ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪

ಹೊದಿಕೆಯನ್ನು ಹೊದ್ದಿದ್ದಳು. ದಪ್ಪನಾಗಿಯೂ, ಉನ್ನತವಾಗಿಯೂ ಇದ್ದ ಕುಚಗಳಿಂದ ಪರಿಪೂರ್ಣವಾದ ವಕ್ಷ ಸ್ಥಳದಲ್ಲಿ ಮುಖಮಲ್ಲಿನ ಕುಪ್ಪಸವನ್ನು ತೊಟ್ಟಿದ್ದಳು. ಮೂಗಿನಲ್ಲಿ ಥಳ ಥಳಿಸುವ ವಜ್ರದ ಮೂಗುತಿ. ಆಕೆಯ ದೇಹದಲ್ಲಿ ಭಂಗಾರದ ಕಾಂತಿಯು ಪ್ರಕಾಶಿಸುತಿದ್ದಿತು. ಆಕೆಯ ಅನಂತರೂಪದಲ್ಲಿ ಸೌಂದರ್ಯದ ರಾಶಿಯು ಮೇಲೆ ಮೇಲೆ ಉಕ್ಕಿ ಬರುತಿದ್ದಿತು. ಈ ಸುಂದರಿಯ ಹೆಸರೇ ಖಿರೋಜಾಬೀಬಿ.

ಖಿರೋಜೆಯು ಕಪಟವೇಷಧಾರಿಯಾದ ದೇವೇಂದ್ರನ ಇದಿರಿಗೆ ಬಂದುನಿಂತು-ತಾವು ಯಾರು? ಮಹಾಶಯ ಯಾರನ್ನು ಹುಡುಕಿಕೊಂಡು ಬಂದಿರುವಿರಿ ? ಎಂದು ಕೇಳಿದನು.

ದೇ_ಇಲ್ಲಿ ಕಬೀರುರ್ದ್ದೀ ಎಂಬುವರು ಯಾರಾದರೂ ಇರುವರೇ?

ಖಿ_ಅಹುದು ಮಹಾಶಯ, ಇರುವುದೇನೋ ನಿಜ. ದೇ_ಆತನನ್ನು ನಾನು ಈಗ ನೋಡಲು ಸಾಧ್ಯವೇ ?

ಖಿ_ಆಗಲಾರದು. ಅವನು ಎಲ್ಲಿಗೋ ಹೋಗಿ ಐದಾರು ದಿನಗಳಾದುವು. ಆತನು ಇನ್ನೂ ಹಿಂದಿರುಗಿ ಬಂದಿಲ್ಲ. ಆತನು ಹೊರಟು ಹೋದಮೇಲೆ ಆತನ ತಂಗಿಯೊಬ್ಬಳು ಇಲ್ಲಿಗೆ ಬಂದಿರುವಳು; ಆಕೆಯು ತನ್ನ ಅಣ್ಣನನ್ನು ನೋಡಬೇಕೆಂದು ಇಂದಿನವರೆಗೂ ನಿರೀಕ್ಷಿಸಿ ಕೊಂಡಿರುವಳು. ದೇ_ಕಬೀರನು ಆವಾಗ ಹಿಂದಿರುಗಿ ಬರುವನೆಂಬು