಭವು ಯಾವ ರೀತಿಯಲ್ಲಿರುವುದೆಂಬುದು ಗೊತ್ತೋ? ರಾ_ಬಹಳ ಅದ್ಭುತವಾದ ವಿಷಯ ! ನನ್ನ ಬುದ್ಧಿ ಯೇ ಲುಪ್ತವಾಗಿ ಹೋಗಿರುವುದು. ದೇ_ಜುಮೆಲೆಯು ಈಗಲಾದರೂ ಮನದವಳೆಂಬುದನ್ನು ಯೋಚಿಸಿರುವಿರಿ? ಇಂತಹ ಅದ್ಭುತ೪ಾದ ಹೆಂಗಸುನ್ನು ಮತ್ತೆಲ್ಲಿಯಾದರೂ ನೋಡಿರುವಿರಾ?

ರಾ_ಇಲ್ಲ. ಇಂತಹ ಹೆಂಗಸನ್ನು ನಾನೆಂದಿಗೂ ನೋಡಲಾರೆ. ದೇವೇಂದ್ರ ! ನೀವು ಕೂಡ ಆಕೆಗೆ ಕೊಂಚವಾದರೂ ಭಯಪಡುವಿಂ-ರ್ಭುಪೂದೇ ಏನು!

ದೇ_ಆಕೆಯ ಪರಾಕ್ರಮ ಮತ್ತು ಸವಾಸ ಇವುಗಳನ್ನು ನೋಡಿ ನಾನು ಆಂತ್ಯದಲ್ಲಿರುಘಿಸುವೆನು, ಮತ್ತು ನನ್ನ ಹೆಂಡತಿಯ ಮೇಲೆ ಆಕೆಯು ನಡೆಯಿಸಬೇಕೆಂದಿರುವ ಗೂಢವಾದ ದುರಭಿಸಂಧಿಯು ಮುಂದೆ ಮಹಾ ವಿಪತ್ತನ್ನು ಸೂಚಿಸುವುದೇನೋ ನಿಜ. ಆದರೆ, ಭಯ! ಜನ ರು ಯಾವುದಕ್ಕೆ ಭಯವೆನ್ನುವರೋ ಅದನ್ನು ಮಾತ್ರ ನಾನು ಕಾಣೆನು. ಭಯವೆಂಬುದು ನನ್ನ ಜಾತಕದಲ್ಲಿ ಬರದೇ ಇಲ್ಲ. ರಾ_ಈಗ ನೀವೇನು ಮಾಡುವಿರಿ? ದೇ_ಅವಳನ್ನು ಹುಡುಕಿಕೊಂಡು ಹೋಗುವೆನು.