ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
116
ಮಾರುಮಾಲೆ

ತಿಮ್ಮಪ್ಪಯ್ಯನವರು ಬರೆದ ಯಕ್ಷಗಾನ ಪ್ರಸಂಗ 'ಸೂರ್ಯಕಾಂತಿ ಕಲ್ಯಾಣ' ಇದು ಅಪ್ರಕಟಿತ. ಇದು ಅವರ ಮೊತ್ತ ಮೊದಲ ಕೃತಿ. ಇದನ್ನು ಅವರು ಪ್ರಾಯಶಃ ತಮ್ಮ ವಯಸ್ಸಿನ ಹದಿನೆಂಟನೆಯ ವರ್ಷಕ್ಕೂ ಮೊದಲೇ ಬರೆದಿರದೇಕು. 1888ರಲ್ಲಿ ಜನಿಸಿದ ಅವರು 1906ರ ವರೆಗೆ ಊರಲ್ಲಿದ್ದರು. 1906-1910ರ ತನಕ ದೇಶಾಂತರವಿದ್ದು, ಕೇರಳ, ಮೈಸೂರುಗಳಲ್ಲಿ ಅಧ್ಯಯನ ನಡೆಸಿ ಅನಂತರ 1910ರಲ್ಲಿ ಊರಿಗೆ ಮರಳಿದರು. “ಚಂದ್ರಾವಳಿ ವಿಲಾಸ' ಪ್ರಕಟವಾದದ್ದು 1913ರಲ್ಲಿ. ಅವರ ಶೈಲಿ, ಕಾವ್ಯಗುಣಗಳನ್ನು ನೋಡಿದರೆ, 'ಸೂರ್ಯಕಾಂತಿ ಕಲ್ಯಾಣ'ವನ್ನು ಅದಕ್ಕಿಂತ ಸಾಕಷ್ಟು ಹಿಂದೆಯೇ ಬರೆದಿರಬೇಕೆಂದು ಸ್ಪಷ್ಟವಾಗುತ್ತದೆ. ಹಾಗಿದ್ದರೆ ಅದು 1906ಕ್ಕೆ ಮೊದಲೇ ಬರೆದುದಾಗಿರಬೇಕು. ಚಂದ್ರಾವಳಿ ವಿಲಾಸದಲ್ಲಿ ಕಾಣುವ ಪ್ರೌಢತೆ, ವಯಸ್ಸಿನ ಬದಲಾವಣೆ ಮಾತ್ರ ಆಗಿರದೆ, ದೇಶಾಂತರ ವಾಸದ ಅಧ್ಯಯನದ ಫಲವೂ ಆಗಿದೆ. ಆ ಅವಧಿಯಲ್ಲಿ ಅವರಲ್ಲಾದ ದೊಡ್ಡ ಮಾರ್ಪಾಡು 'ಚಂದ್ರಾವಳಿ ವಿಲಾಸ'ದಲ್ಲಿ ಕಾಣುತ್ತದೆ (ಈ ವಿಚಾರ ವನ್ನು ಸೂಚಿಸಿದವರು ಮುಳಿಯ ಮಹಾಬಲ ಭಟ್ಟರು).

ಸೂರ್ಯಕಾಂತಿ ಕಲ್ಯಾಣದ ಕಥೆ 'ಶ್ರೀ ಕೃಷ್ಣ ಬೋಧಾಮೃತ' ಎಂಬ ಗ್ರಂಥದ್ದು' (ಶ್ರೀಕೃಷ್ಣ ಬೋಧಾಮೃತಸಾರ : ದೇವನಹಳ್ಳಿ ಶಂಕರಶಾಸ್ತ್ರಿ, ಟಿ. ಎನ್. ಕೃಷ್ಣಯ್ಯಶೆಟ್ಟಿ ಬೆಂಗಳೂರು), ಅದರ ಕಥೆ ಹೀಗೆ : ಪಾಟಲಿಪುತ್ರದ ರಾಜ ಸೂರ್ಯ ಕೇತುವಿನ ಮಗ ಚಂದ್ರಕೇತು ವೀರ, ವಿದ್ಯಾವಂತ, ಒಮ್ಮೆ ಬೇಟೆಗಾಗಿ ಹೋದವನು ದೇವಭೂಮಿಯನ್ನು ಪ್ರವೇಶಿಸಿ, ದೇವಸ್ತ್ರೀಯರ ಕ್ವಚಿದ್ದರ್ಶನ ಪಡೆದು, ಹಿಂದಿರುಗಿ ಬರುತ್ತ ಬೃಗು ಮುನಿಯ ಆಶ್ರಮಕ್ಕೆ ಬರುತ್ತಾನೆ. ಭೃಗು ಈತನ ಚಿತ್ತದೃಢತೆಯನ್ನು ಪರೀಕ್ಷಿಸಿ ಅವನಿಗೆ ದೇವತಾ ಸ್ತ್ರೀಯ ಜತೆ ವಿವಾಹಕ್ಕೆ ಅನುಕೂಲವಾಗುವಂತೆ ಮಾಡುವುದಾಗಿ ಭರವಸೆ ನೀಡುತ್ತಾನೆ.

ಭೃಗುವಿನ ಸೂಚನೆಯಂತೆ ಚಂದ್ರಕೇತು ಉತ್ತರ ದಿಕ್ಕಿನ ಕಾಲಭೈರವ ಗುಡಿಯನ್ನು ಪ್ರವೇಶಿಸಿ, ಬಿಲ, ಸರೋವರ, ಅರಮನೆಗಳನ್ನು ಕಂಡು