ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

xii

ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ ಈ ಲೇಖನವು ಈಗಾಗಲೇ ನಾನು ಉಲ್ಲೇಖಿಸಿದ “ಶರಸೇತು ಬಂಧನ” ಲೇಖನದ ತಾತ್ವಿಕ ತಳಹದಿಯಾಗಿರುವ ಒಂದು ಆಶಯ-ಪ್ರಬಂಧ. ಪಠ್ಯ, ಸಂದರ್ಭ, ಪ್ರದರ್ಶನ ಮತ್ತು ಪ್ರೇಕ್ಷಕವರ್ಗ ಈ ಸಂಬಂಧಗಳ ದೃಷ್ಟಿಯಿಂದ, ಯಕ್ಷಗಾನ ಪ್ರಸಂಗಗಳ ಪುರಾಣದ ಘಟನೆಗಳಿಗೆ ಹೊಸ ಅರ್ಥಗಳು ಪ್ರಾಪ್ತವಾಗುವ ಬಗೆಗಳನ್ನು ಇಲ್ಲಿ ವಿವೇಚಿಸಲಾಗಿದೆ.

ಯಕ್ಷಗಾನ ರಂಗಭೂಮಿಯ ಬೆಳವಣಿಗೆಗಳನ್ನು ಚರ್ಚಿಸುವವರೆಲ್ಲ ಸಾಮಾನ್ಯವಾಗಿ ವೃತ್ತಿಮೇಳಗಳನ್ನು ಮಾತ್ರ ಗಮನಿಸುತ್ತಾರೆ. ಕರಾವಳಿಯಲ್ಲಿ ಹವ್ಯಾಸಿಮೇಳಗಳು ಕೂಡ ಯಕ್ಷಗಾನದ ಬೆಳವಣಿಗೆಗೆ ಗಮ ನಾರ್ಹ ಕೊಡುಗೆ ನೀಡಿವೆ. ಹವ್ಯಾಸಿಗಳ ಭಿನ್ನ ಬಗೆಗಳನ್ನು ನಿದರ್ಶನ ಗಳೊಂದಿಗೆ ಹೇಳುವುದರ ಜತೆಗೆಯೇ ಅವರ ಸಮಸ್ಯೆಗಳನ್ನು ವಿವರವಾಗಿ ಇಲ್ಲಿ ಪಟ್ಟಿ ಮಾಡಲಾಗಿದೆ. ಇವು ಆರ್ಥಿಕ, ಸಂಘಟನಾತ್ಮಕ, ಮತ್ತು ಕಲಾ ಸಂಬಂಧಿ ಸಮಸ್ಯೆಗಳು ಈ ಸಮಸ್ಯೆಗಳ ನಿವಾರಣೆಗೆ ಏನು ಕಾಠ್ಯಕ್ರಮಗಳನ್ನು ಕೈಗೊಳ್ಳಬಹುದೆಂಬ ಕೆಲವು ನಿರ್ದಿಷ್ಟ ಮೌಲಿಕ ಸೂಚನೆಗಳು ಪ್ರಾಯೋಗಿಕ ಮಹತ್ವವುಳ್ಳವುಗಳಾಗಿವೆ.

“ಸೃಜನ ಶೀಲತೆಯ ಸಂದರ್ಭ” ಲೇಖನವು ಯಕ್ಷಗಾನಕ್ಕೆ ಸಂಬಂಧಿಸಿ ದಂತೆ ಕೆಲವು ಅಭಿಪ್ರಾಯವನ್ನು ಕೊಡುತ್ತದೆ. ಆದರೆ ಇಂತಹ ಅಭಿಪ್ರಾಯ ಗಳು ಒಂದು ತಾತ್ವಿಕ ಸ್ವರೂಪವನ್ನು ಇಲ್ಲಿ ಪಡೆದಿಲ್ಲ. ಇದೇ ವಿಷಯವನ್ನು ಎತ್ತಿಕೊಂಡು, ಅನುಕರಣ ತತ್ತ್ವದ ಮಿತಿಗಳನ್ನು ಚರ್ಚಿಸಿ ಯಕ್ಷಗಾನವನ್ನು ಅಧ್ಯಯನ ಮಾಡಬಹುದು. ಏಕೆಂದರೆ, ಅನುಕರಣ, ಅನುಸರಣ, ಸೃಜನ ಶೀಲತೆ ಇವು ರೂಢಿಯಲ್ಲಿ ಬಳಕೆಯಾಗುತ್ತಿರುವುದು ತೀರ ಸರಳ ಅರ್ಥಗಳಲ್ಲಿ ಮಾತ್ರ.

ಯಕ್ಷಗಾನ ಸಂಬಂಧಿಯಾದ ಕೆಲವು ಸಂಶೋಧನ ಟಿಪ್ಪಣಿಗಳು ಮತ್ತು ಮಾಹಿತಿಗಳು ಉಪಯುಕ್ತವಾಗಿವೆ. ಅನೇಕ ಹೊಸ ಮಾಹಿತಿಗಳ ಸಂಗ್ರಹ