ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
111


ಇದು ಶಾಸ್ತ್ರೀಯ ಸಂಗೀತಕ್ಕೆ ತುಸು ಭಿನ್ನವಾಗಿದ್ದ, ಯಕ್ಷಗಾನವೆಂಬ ದೇಸಿ ಗಾನವನ್ನು ಸೂಚಿಸುವುದೆಂದು ಮುಳಿಯರ ಮತ. ಡಾ|| ಕಾರಂತರು (ಯಬ : 1957) ಇದನ್ನೊಪ್ಪಿದ್ದಾರೆ. ಆದರೆ ಕುಕ್ಕಿಲ ಕೃಷ್ಣ ಭಟ್ಟರು (ರಾಷ್ಟ್ರ ಮತ ವಿಶೇಷ ಸಂಚಿಕೆ : 1961) ಮತ್ತು ಚಿಟಗುಪ್ಪಿ ಭೀಮರಾವ್ (ಯಕ್ಷ ಗಾನ ಚರಿತ್ರೆ: ಮುದ್ದಣ ಶತಮಾನೋತ್ಸವ ಸಮಿತಿ: 1970) ಏಕಲ, ಯಮಲ, ವೃಂದವೆಂಬ ಗಾನಗಳಲ್ಲಿ ಇದು ಏಕಲಗಾನವೆಂದು ಸವಿಮರ್ಶವಾಗಿ ಸಾಧಿಸಿದ್ದಾರೆ.

ಯಕ್ಷಗಾನ ರಚನೆಗೆ ಸಂಬಂಧಿಸಿ ಪದ, ಮೆಲ್ವಾಡು, ಪಾಡು, ಬಾಜನೆ, ಗಬ್ಬ, ಬೆದಂಡೆಗಳೆಂಬ ನಾಗವರ್ಮನಿಂದ ಹೇಳಲ್ಪಟ್ಟ ರಚನೆಗಳನ್ನು ಹೆಸರಿಸಿ, ಅವು ಯಕ್ಷಗಾನ ಪ್ರಸಂಗಗಳ ಪ್ರಾಚೀನರೂಪಗಳೆಂದಿದ್ದಾರೆ. ಇವುಗಳಲ್ಲಿ ಬಾಜನೆಗಬ್ಬವು ವಾಚನ ಕಾವ್ಯವೆಂಬುದರ ತದ್ಭವವೆಂದೂ, ಬೆದಂಡೆ ಎಂದರೆ ವೈದಂಡಿಕವೆಂದೂ ಹೇಳಿರುವ ಕುಕ್ಕಿಲರು, ಉಳಿದ ವಿಚಾರದಲ್ಲಿ ಮುಳಿಯ ರನ್ನು ಅನುಮೋದಿಸಿದ್ದಾರೆ. ಹೀಗೆ ಯಕ್ಷಗಾನದ ಶಬ್ದಾರ್ಥ, ಪ್ರಾಚೀನತೆ ಗಳ ಪರಿಶೀಲನದಲ್ಲಿ ಮುಳಿಯರ ಗ್ರಂಥವೇ ನಂತರದವರಿಗೆ ಪ್ರೇರಣೆ ಒದಗಿ ಸಿದೆ.

ಆಟ ಮತ್ತು ಮೇಳದ ಸ್ಥೂಲ ಪರಿಚಯ ಮಾಡುವಲ್ಲಿ ಮುಳಿಯರು (40-50) ಕೆಲವು ಕಲಾವಿದರನ್ನೂ, ಸಾಮಗ್ರಿಗಳನ್ನೂ, ಸಭಾಲಕ್ಷಣವನ್ನೂ ಸೂಚಿಸಿದ್ದಾರೆ. ಹೀಗೆ ಮಾಡುವಾಗ ತೆಂಕು, ಬಡಗು ಎರಡೂ ತಿಟ್ಟುಗಳನ್ನು ಗಮನಿಸಿ ಬರೆದಿದ್ದಾರೆ. ಬಡಗು ತಿಟ್ಟಿನಲ್ಲಿ ಭಾಗವತನೊಂದಿಗೆ ವೇಷಧಾರಿಯೂ ಹಾಡುವ ಕ್ರಮ, ಅಭಿನಯದ ಪ್ರಾಶಸ್ತ್ಯ ಮತ್ತು ಬಡಗಣ ಅರ್ಥಗಾರಿಕೆಯ ಅಚ್ಚು ಕಟ್ಟನ್ನು ಉಲ್ಲೇಖಿಸಿದ್ದಾರೆ. ಸಿರಿಮುಡಿ ಅಥವಾ ಮುಂಡಾಸಿನ ಬಗೆಗೆ ಬರೆಯುತ್ತ, ಇದು ಬಟ್ಟೆ ಜರಿಗಳಿಂದ ಸುತ್ತಿಕಟ್ಟುವಂತಹದೆಂದೇ ಹೇಳಿದ್ದಾರೆ. (ಈಗ ತೆಂಕುತಿಟ್ಟಿನಲ್ಲಿ ಸಿರಿಮುಡಿಯು ತಯಾರಿಸಿಟ್ಟ ಕ್ರಮದ್ದು, ಆ ದಿನ ಜೋಡಿಸಿ ಕಟ್ಟುವಂತಹದಲ್ಲ. ಹಿಂದೆ ಬಡಗಿನಲ್ಲಿದ್ದಂತೆಯೇ ಇಲ್ಲೂ ಇದು