ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
ಕೆಲವು ಟಿಪ್ಪಣಿಗಳು
ಸಾಂಪ್ರದಾಯಿಕವೂ, ಶೈಲಿಬದ್ಧವೂ ಆದ ರೂಪವುಳ್ಳ ಒಂದು ಕಲೆಯ
ಒಟ್ಟು ಸಂದರ್ಭದಲ್ಲಿ, ಅದರ ಅಂಗವೊಂದನ್ನೇ ಪ್ರತ್ಯೇಕಿಸಿ ನೋಡುವಾಗಲೂ,
ಅದರ ವಿವೇಚನೆಯಲ್ಲಿ ಆ ಸಮಗ್ರ ಸಂದರ್ಭದ ಹಿನ್ನೆಲೆಯ ಆವರಣದೊಳಗೇ
ಗ್ರಹಿಸಬೇಕಷ್ಟೆ. ಹಿಮ್ಮೇಳ, ನೃತ್ಯ, ವಾದ್ಯ, ಪ್ರಸಂಗ ಸಾಹಿತ್ಯ, ಯಕ್ಷ
ಗಾನದ ರಂಗಪದ್ಧತಿ, ಶೈಲಿ-ಇವುಗಳ ಜತೆಯಲ್ಲಿರುವ ಅದರ ಮಾತುಗಾರಿಕೆಯ
(ಅಥವಾ ಅರ್ಥ ಮಾತಾಡುವಿಕೆ, ಅರ್ಥಗಾರಿಕೆ) ಪರಂಪರೆ ಮತ್ತು ಪ್ರಯೋಗ
(experiment) ಗಳ ಕುರಿತ ಕೆಲವು ಅಂಶಗಳನ್ನು ಆ ನೆಲೆಯಲ್ಲಿ, ಇಲ್ಲಿ
ವಿವೇಚಿಸಲು ಯತ್ನಿಸಿದೆ.
ಪರಂಪರೆಯೆಂದರೆ, ಹಿಂದಿನಿಂದ ನಡೆದು ಬಂದ ಕ್ರಮ, ಹಳೆಪದ್ಧತಿ
ಎಂದು ಸಾಮಾನ್ಯವಾಗಿ ಅರ್ಥ. ಈ ಪರಂಪರೆಯೆಂಬುದೇ, ಬಹುಕಾಲದ
ಬೆಳವಣಿಗೆಗಳ ಮೊತ್ತ. ಅಂದರೆ, ಪರಂಪರೆಯೆಂಬುದೇ ಸ್ವತಃ ಹಿಂದಿನ
ಹಲವು ಪ್ರಯೋಗಾತ್ಮಕ ವಿಧಾನಗಳ ಫಲವಾಗಿರುವಂತಹದು. ಇಲ್ಲಿ
ಪ್ರಯೋಗವೆಂದರೆ ನವೀನ ಪ್ರಯೋಗ-experiment-ಎಂಬ ಅರ್ಥದಲ್ಲಿ
ಹೇಳಿದೆ. ಒಳ್ಳೆಯ ಪ್ರಯೋಗವೆಂಬುದು, ಪರಂಪರೆಯನ್ನು ಆರ್ಥಯಿಸಿ
ಕೊಂಡು, ಮೂಡಿ ಬರುತ್ತದೆ. ಕ್ರಮಶಃ ಅದು ಪರಂಪರೆಯ ಭಾಗವಾಗಿ
ಮುಂದುವರಿಕೆಯಾಗಿರುತ್ತದೆ. ಹೀಗೆ ಪರಂಪರೆ ಪ್ರಯೋಗದ ಸಾಧ್ಯತೆಗಳನ್ನು
ತನ್ನೊಳಗೆ ಹೊಂದಿರುತ್ತದೆ. ಅವು ಸಂಬಂಧಪಟ್ಟ ಮಾಧ್ಯಮಕ್ಕೂ, ಅದರ
ರೂಪಕ್ಕೂ (Form) ಹೊಂದಿಕೆಯಾಗುವುದೇ ಅವುಗಳ ಸಾರ್ಥಕ್ಯದ ಒಂದು
ಮುಖ್ಯ ಲಕ್ಷಣ. ಅಂತಹ ಲಕ್ಷಣವುಳ್ಳ ಗತಿಶೀಲತೆ ಪರಂಪರೆಯ, ಬೆಳವಣಿ
ಶ್ರೀ ಇಡಗುಂಜಿ ಮಹಾ ಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ಇವರು ಸಂಪುಟಿಸಿದ "ಯಕ್ಷಗಾನ: ಪರಂಪರೆ-ಪ್ರಯೋಗ" ಗೋಷ್ಠಿಯಲ್ಲಿ (ಡಿಸೆಂಬರ್ 8, 1987) ಮಾಡಿದ ಉಪನ್ಯಾಸದ ಲೇಖನ ರೂಪ.