ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

124

ಮಾರುಮಾಲೆ

ಗೆಯ ದಾರಿ, ಪರಂಪರೆಯೆಂಬುದು ಕೇವಲ 'ತತ್ಪೃತಿ' ಅಥವಾ ಗಿಳಿಪಾಠವಲ್ಲ (ಗಿಳಿಪಾಠದಂತಹ ಅನುಕರಣೆಯೂ, ಶ್ರೀಮಂತ ಪರಂಪರೆಯನ್ನು ಉಳಿಸಲು ಸಹಾಯ ಮಾಡುತ್ತದೆ ಅನ್ನುವುದು ನಿಜವಾದರೂ).

ಅರ್ಥಗಾರಿಕೆಯ ಬಗೆಗೆ ಈ ಸಂದರ್ಭದಲ್ಲಿ ಒಂದು ಅಂಶವನ್ನು ವಿಶೇಷವಾಗಿ ಗಮನಿಸಬೇಕಾಗಿದೆ. ಯಕ್ಷಗಾನದ ಮಾತುಗಾರಿಕೆಗೂ ಪರಂಪರೆ ಎಂಬುದು ಇದೆಯಾದರೂ, ಉಳಿದ ಅಂಗಗಳಿಗೂ ಇದಕ್ಕೂ ಈ ವಿಚಾರದಲ್ಲಿ ಬಹಳಷ್ಟು ವ್ಯತ್ಯಾಸ ಇದೆ. ಸಂಗೀತ, ಗಾನ, ನೃತ್ಯ, ವಾದ್ಯ, ವೇಷ, ತಂತ್ರ, ಇವುಗಳಿಗೂ, ಮಾತಿಗೂ ಇರುವ ಮೂಲಭೂತ ವ್ಯತ್ಯಾಸವೇ ಇದಕ್ಕೆ ಕಾರಣ. ಮಾತು ಹೆಚ್ಚು ಸಾರ್ವತ್ರಿಕವಾದದ್ದು ಮತ್ತು ಗಾನ, ವೇಷಗಳಂತೆ ವಿಶಿಷ್ಟ ಅಭ್ಯಾಸವಿಲ್ಲದೆಯೂ, ಎಲ್ಲರಿಗೂ ಒಂದು ಪ್ರಮಾಣದಲ್ಲಿ ಸಿದ್ಧಿಸುವಂತಹದು, ದಿನಬಳಕೆಯ ಮಾಧ್ಯಮವೇ ಆದುದರಿಂದ, ಅಲ್ಲದೆ ಯಕ್ಷಗಾನದ ಅಂಗಗಳ ಪೈಕಿ ಅತಿ ಹೆಚ್ಚು ಮನೋಧರ್ಮ ಅಥವಾ ಸ್ವಾತಂತ್ರ ನೀಡುವ ಮಾಧ್ಯ ಮವೂ ಇದೇ ಆದುದರಿಂದ ಇದರಲ್ಲಿ ಪ್ರಯೋಗದ ಸಾದ್ಯತೆ ಹೆಚ್ಚು ಮುಕ್ತ ಎನ್ನಬಹುದು.

“ಕಲೆಯು ಒಳಗಿನಿಂದ ಬೆಳೆಯಬೇಕು” ಎನ್ನುವ ಮಾತಿದೆ. ಅಂದರೆ, ಒಂದು ತಲೆ ತನ್ನ ಒಳಗನ್ನು ಅರಿತು, ಅದರ ಮಿತಿಯನ್ನು ತಿಳಿದು, ತಿರುಳು ಕೂಡಿ ಬೆಳೆಯಬೇಕು. ಕ್ಷಣಿಕವಾದ, ಬಾಹ್ಯ ಒತ್ತಡಗಳಿಂದ ಪ್ರೇರಣೆ ಪಡೆದು ಪರಿವರ್ತನೆಗೊಳ್ಳುವುದಲ್ಲ ಎಂದೂ, ತನ್ನಲ್ಲಿರುವ ಶಕ್ತಿಯನ್ನು ಸರಿ ಯಾದ ದಿಕ್ಕಿನಲ್ಲಿ, ಸಶಕ್ತವಾಗಿ ವಿಸ್ತರಿಸಬೇಕೆಂದೂ ಈ ಮಾತನ್ನು ಅರ್ಥವಿಸ ಬಹುದು. ಹೀಗೆ ಬೆಳೆಯ ಬೇಕಾದರೆ, ಪರಂಪರೆಯ ಸೂಕ್ತವಾದ ಗ್ರಹಿಕೆ ಅದರ ಮೂಲಸ್ರೋತವಾಗುತ್ತದೆ.
ಅರ್ಥಗಾರಿಕೆಯನ್ನು ಪರಂಪರೆ ಮತ್ತು ಪ್ರಯೋಗವೆಂಬ ನೆಲೆಗಳಲ್ಲಿ ಪರಿಶೀಲಿಸುವಾಗ ಈ ಅಂಶಗಳನ್ನು ಗಣಿಸಬೇಕು :