ಪುಟ:ಮಾಯಾವಿನಿಯ ಅತ್ಯಾಚಾರ ಮತ್ತು ಪರಿಣಾಮ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

“ಕಬೀರನು ಮೂರು ವಾರಗಳ ಹಿಂದೆ ಒಂದು ಪತ್ರ ವನ್ನು ಮತ್ತೊಬ್ಬನ ಹೆಸರಿನಲ್ಲಿ ಸೃಷ್ಟಿ ಮಾಡಿರುವನು. “ಫೋರ್ಜರಿ! “ಹೌದು, ಫೋರ್ಜರಿಯೇ; ಈಗ ಆ ವಿಷಯವೆಲ್ಲ ವೂ ಕೋರ್ಟಿಗೆ ಹಾಜರಾಗಿರುವುದು-ಕೆಲವು ದಿನಗಳೊಳ ಗಾಗಿ ಎಲ್ಲವೂ ತಾನಾಗಿಯೇ ಬಹಿರಂಗವಾಗುವುದು “ಹಾಗಾದರೆ, ಎಂತಹ ಸರ್ವನಾಶ!” “ಸರ್ವನಾಶವೇ ಆದರೂ ಅದಕ್ಕೆ ಉಪಾಯವುಂಟು. “ಅದೇನು? “ಅವನು ಯಾವ ಹೆಸರನ್ನು ಫೋರ್ಜರಿ ಮಾಡಿರುವ ನೋ, ಅದು ನನ್ನ ಹೆಸರು. “ಆಮೇಲೆ! “ಅದಕ್ಕಾಗಿಯೇ ನಾನು ಆತನನ್ನು ನೋಡಲು ಬಂ ದೆನು. ಆತನ ಆಪರಾಧವೆಲ್ಲವನ್ನೂ ಕ್ಷಮಿಸುವುದಕ್ಕಾಗಿ ಯೇ ನಾನೀಗ ಬಂದಿರುವುದು. ಅವನ ಕಳಂಕವೆಲ್ಲವನ್ನೂ ಹೋಗಲಾಡಿಸಬೇಕೆಂಬುದೇ ನನ್ನ ಮುಖ್ಯೊದ್ದೇಶ, ಆದುದರಿಂದಲೇ ನಾನು ಅವನನ್ನು ವಿಪತ್ತಿನಿಂದ ಉ ದ್ದಾರಮಾಡಬೇಕೆಂದು ನೂರಾರು ರೂಪಾಯಿಗಳನ್ನು ತಂ ದಿರುವೆನು. ಈ ಹಣವೆಲ್ಲವನ್ನೂ ಅವನಿಗೆ ಕೊಟ್ಟು, ಮುಂ ದೆ ಇಂತಹ ನೀಚಕಾರ್ಯದಲ್ಲಿ ಕೈಹಾಕಬೇಡವೆಂದು ಹೇಳಿ ಹೋಗುವುದಕ್ಕಾಗಿ ನಾನು ಇಷ್ಟು ಶ್ರಮವನ್ನು ತೆಗೆ ದುಕೊಳ್ಳಬೇಕಾಗಿರುವುದು. “ತಾವೇ ಗುಣಾಢರು, ತಾವೇ ಮಹಾದಯಾಳು ಗಳು” “ದಯಾಳುವಾಗಿ ಫಲವೇನು?ಅವನು ನೀಚ, ಅವನು