ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
102
ಮಾರುಮಾಲೆ

ಅನುಬಂಧ 2: ಶರಸೇತು ಬಂಧನ ಪ್ರಸಂಗದ ಪ್ರಯೋಗದಲ್ಲಿ ಅರ್ಥ ಗಾರಿಕೆಯಲ್ಲಿ ಸಾಮಾನ್ಯವಾಗಿ ಬರುವ ಚರ್ಚೆಗಳು, ವಿಚಾರಗಳು :

1. ರಾಮನ ಮಹತ್ಕಾರ್ಯಗಳ ವಿಮರ್ಶೆ, ರಾಮನ ಜೀವನದಲ್ಲಿ ಸೇತುಬಂಧನದ ಸ್ಥಾನ.

2.ಹನುಮಂತನಿಗೆ ವಯೋಧರ್ಮ, ಆಯಾಸ, ಮುದಿತನಗಳು ಬಾಧಿಸುವುವೆ ಎಂಬ ಪ್ರಶ್ನೆ,

3. ಪವಾಡ ಸಮರ್ಥರಾದ ರಾಮನಾಗಲಿ, ಕಪಿಗಳಾಗಲಿ ಸೇತುವಿಲ್ಲದೆ ಸಮುದ್ರವನ್ನೇಕೆ ದಾಟಲಿಲ್ಲ ?

4. ಗಜನೋಹಿ ಸಂದರ್ಭದಲ್ಲಿ ಅರ್ಜುನನಿಂದ ರಚಿತವಾದ ಬಾಣಗಳ ಸೇತುವಿನ ಬಲಾಬಲ ಮತ್ತು ಅದರಲ್ಲಿ

5. ಕಪಿಗಳು ರಚಿಸಿದ ಸೇತುವೆಯ ಬಲಾಬಲ ಮತ್ತು ಅಂತಹ ಪ್ರಯಾಸದ ಅಂಶವಿಲ್ಲವೆಂಬ ವಿಚಾರ.

6. ಮೂರು ಸಲ ಕಟ್ಟುವ ಪಂಥವೇಕೆಂಬ ಪ್ರಶ್ನೆ.

7.ಹಿರಿಯರ ಬಗೆಗೆ ಕಿರಿಯರ, ಕಿರಿಯರ ಬಗೆಗೆ ಹಿರಿಯರ ವರ್ತ ನೆಯ ಕುರಿತು ವಿವೇಚನೆ.

8. ವಾನರ, ಮಾನವ ವಿಚಾರ.

9. ಹನುಮಂತ ಅರ್ಜುನರ ವರ್ತನೆಯ ಬಗೆಗೆ, ಔಚಿತ್ಯ ವಿಮರ್ಶೆ

10. ಪಂಥದಲ್ಲಿ ಸಾಕ್ಷಿಯ ಅನಿವಾರ್ಯತೆ,