ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರಕಾಂತಿ ಕಲ್ಯಾಣ
107

ಮುಳಿಯರು ಸುಬ್ಬನನ್ನು ಸ್ಥಾನಿಕ ಪಾಟಾಳಿ ಎಂಬುದನ್ನು ಅಂಗೀಕರಿಸಿ ದ್ದಾರೆ. ಇದಕ್ಕೆ ಪೂರಕವಾಗಿ - 'ರಾಮಾಯಣ ಪಾಡಿದಂ ಎಂಬುದನ್ನು ಪಾಟಾಳಿ (ಅರ್ಥಾತ್ ಪಾಡಾಳಿ) ಎಂಬುದನ್ನು ಸೂಚಿಸುವುದಾಗಿ ಹೇಳುತ್ತಾರೆ.
ಸುಬ್ಬನ ಬಗೆಗಿನ ಸಂಶೋಧನೆಗಳಲ್ಲಿ ಎರಡು ಮುಖ್ಯ ಅಭಿಪ್ರಾಯ ಗಳನ್ನು ಡಾ॥ ಶಿವರಾಮ ಕಾರಂತರು ಮತ್ತು ದಿ॥ ಕುಕ್ಕಿಲ ಕೃಷ್ಣ ಭಟ್ಟರು ಮಂಡಿಸುತ್ತಾ ಬಂದಿದ್ದಾರೆ. ಸುಬ್ಬನು ಸ್ಥಾನಿಕ ಪಾಟಾಳಿ ಎಂಬುದನ್ನು ಕುಕ್ಕಿಲರು ಒಪ್ಪಿದ್ದಾರೆ, ಕಾರಂತರು ಒಪ್ಪಿಕೊಂಡಿಲ್ಲ. ಅವರು ಮಾಲೆ ಯವರೆಂಬ ವರ್ಗಕ್ಕೆ ಸೇರಿದವನೆಂದಿದ್ದಾರೆ. (ಕಾರಂತ : 1963 : ಯ.ಬ) ಇದಕ್ಕೆ ಕಾರಣ ಕೋರ್ಟು ದಾಖಲೆಯೊಂದನ್ನು ಅರ್ಥೈಸುವಲ್ಲಿ ಅವರಿಗಾದ ಗೊಂದಲವೇ ಕಾರಣ, (ಅದೇ ಪುಟ : 209-219 ಮತ್ತು ಅನುಬಂಧ) ಇರಲಿ.*

ಮಳಿಯರು ಸುಬ್ಬನ ಕಾಲವನ್ನು ನಿರ್ಧರಿಸಲು ಬಳಸಿದ ದಾಖಲೆಗಳು ಎರಡು. ಒಂದು 1877ರ ದಸ್ತಾವೇಜು, ವಂತ್ತೊಂದು 1848ರ ದಾವೆ ಯೊಂದರ ರಾಜಿ ಅರ್ಜಿ, ಇದರಲ್ಲಿ ಪಾ.ಸಂ.ಕಯ್ಯ ಮತ್ತು ಪಾಟಾಳಿ ಸುಬ್ಬ ರಾಯರ ಮಗ ಕೃಷ್ಣಯ್ಯ ಅವರ ಸಾಕ್ಷ್ಯಗಳಿವೆ. ಸಂಕಯ್ಯನೆಂದರೆ ಸುಬ್ಬನ ಮೊಮ್ಮಗನೆಂದೂ ತೀರ್ಮಾನಿಸಿ, ಅವನ ಕಾಲವನ್ನು 1787-1862 ಎಂದು ತೀರ್ಮಾನಿಸಿದ್ದಾರೆ. ಜತೆಗೆ, ಸುಬ್ಬನು ಕುಂದಾಪುರದ ಕುಂಭಾಶಿ ಆನೆ ಗುಡ್ಡ ಮೇಳದಲ್ಲಿ ತಿರುಗಾಟ ನಡೆಸಿದ್ದನೆಂಬುದನ್ನು ಸೂಚಿಸುವ ದಯ ಮಾಡೋ ವಿಘ್ನರಾಜ” ಎಂಬ ಹಾಡನ್ನು ಉದಾಹರಿಸಿದ್ದಾರೆ.

ಸುಬ್ಬನ ಕಾಲ, ವಂಶಗಳನ್ನು ಗುರುತಿಸುವ ಮೊದಲ ಪ್ರಯತ್ನವೆಂಬು ದರಿಂದಲೂ, ಅವರಿಗೆ ದೊರೆತ ಸಾಮಗ್ರಿಯ ಮಿತಿಯ ನೆಲೆಯಲ್ಲಿ ಈ ಶೋಧನೆ ಶ್ಲಾಗ್ಯವಾಗಿದ್ದರೂ, ಸುಬ್ಬನ ವಂಶಚಿತ್ರದ ರಚನೆಯು ತೀರ ಊಹಾಪೋಹದ್ದಾಗಿದೆ ಎನ್ನಬೇಕಾಗಿದೆ.


  • ಈ ವಿಚಾರವನ್ನು ನನಗೆ ತೋರಿಸಿಕೊಟ್ಟವರು ಶ್ರೀ ಮುಳಿಯ ಮಹಾಬಲಭಟ್ಟರು.