ವಿಷಯಕ್ಕೆ ಹೋಗು

ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

40 ನನ್ನ ದಯೆಯನ್ನು ಅಪೇಕ್ಷಿಸುವನೇ ? ಅವನು ನನ್ನನ್ನು ಲಕ್ಷಮಾಡುವನೇ? ಬೇಕಘ* - ಬೇಕೂಫ್ - ನಾನು ಅವನನ್ನು ಎಷ್ಟೇ ಪ್ರೀತಿಸಿದರೂ, ಅವನು ಮಾತ್ರ ಒಂದು ದಿನವಾದರೂ ಅದನ್ನು ಸ್ಮರಿಸುವುದಿಲ್ಲವೆಂಬುದೇ ನನಗೆ ಹೆ ಚ್ಚಾಗಿ ದುಃಖವನ್ನುಂಟುಮಾಡುವುದು. ಹೇಗಾದರೂ ಆಗಲಿ, ನೀನು ಕೊಂಚ ಅನುಗ್ರಹ........ “(ವಿನಯದಿಂದ) ಅನುಗ್ರಹವಂತಹದು? ಹೇಳೋ ಣಾಗಲಿ “ಅವನಾಗಲಿ ಅಥವಾ ಅವನ ತಂಗಿಯಾಗಲಿ ಪುನಃ ಇಲ್ಲಿಗೆ ಬರಬಹುದು. “ನನಗೆ ನಂಬುಗೆಯಿಲ್ಲ. “ಕಾಗದವಾದರೂ ಬರೆಯಬಹದು. “ಬರೆದರೂ ಬರೆಯಬಹುದು-ಅದುಸಂಭವ. “ಅವನು ಬರೆಯಲೇ ಬರೆಯುವನು. “ಸರಿ ಸರಿ, ಹಾಗಾದರೆ ನಾನು ಅವರಿಗೆ ಕಾಗದ ಬರೆ ಯುವಾಗ ತಮ್ಮ ವಿಷಯವನ್ನು ಘನಾಪಿಸುವೆನು. 'ಬೇಡ, ಬೇಡ, ಖಿರೋಜೆ ! ನೀನು ನನ್ನ ವಿಷಯ ವನ್ನು ತಿಳಿಸಬೇಡ, ಕಂಡೆಯ. ಹಾಗೆ ತಿಳಿಸಿದರೆ ಕಷಕ್ಕೆ ಬರುವುದು. ಅವನು ಭಾರಿ ಮೋಸಗಾರ, ಭಾರಿ ಕಳ್ಳ, ನನ್ನ ವಿಷಯವನ್ನು ಅವನಿಗೆ ಕೊಂಚವೂ ತಿಳಸಬೇಡ. ತಿಳಿಸಿದರೆ ತಲೆ ತಪ್ಪಿಸಿಕೊಳ್ಳುವನು. ಅವನಿರುವ ಸ್ಥಳ ವನ್ನು ಮಾತ್ರ ನನಗೆ ನೀನು ತಿಳಿಸು, ನಾನೇ ಹೋಗಿ ಅವ ನನ್ನು ನೋಡಿಕೊಂಡು ಬರುವೆನು. ಒಂದುವೇಳೆ ನನ್ನವಿ ಷಯವಾಗಿ ಅವನೇನಾದರೂ ನನ್ನನ್ನು ಕೇಳುವುದಾದರೆ, ನನಗಾವುದೂ ಗೊತ್ತಿಲ್ಲವೆಂದು ಹೇಳಿಬಿಡು. ನಿನ್ನ ಕಾಗದ