ವಿಷಯಕ್ಕೆ ಹೋಗು

ಪುಟ:ಮಾರುಮಾಲೆ.pdf/೧೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಅರ್ಥಗಾರಿಕೆ : ಪರಂಪರೆ ಮತ್ತು ಪ್ರಯೋಗ
131

ಪದ್ಯಗಳನ್ನು ಹೀಗೆ ಆರಿಸುವಾಗ, (ಅಂದರೆ ದೊಡ್ಡ ಕೂಟಗಳೆನ್ನುವ `ಪ್ರಮುಖ ತಾಳಮದ್ದಲೆಗಳಲ್ಲಿ) ಮಾತುಗಾರಿಕೆಗೆ ಅವಕಾಶವಿರುವ ಪದ್ಯ ಗಳನ್ನಷ್ಟೇ ಆರಿಸಿಕೊಳ್ಳುವುದು,ತೀರ ಮಿತಸಂಖ್ಯೆಯ ಪದ್ಯಗಳನ್ನಷ್ಟೆ ಆರಿಸುವುದೂ ಒಂದು ಪದ್ಧತಿಯಾಗಿ, 1950-1970ರ ಅವಧಿಯಲ್ಲಿ - ಬಳಕೆಗೆ ಬಂದಿತು. - ಈ ಪದ್ಧತಿಯಂತೆ, ಸುಧನ್ವ ಕಾಳಗದ ಪ್ರಭಾವತಿಯ - ಪ್ರವೇಶದ 'ಪದ್ಯ, (ಸತಿ ಶಿರೋಮಣಿ ಪ್ರಭಾವತಿ ಸೊಬಗಿನಲಿ) ಕೃಷ್ಣನ ಪ್ರವೇಶದ ಪದ್ಯ (ಬಂದ ತತ್‌ಕ್ಷಣದೊಳಲ್ಲಿಗೆ) ಭೀಷ್ಮಾರ್ಜುನದ ಭೀಷ್ಮ- - ಅರ್ಜುನರ ಸಂವಾದದ ಹತ್ತಾರು ಪದ್ಯಗಳು, ವಾಲಿವಧೆಯ ಹನುಮಂತನ ಕೆಲವು ಪದ್ಯಗಳು (ಭಾನುನಂದನ/ವಾನರೇಶ್ವರ ಇತ್ಯಾದಿ) ಕರ್ಣಪರ್ವ ಪ್ರಸಂಗದ ಕರ್ಣಾರ್ಜುನರ ಎರಡನೆಯ, ಮೂರನೆಯ ಯುದ್ಧದ ಪದ್ಯಗಳು- ಮುಂತಾದುವುಗಳಿಗೆ ಸ್ಥಾನವಿಲ್ಲ. ಇದು ತಾಳಮದ್ದಲೆಯೂ ಒಂದು ರಂಗ ಭೂಮಿ' ಎಂಬ ತಿಳುವಳಿಕೆ ಮರೆಯಾದುದರ ಪ್ರಭಾವ, ಕಥೆ ಸಾಗುವ ಹಿಮ್ಮೇಳದ ಸೊಗಸಿಗಾಗಿ ಇರುವ ಪದ್ಯಗಳೂ ಅವಶ್ಯ. ಇಲ್ಲಿ ಪುನಃ ಸಂಪ್ರದಾಯವನ್ನು ಅಂಗೀಕರಿಸಿ ಅಳವಡಿಸುವುದೇ ಒಂದು ಪ್ರಯೋಗ ಆಗಬಹುದು. ಇತ್ತೀಚೆಗೆ, ವಿಶೇಷತಃ ಈ ಲೇಖಕನ ಪ್ರಯತ್ನದಿಂದ, ಪದ್ಯಗಳ ಆರಿಸುವಿಕೆ, ಅಳವಡಿಕೆಗಳಲ್ಲಿ ಹೆಚ್ಚು ಪದ್ಯಗಳಿಗೆ ಸ್ಥಾನ ದೊರೆತಿದೆ, ಮಾತ್ರವಲ್ಲ ಅಮುಖ್ಯವೆಂದೆಣಿಸಲಾಗಿದ್ದ ಪದ್ಯಗಳೂ ಪುನಃ ಬಳಕೆಗೆ ಬಂದಿವೆ. ಉದಾಹರಣೆಗೆ ಕೃಷ್ಣ ಸಂಧಾನದಲ್ಲಿ (ದೇವೀದಾಸಕವಿ) ದುರ್ಯೋಧನನು, ಬಲರಾಮನ ಆಶ್ವಾಸನೆಗೆ ಪ್ರತಿಕ್ರಿಯೆಯಾಗಿ, ತನ್ನ ಸಂದೇಹಗಳನ್ನು ಮುಂದಿಡುವ ಈ ಪದ್ಯಗಳನ್ನು ನೋಡಿ :

1. ಹಲಧರನೆಂದುದ ಕೇಳಿ 1 ಕುರು ಕುಲಪತಿ ಸಂಶಯತಾಳಿ
ಬಲರಾಮನೊಳರುಹಿದನು । ಮನ | ವೊಲಿಸುತ ಕೌರವತಾನು ।।
2.ನಿಮ್ಮಯ ನುಡಿಯನು ಕೇಳಿ ।ನಾ। ಧಿಮ್ಮನೆ ಬರೆ ಮುದತಾಳಿ।
ತಮ್ಮನ ಬಳವಿಲಿ ಶಚಿಯ ಪತಿ ಮೊಮ್ಮನಿಗಿತ್ತಿರೆ ಸಂತೆಯ।

-ಇವುಗಳಲ್ಲಿ ಒಂದನೆಯ ಪದ್ಯದಲ್ಲಿ ಅರ್ಥಗಾರಿಕೆಗೆ ವಿಷಯವೇನೂ ಇಲ್ಲವೆಂಬುದರಿಂದ, ನೇರವಾಗಿ ಎರಡನೇ ಪದ್ಯವನ್ನೇ ಎತ್ತಿಕೊಳ್ಳುವ ರೂಢಿ