ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
109
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ


1600 ರವನೆಂದೂ ಹೇಳಿದ್ದಾರೆ. (ಕುಕ್ಕಿಲ: ಪಾಯ: ಪೀಠಿಕೆ) ಸುಬ್ಬನ ಊರಿನ ಕುರಿತೂ ಹೀಗೆಯೇ ಚರ್ಚೆ ನಡೆದಿದೆ. ಕಾರಂತರು: ಪಾರ್ತಿಸುಬ್ಬ ಕೋಟದವನೆ ? ಎಂಬ ಸಂದೇಹವನ್ನು ಮೊದಲಾಗಿ ಮಂಡಿಸಿ, ಅಜಪುರದ (ಆಡುವಳ್ಳಿ) ಸುಬ್ಬನೂ, ಪಾರ್ತಿಸುಬ್ಬನೂ ಅಭಿನ್ನರೆಂದೆಣಿಸಿ ಮುಂದುವರಿ ದರು. ಆ ಬಳಿಕ (ಯಬ. 1963) ಅವರು ಇತರರು ಸುಬ್ಬನವು ಎನ್ನುವ ಪ್ರಸಂಗಗಳ ಕರ್ತೃವು ಅಜ್ಞಾತನೆಂದೂ ಕಣ್ವಪುರ ಕೃಷ್ಣನ ಭಕ್ತನೆಂದೂ ಹೇಳಿದ್ದಾರೆ. ಅಂದರೆ ಕುಕ್ಕಿಲರು ಮುಳಿಯರು ನಿರ್ಧರಿಸಿದ ಸುಬ್ಬನ ದೇಶವನ್ನೊಪ್ಪಿ ಕಾಲವನ್ನು ನಿರಾಕರಿಸಿದ್ದಾರೆ. ಕಾರಂತರು ಕಾಲವನ್ನೊಪ್ಪಿ ದೇಶವನ್ನು ಒಪ್ಪಿ, ಕರ್ತತ್ವವನ್ನು ನಿರಾಕರಿಸಿದ್ದಾರೆ. ಹೀಗೆ ಒಂದು ಪ್ರಮುಖ ವಾದ ಚರ್ಚೆಗೆ ಮುಳಿಯರ ಸಂಶೋಧನೆಯಿಂದ ಚಾಲನೆ ದೊರೆತಿದೆ.

“ಯಕ್ಷಗಾನ, ಅದರ ಮೂಲ, ಬೆಳವಣಿಗೆ” ಎಂಬ ಅಧ್ಯಾಯದಲ್ಲಿ ಯಕ್ಷಗಾನದ ಬಗೆಗೆ ಒಂದು ಸ್ವತಂತ್ರ ಗ್ರಂಥದ ಆವಶ್ಯಕತೆಯನ್ನು ಪ್ರಸ್ತಾಪಿಸಿ ಯಕ್ಷಗಾನ ಕಲೆಯ ಕುರಿತು ಒಂದು ಸ್ಥೂಲ ವಿವೇಚನೆಯನ್ನು ಮಾಡಿದ್ದಾರೆ.

“ಯಕ್ಷಗಾನ”ವೆಂಬುದು, ಒಂದು ಗಾನಶೈಲಿಯ ಹೆಸರು.ಅದು “ಗಂಧರ್ವಗಾನ” ವೆಂಬುದಕ್ಕೆ ಸಂವಾದಿಯಾದ ಪದ. ಕಿನ್ನರಗಾನವೆಂಬುದೂ ಇದರದೇ ಒಂದು ಕವಲು, ಯಕ್ಷಗಾನಕ್ಕೆ ಪ್ರತ್ಯೇಕ ಗ್ರಂಥವಿಲ್ಲದಿರುವುದಕ್ಕೆ ಕಾರಣ, ನಾಟ್ಯಶಾಸ್ತ್ರ, ನಾರದ ಸಂಗೀತ ಮೊದಲಾದ ಗ್ರಂಥಗಳು-ವ್ಯಾಪಕ ವಾದ ಅನ್ವಯವುಳ್ಳವು. ಅವೇ ಯಕ್ಷಗಾನಕ್ಕೂ ಆನ್ವಯ-ಇದು ಮುಳಿಯರ ಒಂದು ಅಭಿಪ್ರಾಯ (ಪುಟ 23, 24), ಯಕ್ಷಗಾನವೆಂಬುದು ಒಂದು ಗಾನ ಶೈಲಿ ಎಂಬುದನ್ನು ಬಹುಮಂದಿ ವಿಮರ್ಶಕರು, ಕಾರಂತರಾದಿಯಾಗಿ ಒಪ್ಪಿ ದ್ದಾರೆ. ಆದರೆ ಕುಕ್ಕಿಲರು ಮಾತ್ರ ಯಕ್ಷ-ಗಾನ ಎಂಬುದು ಮೂಲತಃ ಗಾನವಿಶೇಷವಲ್ಲವೆಂದೂ, ಒಂದು ಗೀತಪ್ರಬಂಧ ವಿಶೇಷವೆಂದೂ ಹೇಳಿದ್ದಾರೆ. (ಕುಕ್ಕಿಲ : ಪಾಯ 1975 ಪೀಠಿಕೆ xv) ಪ್ರೊ|| ಜಿ. ವೆಂಕಟಸುಬ್ಬಯ್ಯನವರೂ ಯಕ್ಷಗಾನವೆಂಬುದಕ್ಕೆ ಮೂಲತಃ ಗೇಯ ಪ್ರಬಂಧ ಜಾತಿ ಎಂಬ ಅರ್ಥವೇ ಇತ್ತೆಂದು ತಿಳಿಸಿರುವರು (ಪತ್ರ ಮೂಲಕ ನೀಡಿದ ಮಾಹಿತಿ).