ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

126

ಮಾರುಮಾಲೆ

ರಾಜ್ಯದಲ್ಲಿ ಪಾಲನ್ನು ಕೇಳುವಂಥವರಾದರು. ಭ್ರಷ್ಟ ಪಾಂಚಾಲಿಯ ಶಾಲೆ ಯನ್ನು ನಾವು ಸುಲಿದರೂ ಮರ್ಯಾದೆ ಹೋಗಲಿಲ್ಲವೆನ್ನುತ್ತಾರಂತೆ. ಕೆಟ್ಟ ಬೀಜವು ಸುಟ್ಟರೂ ಮೊಳಕೆ ಬರುವಂತೆ ಕಟ್ಟಕಡೆಗೂ ಪಾಂಡವರು ಉಳಿದು ಬಿಟ್ಟರು. ಇದೀಗ ಬೇಹಿನ ಚಾರರು ತಿಳಿಸಲ್ಪಟ್ಟ ವರ್ತಮಾನ ಪ್ರಕಾರ ಮಲ್ಲ ಕೀಚಕನನ್ನು ಖುಲ್ಲ ಭೀಮನು ಸೊಲ್ಲಡಗಿಸಿದನೆಂಬುದನ್ನರಿತೆವು ಬಲ್ಲಿರೋ.

3. ಕೃಷ್ಣನ ಪೀಠಿಕೆ : ಅಯ್ಯಾ,ದುಷ್ಟರ ಹಾವಳಿಯಿಂದ ಭೂಮಿಯ ಭಾರವು ಹೆಚ್ಚಾಗಿದೆಯೆಂಬ ಭೂದೇವಿಯ ಮೊರೆಯನ್ನು ಕೇಳಿ ದಂಥವನಾಗಿ ದೇವಕ್ಯಾಮ್ಮನವರ ಉದರದಲ್ಲಿ ಅಷ್ಟಮ ಪುತ್ರನಾಗಿ, ಅಷ್ಟಮಾವತಾರಿಯಾಗಿ ಧರೆಗಿಳಿದು, ಕಂಸ, ಕೇಶಿ, ವಾತ, ಪ್ರಲಂಬ, ಚಾಣೂರ, ಮುರನರಕಾದಿಗಳನ್ನು ಮರ್ದಿಸಿದೆ. ಇದೀಗ ಶರಧಿಯ ಮಧ್ಯದಲ್ಲಿ ಪುರ ವನ್ನು ನಿರ್ಮಿಸಿ ಹರುಷದಿಂದ ಒಡ್ಡೋಲಗವನ್ನು ಕೊಟ್ಟಿದ್ದೇನೆ. ಬಲ್ಲಿರೋ (2, 3 ಕೇಳಿದ ನೆನಪಿನಿಂದ)

ಹಿಂದಿನ ಅರ್ಥಗಾರಿಕೆಯ ಭಾಷೆಯಲ್ಲಿ, ಶಬ್ದಾಲಂಕಾರಗಳಿಗೆ ಪ್ರಾಶಸ್ತ್ಯ ವಿದ್ದಂತೆ ತೋರುವುದು. ಒಬ್ಬರಿಂದ ಒಬ್ಬರು ಕೇಳುತ್ತಿದ್ದ ಮತ್ತು ಆಗ ಲಭ್ಯವಿದ್ದ ಗದ್ಯಸಾಹಿತ್ಯದ ರೂಪವು ಅರ್ಥಗಾರಿಕೆಯಲ್ಲಿ ಕಾಣುತ್ತಿತ್ತು. ಅರ್ಥಧಾರಿಯ ಸಾಹಿತ್ಯಾಭ್ಯಾಸವು ಮಿತವಾಗಿದ್ದುದರಿಂದ ಪದ್ಯದ ಅನುವಾದ ರೂಪದ ಅರ್ಥಗಾರಿಕೆಯೇ ಹೆಚ್ಚಾಗಿತ್ತು.

ಪದ್ಯ ಮತ್ತು ಅರ್ಥಗಾರಿಕೆಯ ಸಂಬಂಧವು, ಹಿಂದೆ ಹೆಚ್ಚು ನಿಕಟ ವಾಗಿತ್ತು. ಪ್ರಸಂಗದ ಪದ್ಯಗಳ ಅರ್ಥವನ್ನು ಸ್ಪುಟವಾಗಿ ಹೇಳುವುದು ಅರ್ಥ ಧಾರಿಯ ಲಕ್ಷ್ಯವಾಗಿತ್ತು. ಒಂದು ಉದಾಹರಣೆಯನ್ನು ನೋಡಬಹುದು :

ಪದ್ಯ :ಎಲವೋ ಸೂತನ ಮಗನೆ ನೀ ಕಲಹದೊಳತಿ ಸಹಸಿಗನೆ
       ತಲೆಯನು ನೀಗಲಿಕಹುದೂ ಮಾರ್ಮಲೆತರೆ ಕಾಣಲು
                       ಬಹುದೂ||