ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
113


ಎಂಬ ರಾಮನ ಮಾತಿನ ಪದವು-ನಮ್ಮ ಸೀಮೆಯನೇ ತಮ್ಮನರಳಿಸಿ ಕೊಳುವೂ' ಎಂಬ ವಿಭೀಷಣ ನೀತಿಯ ಮಾತು, 'ಕೆಡುಗಜ್ಜವನುಳಿವುದೆ ಯಶವಂದೆಣಿಸಲಿ' ಎಂಬ ರಾಮನ ಸಂದೇಶ, “ಸೀತಾವಲ್ಲಭ ರಾಮದೂತ ನಂಗದನೆಂದು” “ವೇದ ಬಾಯೊಳುಂಟು ಶಾಸ್ತ್ರ ಬಗೆಯನೆಂಟು | ಕೋದಿಹ ಬಲೆ ಕೈಯೊಳಗೇನ್ಮ್ಯಾ ” ಎಂಬ ಅಂಗದನ ನುಡಿಗಳು,-ಈ ಎಲ್ಲ ಭಿನ್ನ ಪಾಠ ಗಳು ಉತ್ಕೃಷ್ಟವಾಗಿದ್ದು, ಅರ್ಥಗಾರಿಕೆಯ ದೃಷ್ಟಿಯಿಂದಲೂ ಅನುಕೂಲ ವಾಗಿವೆ. ಇದನ್ನು ಸುಬ್ಬನ ಪ್ರಸಂಗಗಳ ಸಂಪಾದನೆಯಲ್ಲಿ ಅಳವಡಿಸುವುದು ಆವಶ್ಯಕ. ಪದ್ಯಗಳಿಗೆ ಮುಳಿಯರು ಆಕರಗಳನ್ನು ಉದ್ಧರಿಸಿಲ್ಲ.
“ಏನ್ಮ್ಯಾ' ಎಂಬ ಪದಪ್ರಯೋಗಕ್ಕೆ (ಅಂಗದ ಸಂಧಾನ) ತುಳುವಿನ 'ಇಂಬ್ಯಾ', 'ಬ್ಯಾ' ಎಂಬುದರಿಂದ ಉದ್ಬೂತವಾದುದೆಂಬ ಮುಳಿಯರ ಸೂಚನೆ ಸಮರ್ಪಕವಾಗಿದೆ. (ಪುಟ 105).
ಸುಬ್ಬನ ಪದ್ಯಗಳನ್ನು ಮುಂದಿಡುವಲ್ಲಿ ಮುಳಿಯರು ಸಾಮಾನ್ಯವಾಗಿ ಕವಿತೆ, ಕಾವ್ಯಗಳನ್ನು ಪರಿಭಾವಿಸುವ ರೀತಿಯನ್ನೆ ಅನುಸರಿಸಿದ್ದಾರೆ. ಹಾಗಾಗಿ ಸರಳವಾಗಿರುವ ಈ ಪದ್ಯಗಳಿಗೆ ಹೆಚ್ಚಿನೆಡೆ ಅವರು ಯಾವದೇ ವಿವರಣೆ ವ್ಯಾಖ್ಯಾನಗಳನ್ನು ನೀಡಿಲ್ಲ. ಕೆಲವು ಅಲಂಕಾರ ಸೂಚನೆಗಳನ್ನು ಮಾತ್ರ ನೀಡಿ ಉಳಿದೆಡೆ ಪದ್ಯದ ಸೊಗಸನ್ನು ಮಾತ್ರ ಪ್ರಶಂಸಿಸಿ, ಅದರ ರಸಾಸ್ವಾದನೆಯನ್ನು ವಾಚಕರಿಗೆ ಬಿಟ್ಟಿದ್ದಾರೆ.
ಇದರ ಬದಲಾಗಿ, ಸುಬ್ಬನ ಪ್ರಸಂಗಗಳ ಸೊಬಗನ್ನು ಹೇಳುವುದಕ್ಕೆ ಪ್ರತ್ಯೇಕವಾದ ಚೌಕಟ್ಟನ್ನು ನಿರ್ಮಿಸಿಕೊಳ್ಳುವ ಕಾರ್ಯವನ್ನವರು ಮಾಡಲಿಲ್ಲ. ಅಂದರೆ ಒಂದು ಹಾಡುಗಬ್ಬದ ನೆಲೆ, ಅದನ್ನು ಪರಿಭಾವಿಸುವ ರೀತಿ ಬೇರೆ. ಪ್ರಯೋಗ, ಪ್ರಸಂಗದ ನಡೆ, ಅದರಲ್ಲಿ ಅರ್ಥಗಾರಿಕೆಗೆ ಇರುವ ಅವಕಾಶ ಇವುಗಳನ್ನು ಪರಿಶೀಲಿಸಲು ಸಂದರ್ಭ ಒದಗುತ್ತದೆ. ಈ ದೃಷ್ಟಿಗಳಿಂದ ಮುಳಿಯರು ಸುಬ್ಬನ ಕೃತಿಗಳನ್ನು ಪರಿಶೀಲಿಸಬಹುದಿತ್ತು ಎಂದು ನಮಗನಿಸ ದಿರುವುದಿಲ್ಲ.