ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಮುಳಿಯರ ಪಾರ್ತಿಸುಬ್ಬ ಮತ್ತು ಸೂರ್ಯಕಾಂತಿ ಕಲ್ಯಾಣ
121

ಪ್ರಯೋಗಗಳನ್ನು ಮಾಡಿದುದು, ಈ ರಚನೆ ತಾರುಣ್ಯದಲ್ಲಿ ಬರೆದ ಎಳಸು ಮಾಸದ ರಚನೆ ಎಂಬುದನ್ನು ತೋರಿಸುತ್ತದೆ.

ಸಾಕಷ್ಟು ಪೌರಾಣಿಕ ಕತೆಗಳಿರುತ್ತ, ಇಂತಹ ಒಂದು ಅದ್ಭುತ ಕತೆಯನ್ನು ಆರಿಸಿಕೊಂಡುದು ವಿಶೇಷ. ಗಂಧರ್ವ, ಇಂದ್ರ, ಶಿವಾದಿಗಳು ಭೂಲೋಕದ ಮಾನವ ರಾಕ್ಷಸರೆದುರು ಸೋಲುವ, ನಾಯಕನ ವಿಕ್ರಮಕ್ಕಿಂತಲೂ, ರಾಕ್ಷಸಿ ಧೂಮಕೇತುವಿನ ಅದ್ಭುತ ಶಕ್ತಿ ವಿರಾಜಿಸುವ ಭಿನ್ನ ಪ್ರಕಾರದ ಕಥೆಯನ್ನಾರಿಸಿ ಪ್ರಸಂಗ ರಚಿಸುವುದರಿಂದ ಮುಳಿಯರು ಮಹತ್ವಗಳಿಸುತ್ತಾರೆ. ಇದು ಅವರ ದೃಷ್ಟಿಯ ನಾವೀನ್ಯವನ್ನು ಸೂಚಿಸುತ್ತದೆ. ಅವರ ಕಾವ್ಯ ಶಾಸ್ತ್ರ ಪರಿಣತಿ ಬೆಳೆದ ಹಂತದಲ್ಲಿ ಅವರಿಂದ ಇನ್ನೂ ಪ್ರಸಂಗ ರಚನೆ ಆಗುತ್ತಿದ್ದರೆ ? ಎಂಬ ಅನಿಸಿಕೆಯ ಜತೆಗೆ ಬರುತ್ತದೆ. ಈ ರಚನೆ ಮಹತ್ವದ್ದಲ್ಲ ಎಂದು ತೋರಿ ದುದರಿಂದಲೇ ಇರಬೇಕು, ಅವರು ಅದನ್ನು ಪ್ರಕಾಶಿಸುವ ಕೆಲಸಕ್ಕೆ ಕೈ ಹಚ್ಚಲಿಲ್ಲ.

ಪಾರ್ತಿಸುಬ್ಬ ಮತ್ತು ಸೂರ ಕಾಂತಿ ಕಲ್ಯಾಣ ಹೊರತು, ಅನ್ಯತ್ರ ಅವರ ಬರಹಗಳಲ್ಲಿ ಯಕ್ಷಗಾನದ ಉಲ್ಲೇಖವಾಗಲಿ, ಪ್ರಭಾವವಾಗಲಿ ವಿಶೇಷವಾಗಿ ಕಾಣದಿರುವುದೂ ಗಮನಾರ್ಹವಾಗಿದೆ.

ಆಕರ-ಸೂಚನೆ :
1. ಯಬ-ಯಕ್ಷಗಾನ ಬಯಲಾಟ : ಶಿವರಾಮ ಕಾರಂತ : ಪುತ್ತೂರು 1957, 63
2. ಪಾಯ-ಪಾರ್ತಿಸುಬ್ಬನ ಯಕ್ಷಗಾನಗಳು : ಕುಕ್ಕಿಲ ಕೃಷ್ಣ ಭಟ್ಟ ಮೈ ವಿವಿ 1975
3. ಸೂರಕಾಂತಿ ಕಲ್ಯಾಣ : ಹಸ್ತಪ್ರತಿ : ಚವರ್ಕಾಡು ಮಹಾಲಿಂಗ ಜೋಯಿಸರು ಮಾಡಿದ ಪ್ರತಿ : ಮುಳಿಯ ಮಹಾಬಲ ಭಟ್ಟರಲ್ಲಿದೆ.