ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
106
ಮಾರುಮಾಲೆ

ಗುರುತಿಸಿ, ಕೂಟರ ಪತನಾನಂತರ ಕನ್ನಡನಾಡಿನ ಇಳಿಗಾಲವೆಂಬುದನ್ನು ಕರಾವಳಿಯ ಪ್ರದೇಶವು ಉತ್ತರ ದಕ್ಷಿಣ ಕನ್ನಡಗಳಾಗಿ ವಿಭಿನ್ನ ಪ್ರಾಂತ್ಯಗಳೊ ಳಗೆ ಸೇರಿದುದರಿಂದ ಸಂಪರ್ಕವು ತಪ್ಪಿಹೋದುದರಿಂದ ಸಾಹಿತ್ಯ, ಕಲೆಗಳ ಕ್ಷೇತ್ರಕ್ಕಾದ ನಷ್ಟವನ್ನು ಅವರು ಗಮನಿಸಿರುವುದು ಅವರ ಇತಿಹಾಸ ಪ್ರಜ್ಞೆಗೆ ಸಾಕ್ಷಿಯಾಗಿದೆ.

'ಕವಿಯ ದೇಶಕಾಲಾದಿಗಳು ಎಂಬ ಶೀರ್ಷಿಕೆಯಲ್ಲಿ ಮುಳಿಯರು ಪಾರ್ತಿಸುಬ್ಬನ ದೇಶ ಮತ್ತು ಕಾಲ, ಕರ್ತೃತ್ವಗಳ ಬಗೆಗೆ ಸ್ಕೂಲವಾದ ಚಿತ್ರ ವೊಂದನ್ನು ಕೊಟ್ಟಿದ್ದಾರೆ. ಸುಬ್ಬನ ಪಟ್ಟಾಭಿಷೇಕದ ಪ್ರಸಂಗದ-
ಧಾತ್ರಿ ಮಂಡನ ಕಣ್ವ ನಾವಪುರದೊಳ್ ಮೈದೋರಿ ಭಕ್ತಾಳಿಯಂ
ಸತ್ಪಾದಾಂಬುಜ ನಾಮವರದಿಂ ತಣಿಯಿಸುತ್ತಾರಯ್ಯ ಶ್ರೀಕೃಷ್ಣನಾ
ಭಕ್ತಿ ಸ್ತೋತ್ರದೊಳೊಂದುಗೂಡಿ ಹರಿಯುತ್ತೀ ಪಾರ್ವತೀನಂದನಾ
ಬತ್ರಸಂಕೆಯ ರಾಗತಾಳ ವಿಧದಿಂ ರಾಮಾಯಣಂ ಪಾಡಿದಂ।।
-ಎಂಬ ವೃತ್ತದಲ್ಲಿ ಬರುವ 'ಕಣ್ಣಪುರ' ಮತ್ತು 'ಪಾರ್ವತಿ ನಂದನ ಎಂಬೆರಡು ಆಧಾರಗಳಿಂದ ಕವಿಯು ಕಣ್ಣಪುರ-ಕಣಿಯರವೆಂದು ಹೆಸರುಗಳಿದ್ದ ಕುಂಬಳೆಯವನೆಂದೂ, ಅವನು ಪಾರ್ತಿಸುಬ್ಬನೆಂದೂ ತೋರಿಸಿದ್ದಾರೆ. ರಾಮಾಯಣ ಯಕ್ಷಗಾನಗಳ ಕರ್ತೃವನ್ನು ಸುಬ್ಬನೆಂದು ಒಪ್ಪುವವರಿಗೆ, ಪ್ರಸಿದ್ಧವಾದ ಜನಶ್ರುತಿಗೆ ಸರಿಹೊಂದುವ ಈ ವೃತ್ತವೇ ಆಧಾರವಾಗಿದೆ. ಸುಬ್ಬನ ಕರ್ತೃತ್ವವನ್ನು ಸಂದೇಹಿಸುವವರಿಗೆ-ಮುಖ್ಯವಾಗಿ ಡಾ।। ಕಾರಂತರು ಈ ವೃತ್ತದ ಪಾಠವನ್ನು ಪ್ರಶ್ನಿಸಬೇಕಾಯಿತೆಂಬುದನ್ನು ಇಲ್ಲಿ ಗಮನಿಸ ಬಹುದು. ಪಟ್ಟಾಭಿಷೇಕ ಪ್ರಸಂಗದ ಹೆಚ್ಚಿನ ಪ್ರತಿಗಳಲ್ಲಿ ಈ ವೃತ್ತವಿದೆ. ಇತ್ತೀಚೆಗೆ ಸಿದ್ದಾಪುರದ ಬಳಿ ನಾನು ಕಂಡೆ ಒಂದು ಓಲೆ ಗ್ರಂಥದಲ್ಲಿಯ ಈ ಪದ್ಯ ಕಂಡುಬಂದಿದೆ. (ಮತ್ತುಮುರುಡು ಸುಬ್ರಾಯ ಹೆಗಡೆ ಅವರ ಬಳಿ ಇರುವ ಬೇರೆ ಪ್ರತಿ)