ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
108
ಮಾರುಮಾಲೆ

ಮುಳಿಯರು ಸುಬ್ಬನ ಬಗೆಗೆ ಬರೆಯುತ್ತ “ಆತನ ಮೂರ್ತಿ ತಿರಿ ದುಂಡುದು, ಕೀರ್ತಿಗುರಿಗೊಂಡುದು” (ಪುಟ 21) ಎಂದಿರುವ ಮಾತೂ, ಸುಬ್ಬನ ತಿರಿದುಂಡ ಸ್ಥಿತಿ ಬೇರೆಡೆ ಉಲ್ಲೇಖಗೊಂಡುದೂ, ಒಂದು ವಿಶಿಷ್ಟ ಕಾರಣದಿಂದೆನಿಸುತ್ತದೆ. ಮುಳಿಯರ ತಾರುಣ್ಯದಲ್ಲಿ ಬಡತನದಿಂದ ಬೆಂದು ಊರು ಬಿಟ್ಟು, ತಿರಿದುಂಡು, ಸಂಗೀತ ಸಾಹಿತ್ಯಗಳನ್ನು ಕಲಿತವರು. ಹೀಗಾಗಿ ಸುಬ್ಬನ ಬದುಕಿನಲ್ಲಿ, ತನ್ನ ಬದುಕಿನ ಚಿತ್ರವನ್ನೇ ಕಂಡುದರಿಂದ ಅವನ ಬಗೆಗೆ ಮುಳಿಯರಿಗೆ ವಿಶೇಷವಾದ ಆದರ ಬೆಳೆದಿರಬೇಕು.

ಸುಬ್ಬನ ಬಗೆಗಿನ ಮುಳಿಯರು ನಿರ್ಧರಿಸಿದ ಕಾಲವನ್ನು ಡಾ. ಕಾರಂತರು ಮತ್ತು ಕುಕ್ಕಿಲರು ಇಬ್ಬರೂ ಮೊದಲು ಒಪ್ಪಿ, ಅದರ ಮೇಲಿಂದಲೆ ಬೇರೆ ವಿಷಯಗಳನ್ನು ಹೊಂದಿಸಿ, ಅಭಿಪ್ರಾಯಗಳನ್ನು ಹೇಳಿದ್ದಾರೆ.. ಇಲ್ಲಿ ಕಾರಂತರು ಒಪ್ಪಿದ್ದು ಎಂದರೆ ಸುಬ್ಬನೆಂಬ ಒಬ್ಬ ಭಾಗವತ ಇದ್ದಿರಬಹುದು ಎಂದು. ಅವನು ರಾಮಾಯಣ ಪ್ರಸಂಗಗಳ ಕರ್ತೃವೆಂದಲ್ಲ. ಹಾಗಾಗಿ ಪಾರ್ತಿಸುಬ್ಬ ಎಂಬುವನ ಕಾಲ ದೇಶಗಳು ಅವರಿಗೆ ಅಪ್ರಸ್ತುತ, ಮುಳಿಯರು ಮತ್ತು ಮೊದಲು ಕುಕ್ಕಿಲರು ಹೇಳಿದ್ದ ಸುಬ್ಬನ ಕಾಲ (18ನೇ ಶತಕದ ಕೊನೆ. 19ರ ಆದಿ)ಕ್ಕೆ ಮೊದಲಿನ ರಾಮಾಯಣ ಪ್ರಸಂಗಗಳು (ಸುಬ್ಬನ ದೆಂದು ಹೇಳಲಾದುವುಗಳು) ಕಾರಂತರಿಗೆ ದೊರಕಿದುದರಿಂದ,ಅವರು ಆ ಸುಬ್ಬನ ಕರ್ತತ್ವವನ್ನು ಪ್ರಶ್ನಿಸಿದುದು ನ್ಯಾಯವೇ ಆಗಿತ್ತು. ಕುಕ್ಕಿಲರೂ ಕೂಡಾ, ನಂತರ (ಪಾ.ಯ. 1975) 17ನೇ ಶತಕದ ಸುಬ್ಬನ ಪ್ರಸಂಗಗಳು ದೊರೆತುದನ್ನು ಹೇಳಿದ್ದಾರೆ. (ಕಾರಂತ: 1967: ಯಬ) (ಕುಕ್ಕಿಲ: ಕೋಟೆ ಕಾರಿನಲ್ಲಿ ಮಾಡಿದ ಭಾಷಣ : 1962) ಕಾರಂತರು ಸುಬ್ಬನನ್ನು ಕವಿಯೆಂದು ಒಪ್ಪಿಲ್ಲ. ಭಾಗವತನು ಮಾತ್ರವೆಂದೂ ಸುಬ್ಬನವೆನ್ನಲಾದ ಪ್ರಸಂಗಗಳು 1800ಕ್ಕಿಂತ ಬಹಳ ಪೂರ್ವದಲ್ಲಿ ರಚಿತವಾದುವೆಂದೂ ಕಾರಂತರ ಹೇಳಿಕೆ. ಕುಕ್ಕಿಲರು ಕಾರಂತರು ಪ್ರಸಂಗಗಳ ಕಾಲ ನಿರ್ಣಯ ಮಾಡಿದುದನ್ನೇ ಪ್ರಶ್ನಿಸಿ ಸುಬ್ಬನ ಕಾಲ 1800ರ ಬಳಿಕ ಎಂದು ಹೇಳಿದರೂ, ನಂತರ ಸುಬ್ಬರು ಇಬ್ಬರಿರಬೇಕೆಂದೂ, 1800ರ ಸುಬ್ಬನು ಭಾಗವತನೆಂದೂ, ಕವಿ ಸುಬ್ಬನು