ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
127

ಅರ್ಥ : ಎಲವೆಲವೋ ಸೂತಜಾತನಾದ ಕರ್ಣ, ಹೀನಕುಲದವನಾದ ನೀನು ಪಟುಭಟರ ಕಾಳಗದ ಕಣದ ದೋರ್ದಂಡ ವಿಕ್ರಮದ ಹೋರಾಟದಲ್ಲಿ ಸಾಹಸಿಗನೆ, ವೀರ ಕ್ಷತ್ರಿಯರ ಕಾಳಗಕ್ಕೆ ತಕ್ಕವನಲ್ಲ ನೀನು. ಚತುರ್ದಶ ಭುವನ ವಿಖ್ಯಾತ ಪರಾಕ್ರಮಿಯಾದ ಈ ಪಾರ್ಥನ ಮುಂದೆ ಮಲೆತು ನಿಂತರೆ ನಿನ್ನ ರುಂಡವನ್ನು ನೀಗಬೇಕಾದೀತು ಜೋಕೆ,

ಈಗಲಾದರೆ, ಅರ್ಜುನನ ಅರ್ಥಧಾರಿ, ಸೂತ, ಸೂತತ್ವ ಸಹಸಿಗ ಇವು ಗಳನ್ನು ವಿಸ್ತರಿಸಿ, ಕರ್ಣನ ಬದುಕನ್ನು ಅದರಲ್ಲಿ ಧ್ವನಿಸಿ, ತನ್ನ ವಿಕ್ರಮದ ವಿಸ್ತಾರವನ್ನು ಕರ್ಣನನ್ನು ಹೋಲಿಸಿ ಮಾತಾಡುತ್ತಾನೆ. ಪದ್ಯ ಅರ್ಥಗಳ ಸಂಬಂಧ ದೂರ' ವಾಗಿದೆ. ಪದ್ಯವನ್ನು ನಿಮಿತ್ತವಾಗಿಸಿ, ಮಾತುಗಾರಿಕೆ ಹೆಚ್ಚು ಹೆಚ್ಚು ಸ್ವತಂತ್ರವಾಗಿದೆ. ಅರ್ಥಾತ್ ಆಶುಭಾಷಣದ ಸ್ವತಂತ್ರ್ಯವನು ಅರ್ಥವತ್ತಾಗಿ ಬೆಳೆಸಿ ಮಾತುಗಾರಿಕೆ ಬೆಳವಣಿಗೆ ಸಾಧಿಸಿದೆ.

ಪದ್ಯದ ಶಬ್ದಗಳಲ್ಲಿ ಇಲ್ಲದ, ಆದರೆ ವಸ್ತುವಿನಲ್ಲಿ ಇರುವ ಅಂಶ ಗಳನ್ನು ಸ್ವೀಕರಿಸಿ, ಅರ್ಥಾತ್ ಬಗೆದು ನೋಡಿ, ಸ್ವಂತ ಕಲ್ಪನೆಯ 'ಅರ್ಥ' ಗಳನ್ನು ಅದಕ್ಕೆ ನೀಡುತ್ತ ಅರ್ಥಗಾರಿಕೆ ಬೆಳೆದು ಬಂದಿದ್ದು, ಈ ಬೆಳವಣಿಗೆ ಕನ್ನಡ ವಾಙ್ಮಯ ಪ್ರಪಂಚದ ಉನ್ನತ ಸಿದ್ಧಿಗಳಲ್ಲಿ ಒಂದಾಗಿ ಗಣನೆಗೊಳ್ಳುವ ಅರ್ಹತೆ ಪಡೆದಿದೆ.

ಪಾತ್ರದ ಪ್ರವೇಶದಲ್ಲಿ ಆಡುವ ಪೀಠಿಕೆ ಎಂಬ ಸ್ವಗತ ಪಾತ್ರ ಪರಿಚಯ ಪಾತ್ರದ ಸ್ಥಾಪನೆಯ ಒಂದು ಒಳ್ಳೆಯ ಅವಕಾಶ, ಸಾಂಪ್ರದಾಯಿಕ ಕ್ರಮ ದಲ್ಲಿ ಪೀಠಿಕೆಯೆಂಬುದು ಮುಖ್ಯವಾಗಿ, ಆವರೆಗಿನ್ನು ಕತೆಯನ ಆ ಆ ಪಾತ್ರದ ನೆಲೆಯಲ್ಲಿ ಹೇಳುವುದಾಗಿತ್ತು. ರಾಮನ ಪಾತ್ರವಾದರೆ ಅಲ್ಲಿಯವರೆಗಿನ ರಾಮಾಯಣದ ಕತೆ, ಕೃಷ್ಣನಾದರೆ ಅವತಾರ ವಿಷಯ ಮತ್ತು ಲೋಕೋ ದ್ದಾರ ಕಾರ್ಯಗಳು, ಸ್ತ್ರೀಪಾತ್ರಗಳಾದರೆ ಹೆಣ್ಣನದ ಸಾರ್ಥಕ್ಯ, ಪಾತಿವ್ರತ್ಯ ವಿಚಾರ-ಈ ವಿಷಯಗಳು ಮುಖ್ಯವಾಗಿ ಬರುವುದು ಕ್ರಮ.