ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
119

ರಾಗ, ತಾಳ ಮತ್ತು ಬಂಧಗಳ ಆಯ್ಕೆ ಮತ್ತು ಈ ವೈವಿದ್ಯಗಳ ದೃಷ್ಟಿ ಯಿಂದ, ಪ್ರಸಂಗಕರ್ತನು ಆಗಲೇ ಹಿಂದಿನ ಪ್ರಸಂಗ ಸಾಹಿತ್ಯವನ್ನು ಸಾಕಷ್ಟು ಅಭ್ಯಾಸಮಾಡಿದುದು ಕಂಡುಬರುತ್ತದೆ. ಮುದ್ದಣನ ಪ್ರಸಂಗಗಳನ್ನು ವಿಶೇಷ ವಾಗಿ ನೆಚ್ಚಿಕೊಂಡಂತಿದೆ. ಬಂಧ ರಚನೆಗೆ, ಭಾವಕ್ಕೆ, ಸನ್ನಿವೇಶಕ್ಕೆ ಸಮರ್ಪಕ ವಾಗಿದ್ದು, ಆ ಪ್ರಸಂಗವನ್ನು ರಂಗಕ್ಕೆ ಬೇಕಾದ ಯಾವುದೇ ಸೇರ್ಪಡೆ ಇಲ್ಲದೆ* ಪ್ರದರ್ಶನಕ್ಕೆ ತರಬಹುದು.
ಕವಿಗೆ ಕನ್ನಡ, ಸಂಸ್ಕೃತಗಳೆರಡರಲ್ಲಿ ಒಳ್ಳೆಯ ಹಿಡಿತ, ಸಲೀಸಾದ ಪದ್ಯ ರಚನೆಗಳು ಸಿದ್ದಿಸಿದುದು ಕಾಣುತ್ತದೆ. ಪ್ರಾಸ, ಅನುಪ್ರಾಸಗಳು ಸಹಜವಾಗಿ ಬಂದಿವೆ : ಕೆಲವು ಉದಾಹರಣೆಗಳು :
ವಿಡುಕುತಿಹ ವಡದಿಯ‌ ಗಡೆಬಡೆಯೊಳ
ದಡಕಡರುತೆಡೆ ಬಿಡದೆನಡೆ ತಂದರು
....ಈಟಿ ಕಠಾರಿಯ ನಾಟಿಸಿ ಬಹುಪರಿ ಪಾಟಲಿಯಧಿಪತಿ ಲೂಟಿಯೊಳಂದು....ಮೂಲೋಕದೊಳು ಭ್ರಮವಾಳಕಿಯ ಲಲನೆಯ.... ಕಾಣೆ ಬಾಲಕಿಯರ ಸವಿಬಾಲಕಿಯ
ಈ ಪ್ರಸಂಗವನ್ನು ಬರೆಯುವ ಕಾಲಕ್ಕೆ ಜೈಮಿನಿ ಮೊದಲಾದ ಕನ್ನಡ ಕಾವ್ಯಗಳ ಅಭ್ಯಾಸ ಕವಿಗಾಗಿತ್ತು ಎಂಬುದಕ್ಕೆ ದೃಷ್ಟಾಂತಗಳು :
....ಉಡಿದು ಧರೆಗುರುಳಿರ್ದ ಕಾಲ್ಗಳಿಂ ತೋಳಳಿಂ । ಮಡಿದು ಮೈ ವರೆದಿರ್ದ ಸಾಂ ಬಾಳ ಳಿಂ । ಕಡಿದು ಮುರಿದಿರ್ದ ರಥ ಕೀಳಿಂ ಕೋಳಿ೦ । ಬಾರಳಿ೦ ಸೀಳಿಂದಾ ।।


*ಸನ್ನಿವೇಶಕ್ಕನುಸರಿಸಿ - ರಚನೆ ಇಲ್ಲದಿದ್ದರೆ, ಪದ್ಯಗಳನ್ನು ಭಾಗವತರೇ ಸೇರಿಸಿ ಆಡಿಸುವುದು ಪದ್ಧತಿ.