ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xi

ಗಳೊಂದಿಗೆ ಚರ್ಚಿಸಿರುವುದರಿಂದ ಈ ಲೇಖನವು ಸಾಮಾನ್ನೀಕರಣಗೊಂಡ ಯಾವದೇ ಸೂತ್ರಗಳನ್ನು ಹೇಳದೆ, ಬದಲಾವಣೆಯು ಬಯಸುವ ಸಮಸ್ಯೆ ಗಳೊಡನೆ ಮುಖಾಮುಖಿಯಾಗಿ ಸಂವಾದ ನಡೆಸುತ್ತದೆ.

ಯಕ್ಷಗಾನದ 'ಪಠ್ಯ'ವೊಂದನ್ನು ಪಠ್ಯ, ಸಂದರ್ಭ, ಸನ್ನಿವೇಶ ಮತ್ತು ಪ್ರದರ್ಶನಗಳ ಸಂಬಂಧ ದೃಷ್ಟಿಯಿಂದ ಸಮಗ್ರವಾಗಿ ಅಧ್ಯಯನ ಮಾಡಿದ `ಶರಸೇತು ಬಂಧನ” ಲೇಖನವು ಯಕ್ಷಗಾನದ ವಿಮರ್ಶೆಯಲ್ಲೇ ಒಂದು ಮಹತ್ವದ ಬೆಳವಣಿಗೆ ಈ ಸಂಕಲನದಲ್ಲಿಯೇ, ತನ್ನ ವಸ್ತು ಮತ್ತು ನಿರ್ವಹಣೆಯಿಂದ ಇದು ಪ್ರತ್ಯೇಕವಾಗಿದ್ದು ಗಮನಾರ್ಹವಾಗಿದೆ.

ಯಾವುದೇ ಜಾನಪದ ಪ್ರಕಾರದಲ್ಲಿ ಪಠ್ಯ ಮತ್ತು ಅದರ ಬಳಕೆಯ ಸಂದರ್ಭವನ್ನು ಹೊ೦ದಿ ಕೊ೦ಡು ಅರ್ಥಗಳು ಬದಲಾಗುತ್ತವೆ. ಇಲ್ಲಿ ಅರ್ಥಗಳು ನಿರ್ದಿಷ್ಟ ಸಂದರ್ಭಗಳ ಮೂಲಕ ನಮನೆ ಸಂವಹನ ವಾಗುತ್ತವೆ. 'ಅರ್ಥ'ವೆಂದರೆ ಅನ್ವೇಷಿಸುವ ಒಂದು ವಸ್ತುವಲ್ಲ ; ಅದೊಂದು ಪ್ರಕ್ರಿಯೆ. ಅದು, ಒಂದು ಸನ್ನಿವೇಶ ಮತ್ತು ಅದರಿಂದ ಅನುಭವವನ್ನು ಪಡೆಯುವ ವ್ಯಕ್ತಿಗಳ ನಡುವಿನ ಒಂದು ಪರಿವರ್ತನಶೀಲ ಸಂಬಂಧ. ಪಠ್ಯದಲ್ಲಿ ಸಂಭವಿಸುವ ಬದಲಾವಣೆಗಳು, ಅರ್ಥದ ಬದಲಾವಣೆಗಳೊಂದಿಗೆ ಸಂಬಂಧ ಪಟ್ಟಿರುತ್ತವೆ. ಕೆಲವೊಮ್ಮೆ ಪಠ್ಯದಲ್ಲಿಲ್ಲದ ಅರ್ಥಗಳು ಪ್ರದರ್ಶನದಲ್ಲಿ ಆಂಗಿಕ ಅಭಿನಯ ಮತ್ತು ಮಾತಿನ ಏರಿಳಿತಗಳ ಮೂಲಕ ಪ್ರಕಟವಾಗ ಬಹುದು. ಈ ದೃಷ್ಟಿಯಿಂದ ಶರಸೇತು ಬಂಧನ ಪ್ರಸಂಗವನ್ನು ಕುರಿತ ಇಲ್ಲಿನ ವಿಶ್ಲೇಷಣೆ ತಾಳಮದ್ದಳೆಯ ರಚನೆಯನ್ನು ಕುರಿತು ಮಾಡಿದ ಬಹಳ ಮುಖ್ಯವಾದ ಒಂದು ಸಂಶೋಧನೆ. ಮುಂದಿನ ದಿನಗಳಲ್ಲಿ ತಾಳ ಮದ್ದಲೆ ಗಳನ್ನು ಈ ದೃಷ್ಟಿಯಿಂದ ಅರ್ಥಮಾಡಿಕೊಂಡರೆ, ಮತ್ತು ಅಧ್ಯಯನ ಮಾಡಿದರೆ ಈ ವಿಶಿಷ್ಟ ರಂಗಭೂಮಿಯ ಸಾಧ್ಯತೆಗಳನ್ನು ಹಿಗ್ಗಿಸಬಹುದು.

ಮುಳಿಯ ತಿಮ್ಮಪ್ಪಯ್ಯನವರ ಅಪ್ರಕಟಿತ ಯಕ್ಷಗಾನ ಪ್ರಸಂಗ 'ಸೂರ್ಯ ಕಾಂತಿ ಕಲ್ಯಾಣ'ವನ್ನು ಪರಿಚಯ ಮಾಡಿಕೊಡುವುದರ ಜೊತೆಗೆ ತಿಮ್ಮಪ್ಪಯ್ಯನವರ ಯಕ್ಷಗಾನ ಸಂಶೋಧನೆಯ ಸ್ವರೂಪವನ್ನು “ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ” ಲೇಖನದಲ್ಲಿ ವಿವರಿಸಲಾಗಿದೆ.