ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರಕಾಂತಿ ಕಲ್ಯಾಣ
117


ವಿಶ್ರಮಿಸಿ, ಐದು ಜನ ನಾಗಕನ್ಯೆಯರ ಜತೆ ಸಮಾಗಮ ಪಡೆದು, ಬಳಿಕ ಭ್ರಗುಶಾಪದಿಂದ ಮುದುಕಿಯಾಗಿ ಬಿದ್ದಿದ್ದ ಧೂಮಧ್ವಜೆ ಎಂಬ ರಾಕ್ಷಸಿ ಯನ್ನು ಕಾಣುವನು. ಅಲ್ಲಿಂದ ಮುಂದೆ ಈ ಚಂದ್ರಕೇತುವಿಗೆ ಸಹಾಯ ಮಾಡುವ ಈ ರಾಕ್ಷಸಿ ಅದ್ಭುತ ಶಕ್ತಿಸಂಪನ್ನೆ. ಇವಳಿಂದಲೇ ಮುಂದಣ ಕಥೆ ನಡೆಯುವುದು.

ಗಂಧರ್ವರಾಜ ಮರುತ್ತನ ಮಗಳು ಮಾಣಿಕ್ಯಪ್ರಭೆ. ಇವಳೇ ಹಿಂದೆ ಚಂದ್ರಕೇತುವನ್ನು ಕಂಡಂತೆ ಮಾತ್ರವಾಗಿ, ಬಯಸಿದ ಸುಂದರಿ, ಧೂಮ ಧ್ವಜೆಯ ಮೂಲಕ ಅವಳು ರಾಜಕುಮಾರನಲ್ಲಿಗೆ ಬರುತ್ತಾಳೆ. ಇವನೂ ಅಲ್ಲಿಗೆ ಹೋಗುತ್ತಾನೆ. ದಾಸಿಯರ ಮೂಲಕ ತಿಳಿದ ಮರುತ್ತನ ಕೋಪ, ಪಾಟಲಿಪುತ್ರಕ್ಕೆ ಮುತ್ತಿಗೆ, ಚಂದ್ರಕೇತನಿಂದ ಮರುತ್ತನ ಪರಾಭವ, ಇಂದ್ರ ಶಿವನನ್ನು ಒಡಗೊಂಡು ಕುಬೇರನ ಆಗಮನ, ಧೂಮಕೇತುವಿನ ಮಾಯಾ ಬಲದಿಂದ ಎಲ್ಲರ ಸೋಲು, ಬ್ರಹ್ಮನ ಮೂಲಕ ವಿಚಾರ ತಿಳಿದು ವಿಷ್ಣುವಿನ ಆಗಮನ, ಸಂಧಾನ, ಮಾಣಿಕ್ಯಪ್ರಭೆಯ ವಿವಾಹ, ಕಾಲಾಂತರದಲ್ಲಿ ಸಿಂದೂ ದೇಶದ ರಾಜಕುಮಾರಿ ಜತೆ ಚಂದ್ರಕೇತನ ವಿವಾಹ, ವಾರ್ಧಕ್ಯದಲ್ಲಿ, ಹಿಂದೆ ತಾನು ಪಡೆದಿದ್ದ ನಾಗಕನ್ಯೆಯರ ಬಳಿಗೆ ಹೋಗಿ, ಅವರಿಂದ ವೇದಾಂತ ಉಪದೇಶ ಪಡೆದು ಚಂದ್ರಕೇತನಿಗೆ ಮೋಕ್ಷ,

ಕೃಷ್ಣ ಬೋಧಾಮೃತವೆಂಬುದು ನಮ್ಮ ಅಷ್ಟಾದಶ ಪುರಾಣಗಳಿಗಿಂತ ಭಿನ್ನವಾದ ಕಥಾಪರಂಪರೆಗೆ ಸೇರಿದ್ದು. ಅದ್ಭುತ ಕಥೆಗಳ ಸಾಲಿನದ್ದು. ಕೆಲವಂಶಗಳಲ್ಲಿ ಬೃಹತ್‌ಕಥೆಯ ರೀತಿಯೂ ಇದೆ. ಇಲ್ಲಿನ ಕಥೆಯ ಪಾತ್ರ ಗಳನ್ನು, ಘಟನೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದರೆ ವೇದಾಂತದ ಸಾಂಕೇತಿ ಕತೆ ಇರುವುದಿದ್ದರೂ, ಮೇಲಿಂದ ಮೇಲೆ ಇವು ಪ್ರಣಯಕಥೆಗಳು, ಪ್ರಸಂಗ ರಚನೆಗೆ ಪುರಾಣವನ್ನಾಶ್ರಯಿಸದೆ, ಈ ಕಥೆಯನ್ನು ಆರಿಸಿದ್ದು ಮುಳಿಯರ ದೃಷ್ಟಿಯ ನಾವೀನ್ಯಕ್ಕೆ ಸಾಕ್ಷಿ. ಮುದ್ದಣ ಆಗಲೇ 'ರತ್ನಾವಳಿ ಕಲ್ಯಾಣ'ವನ್ನು ಬರೆದುದು ಇದಕ್ಕೆ ಪ್ರೇರಕವಾಗಿರಬಹುದು.