ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೩

ರಾ_ಅವಳು ಸಿಕ್ಕುವಳೋ? ದೇ_ಸಿಗುವ ಸಂಭವವುಂಟು. ಅವಳು ಸಿಕ್ಕದೇ ಹೋದಲ್ಲಿ, ನನ್ನ ಜನ್ಮದಲ್ಲಿ ಕಾರ್ಯಹಾನಿಯೆಂಬುದು ಇದೇ ಮೊದಲನೆಯದಾಗುವುದು

  _________

ಆರನೆಯ ಸಂಧಿ (ಖಿರೋಜಾ ಬೀಬಿ)

ಮರುದಿನ ಬೆಳಿಗ್ಗೆ ಸುಮಾರು ಹತ್ತು ಗಂಟೆಯ ಸಮಯದಲ್ಲಿ ದೇವೇಂದ್ರನು ಮುದುಕನಾದ ಮುಸಲಮಾನನ ವೇಷವನ್ನು ಹಾಕಿಕೊಂಡು ಕೈಯಲ್ಲಿ ಒಂದು ರೈಲ್ ಚೀಲವನ್ನು ಹಿಡಿದು ಕೊಂಡು, ಸೂಳೆಗೇರಿಯಲ್ಲಿದ್ದ ಖಿರೋಜಾಬಾಯಿಯ ಮನೆಗೆ ಹೋದನು.

ಅವನು ಬಾಗಿಲನ್ನು ಎರಡು ಸಲ ಕೈಯಿಂದ ತಟ್ಟು ತಲೆ, ಸುಂದರಿಯೊಬ್ಬಳು ಬಾಗಿಲನ್ನು ತೆರೆದು ಇದಿರಿಗೆ ಕಾಣಿಸಿಕೊಂಡಳು. ಆಕೆಗೆ ಸುಮಾರು ಇಪ್ಪತ್ತಾರು ಇಪ್ಪತ್ತೇಳು ವರ್ಷವಯಸ್ಸಾಗಿದ್ದಿತು. ಅವಳ ಅಂಗಾಂಗಗಳ ಸಂಘಟನೆಯು ಬಹಳ ಸುಂದರವಾಗಿದ್ದಿತು. ಏತಕೆಂದರೆ ರಮಣಿಯು ಪರಮ ಸುಂದರಿಯಾಗಿದ್ದಳು. ಕರಿಯ ಗುಡ್ಡುಗಳಿಂದ ಮನೋಹರವಾದ ಕಣ್ಣುಗಳ ಕೆಳಭಾಗದಲ್ಲಿ ಅತಿಸೂಕ್ಷ್ಮವಾಗಿ ಹಚ್ಚಿದ ಕಾಡಿಗೆಯು, ಆಕೆಯ ವಿಶಾಲವಾದ ಕಣ್ಣುಗಳ ಕಾಂತಿಯನ್ನು ಹೆಚ್ಚಿಸುತಿದ್ದಿತು. ಆಕೆಯು ಸಂಚಾ ಕಲಾಕ್ಕ ತ್ತಿನ ಕೆಲಸದಿಂದ ತುಂಬಿದ್ದ ಲಂಗ ವನ್ನುಟ್ಟಿದ್ದಳು, ಅಲ್ಲಲ್ಲಿ ಚಮಕೀ ಕೆಲಸಮಾಡಿದ್ದ ಮೇಲು